ಅಕ್ರಮವಾಗಿ ಜಾನುವಾರುಗಳ ಸಾಗಾಟ: ಮೂಡುಬಿದಿರೆ ಪೊಲೀಸರಿಂದ ರಕ್ಷಣೆ

ಅಕ್ರಮವಾಗಿ ಜಾನುವಾರುಗಳ ಸಾಗಾಟ: ಮೂಡುಬಿದಿರೆ ಪೊಲೀಸರಿಂದ ರಕ್ಷಣೆ


ಮೂಡುಬಿದಿರೆ: ಕಾಕ೯ಳದಿಂದ ಮೂಡುಬಿದಿರೆ ಕಡೆಗೆ  ಜಾನುವಾರುಗಳನ್ನು ತುಂಬಿಸಿಕೊಂಡು ಬರುತ್ತಿದ್ದ ಪಿಕಫ್ ಟೆಂಪೋ ಸಹಿತ ಇಬ್ಬರನ್ನು  ಮೂಡುಬಿದಿರೆ ಪೊಲೀಸರು ಭಾನುವಾರ ವಶಕ್ಕೆ ಪಡೆದುಕೊಂಡಿದ್ದಾರೆ. 

ಕಾಕ೯ಳದ ಜಾಕ್ವೆಲಿನ್ ಮತ್ತು ಜಾಕ್ಸನ್ ಎಂಬವರು ಪಿಕಫ್ ವಾಹನದಲ್ಲಿ ಅನಧಿಕೃತವಾಗಿ ಎರಡು ಕೋಣಗಳು ಮತ್ತು ಒಂದು ಕರುವನ್ನು ತುಂಬಿಸಿಕೊಂಡು ಬರುತ್ತಿರುವ  ಬಗ್ಗೆ ಮೂಡುಬಿದಿರೆ ಪೊಲೀಸರು ಖಚಿತ ಮಾಹಿತಿಯ ಮೇರೆಗೆ ಆಲಂಗಾರು ಅಂಡರ್  ವಾಸ್ ಬಳಿ ವಾಹನವನ್ನು ನಿಲ್ಲಿಸಿ ತನಿಖೆ ನಡೆಸಿದಾಗ ಜಾನುವಾರುಗಳು ಇರುವುದು ಕಂಡು ಬಂದಿದೆ. 

ಯಾವುದೇ ಪರವಾನಿಗೆ ಇಲ್ಲದೆ ಜಾನುವಾರುಗಳನ್ನು ಸಾಗಿಸುತ್ತಿರುವುದರಿಂದ ಜಾನುವಾರುಗಳನ್ನು ಮತ್ತು ವಾಹನದಲ್ಲಿದ್ದ ಇಬ್ಬರು ವ್ಯಕ್ತಿಗಳನ್ನು ಮೂಡುಬಿದಿರೆ ಪೊಲೀಸ್ ನಿರೀಕ್ಷಕ ರಾಜೇಂದ್ರ ಅವರು ವಶಕ್ಕೆ ಪಡೆದುಕೊಂಡು ತನಿಖೆ ಆರಂಭಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article