ಮೂಡುಬಿದಿರೆ: ಪಡುಮಾನಾ೯ಡಿನಲ್ಲಿ ಗಾಳಿ ಮಳೆಗೆ ಧರೆಗುರುಳಿದ ಅಡಿಕೆ ಮರಗಳು, ಮನೆಗಳಿಗೆ ಹಾನಿ

ಮೂಡುಬಿದಿರೆ: ಪಡುಮಾನಾ೯ಡಿನಲ್ಲಿ ಗಾಳಿ ಮಳೆಗೆ ಧರೆಗುರುಳಿದ ಅಡಿಕೆ ಮರಗಳು, ಮನೆಗಳಿಗೆ ಹಾನಿ


ಮೂಡುಬಿದಿರೆ: ತಾಲೂಕಿನ ಪಡುಮಾನಾ೯ಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಅಮನಬೆಟ್ಟಿನಲ್ಲಿ ಶುಕ್ರವಾರ ಸಂಜೆ ಬೀಸಿದ  ಗಾಳಿ ಮಳೆಗೆ ಮನೆಗಳಿಗೆ, ಕೃಷಿ ತೋಟಗಳಿಗೆ ಅಪಾರ ಹಾನಿಯುಂಟಾಗಿದೆ.


ಗ್ರಾಮದ ಅಸ್ರಣ್ಣರಾದ ಅನಂತ ಅಸ್ರಣ್ಣರವರ ಮನೆಯ ತೋಟದಲ್ಲಿ ಅಪಾರ ಪ್ರಮಾಣದ ತೆಂಗು, ಕಂಗು ಗಾಳಿಗೆ ಧರೆಗುರುಳಿದೆ. 


ಪಂಚಾಯತ್ ನ ಮಾಜಿ ಅಧ್ಯಕ್ಷೆ ಸಂಜೀವಿ ಪೂಜಾರಿ ಅವರ ಮನೆಯ ಮಾಡು ಹಾನಿಯಾಗಿದೆ. ಮುರಗೋಳಿ ಪ್ರದೇಶದಲ್ಲಿ ಮರ ಉರುಳಿ ಬಿದ್ದು ವಿದ್ಯುತ್ ಕಂಬ ಹಾನಿಗೊಳಗಾಗಿದೆ.


ಈ ಪರಿಸರದಲ್ಲಿ ಬೇರೆ ಬೇರೆ ಕಡೆ ಕೃಷಿ, ಮನೆ, ಕಟ್ಟಡಗಳಿಗೆ ಹಾನಿಯುಂಟಾಗಿದೆ.

ವಿಷಯ ತಿಳಿದ ಪಂಚಾಯತ್ ನ ಮಾಜಿ ಸದಸ್ಯ ರಮೇಶ್ ಶೆಟ್ಟಿ ಅವರು ಸಂಬಂಧಿತ ಇಲಾಖೆಗಳಿಗೆ ಮಾಹಿತಿ ನೀಡಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಲ್ಲಿ ಮಾಹಿತಿ ನೀಡಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article