ಬನ್ನಡ್ಕ: ಖಾಸಗಿ ಬಸ್ ಪಲ್ಟಿ, ಹಲವರಿಗೆ ಗಾಯ

ಬನ್ನಡ್ಕ: ಖಾಸಗಿ ಬಸ್ ಪಲ್ಟಿ, ಹಲವರಿಗೆ ಗಾಯ


ಮೂಡುಬಿದಿರೆ: ಕಾರ್ಕಳದಿಂದ ಮಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ಸೊಂದು ಶನಿವಾರ ಸಂಜೆ ಬನ್ನಡ್ಕ ಸೋನ್ಸ್ ಫಾರ್ಮ್ ನ ಅಮನೊಟ್ಟು ಕ್ರಾಸ್ ಮುಂಭಾಗದಲ್ಲಿ ಪಲ್ಟಿಯಾಗಿ ಹಲವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.


ಇದೇ ಸಂದಭ೯ದಲ್ಲಿ ಮೂಡುಬಿದಿರೆ ಕಡೆಯಿಂದ ಕಾಕ೯ಳ ಕಡೆಗೆ ತೆರಳುತ್ತಿದ್ದ ದ್ವಿಚಕ್ರ ವಾಹನ ಮತ್ತು ಕಾರನ್ನು ರಕ್ಷಿಸಲು ಹೋಗಿ ಬಸ್ ಪಲ್ಟಿಯಾಗಿದ್ದು ದ್ವಿಚಕ್ರ ವಾಹನದ ಸವಾರ ಸಣ್ಣಪುಟ್ಟ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. 


ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 


ಬನ್ನಡ್ಕ ಪರಿಸರದಲ್ಲಿ ಈಗಾಗಲೇ ಹಲವು ಅಪಘಾತ ಗಳು ಸಂಭವಿಸಿದ್ದು ಪ್ರಾಣ ಹಾನಿಗಳಾಗಿವೆ.







Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article