ಗಂಟಾಲ್ ಕಟ್ಟೆಯಲ್ಲಿ ದ್ವಿಚಕ್ರ -ಆಲ್ಟೋ ಕಾರು ಢಿಕ್ಕಿ: ಗಾಯ
Monday, May 11, 2026
ಮೂಡುಬಿದಿರೆ: ಪುರಸಭಾ ವ್ಯಾಪ್ತಿಯ ಗಂಟಾಲ್ ಕಟ್ಟೆಯಲ್ಲಿ ಸೋಮವಾರ ರಾತ್ರಿ ದ್ವಿಚಕ್ರ ವಾಹನ ಮತ್ತು ಆಲ್ಟೋ ಕಾರು ಮಧ್ಯೆ ಅಪಘಾತ ಸಂಭವಿಸಿದ್ದು ದ್ವಿಚಕ್ರ ವಾಹನದ ಸಹ ಸವಾರನ ಕಾಲಿಗೆ ಗಂಭೀರ ಗಾಯಲಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಹೊಸಂಗಡಿಯ ನಿವಾಸಿಗಳಾದ ದ್ವಿಚಕ್ರ ವಾಹನ ಸವಾರರು ಮೂಡುಬಿದಿರೆಯಿಂದ ಹೊಸಂಗಡಿ ಕಡೆಗೆ ತೆರಳುತ್ತಿದ್ದಾಗ, ವೇಣೂರು ಕಡೆಯಿಂದ ಮೂಡುಬಿದಿರೆ ಕಡೆಗೆ ತೆರಳುತ್ತಿದ್ದ ಆಲ್ಟೋ ಕಾರು ಗಂಟಾಲ್ ಕಟ್ಟೆ ಲೋಬೋ ಕಟ್ಟೆ ಬಳಿ ಡಿಕ್ಕಿ ಹೊಡೆದಿದೆ.
ಗಾಯಗೊಂಡವರನ್ನು ಡಿಕ್ಕಿ ಹೊಡೆದ ಕಾರಿನಲ್ಲಿಯೇ ಆಸ್ಪತ್ರೆಗೆ ಸಾಗಿಸಲಾಗಿದೆ.