ಮೂಡುಬಿದಿರೆ ಮೂಲದ ಯುವಕ ದಮ್ಮಾಮ್‌ನಲ್ಲಿ ಸಾವು
Sunday, May 3, 2026
ಮೂಡುಬಿದಿರೆ: ಇಲ್ಲಿನ ಕೋಟೆಬಾಗಿಲು ನಿವಾಸಿ ರಿಯಾಝ್ ಎಂಬವರ ಪುತ್ರ ರಯ್ಯಾನ್ (16) ಎಂಬವರು ದಮ್ಮಾಮ್‌ನಲ್ಲಿ ಬಾಸ್ಕೆಟ್ ಬಾಲ್ ಪಂದ್ಯಾಟದ ವೇಳೆ ಕುಸಿದು ಬಿದ್ದು ಮೃತಪಟ್ಟಿದ್ದಾರೆ.
ಮೂಡುಬಿದಿರೆಯ ರಿಯಾಝ್ ಕುಟುಂಬ ಕೋಟೆಬಾಗಿಲಿನವರಾಗಿದ್ದು ಪ್ರಸ್ತುತ ದಮ್ಮಾಮ್‌ನಲ್ಲಿ ವಾಸವಾಗಿದ್ದಾರೆ. ಅಲ್ಲೇ ವಿದ್ಯಾಭ್ಯಾಸ ಮಾಡುತ್ತಿದ್ದ ರಯ್ಯಾನ್ ಬಾಸ್ಕೆಟ್ ಬಾಲ್ ಫೈನಲ್ ಪಂದ್ಯದ ವೇಳೆ ಕುಸಿದು ಬಿದ್ದು ಮೃತಪಟ್ಟಿದ್ದಾನೆಂದು ತಿಳಿದು ಬಂದಿದೆ.
ಮೃತನ ಅಂತ್ಯಕ್ರಿಯೆ ದಮ್ಮಾಮ್‌ನಲ್ಲೇ ನಡೆದಿದೆ.