2028 ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 150 ಸೀಟು ಗೆಲ್ಲಲಿದೆ: ಅಶೋಕ್ ರೈ
ಪುತ್ತೂರು: ಕಾಂಗ್ರೆಸ್ ಆಡಳಿತದಿಂದ ಜನ ಸಾಮಾನ್ಯರಿಗೆ ನೆಮ್ಮದಿ ಸಿಗುತ್ತದೆ, ಕಾಂಗ್ರೆಸ್ ಕೊಟ್ಟ ಭರವಸೆಯನ್ನು ಈಡೇರಿಸುತ್ತದೆ, ಕಾಂಗ್ರೆಸ್ ನಿಂದ ಮಾತ್ರ ಅಭಿವೃದ್ದಿ ಸಾಧ್ಯ ಎಂಬ ಕಾರಣಕ್ಕೆ ಕರ್ನಾಟಕ ಉಪಚುನಾವಣೆ ಮತ್ತು ಕೇರಳ ವಿಧಾನಸಭಾ ಚುನಾವಣೆಯಲ್ಲಿ ಜನರು ಕಾಂಗ್ರೆಸ್‌ಗೆ ಆಶೀರ್ವಾದ ನೀಡಿದ್ದಾರೆ, ಮುಂದಿನ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 150 ಸೀಟು ಪಡೆದು ಅಧಿಕಾರಕ್ಕೆ ಬರಲಿದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ಪ್ರತಿಕ್ರಿಯಿಸಿದ್ದಾರೆ.
ಕರ್ನಾಟಕ ಉಪಚುನಾವಣಾ ಪಲಿತಾಂಶದ ಬಗ್ಗೆ ಮಾತನಾಡಿದ ಶಾಸಕರು‘ ಕರ್ನಾಟಕದ ಕಾಂಗ್ರೆಸ್ ಸರಕಾರದ ನೀಡಿದ ಪಂಚ ಗ್ಯಾರಂಟಿ ಇಲ್ಲಿ ಕೆಲಸ ಮಾಡಿದೆ, ಕಾಂಗ್ರೆಸ್ ಸರಕಾರದಿಂದ ಮಾತ್ರ ಅಭಿವೃದ್ದಿ ಸಾಧ್ಯ ಎಂದು ಪಕ್ಷ ಬೇಧ ಮರೆತು ಜನ ವೋಟು ಹಾಕಿದ್ದಾರೆ. ಬಾಗಲಕೋಟೆಯಲ್ಲಿ ಕಳೆದ ಬಾರಿ 6 ಸಾವಿರ ವೋಟಿನ ಅಂತರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದರು ಆದರೆ ಈ ಬಾರಿ 26 ಸವಿರ ಮತಗಳ ಅಂತರದಿಂದ ಗೆದ್ದಿರುವುದು ರಾಜ್ಯ ಸರಕಾರ ಜನಪರ ಯೋಜನೆಗಳೇ ಕಾರಣವಾಗಿದೆ. ಅತ್ಯಂತ ತರ್ಕದ ಕ್ಷೇತ್ರವಾಗಿದ್ದ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲೂ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ. ಇದು 20028ರ ಚುನಾವಣೆಯ ದಿಕ್ಸೂಚಿಯಾಗಿದೆ , ಮುಂದೇ ನಾವೇ ಕರ್ನಾಟಕದಲ್ಲಿ ಅಧಿಕಾರ ಪಡೆಯ;ಲಿದ್ದೇವೆ ಎಂಬುದಕ್ಕೆ ಈ ಚುನಾವಣೆ ಮುನ್ನುಡಿ ಬರೆದಿದೆ ಎಂದು ತಿಳಿಸಿದ್ದಾರೆ.
750 ವೋಟಿಗೆ ಗೆದ್ದವರಿಗೆ ಈ ಬಾರಿ 30 ಸಾವಿರ ಲೀಡ್..
ಕೇರಳ ವಿಧಾನಸಭಾ ಚುನಾವಣೆಯಲ್ಲಿ ಯುಡಿಎಫ್ ಭರ್ಜರಿ ಗೆಲುವು ಸಾಧಿಸಿದೆ. ಕಾಸರಗೋಡು ಜಿಲ್ಲೆಯ ಕಾಸರಗೋಡು ಮತ್ತು ಮಂಜೇಶ್ವರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ನಾನು ಪ್ರಚಾರಕ್ಕೆ ತೆರಳಿದ್ದೆ, ಗಡಿನಾಡ ಜಿಲ್ಲೆಯಾದ ಕಾರಣ ಕರ್ನಾಟಕದ ಕಾಂಗ್ರೆಸ್ ಸರಕಾರದ ಅಭಿವೃದ್ದಿ ಮತ್ತು ಪಂಚ ಗ್ಯಾರಂಟಿ ಮತದಾರರನ್ನು ಆಕರ್ಷಿಸಿದೆ, ಮಂಜೇಶ್ವರದ ಅಭ್ಯರ್ಥಿ ಎಕೆಎಂ ಅಶ್ರಫ್‌ರದ್ದು ಐತಿಹಾಸಿಕ ಗೆಲುವಾಗಿದೆ. ಅಪಪ್ರಚಾರದ ನಡುವೆ ಅತ್ಯಂತ ಹೆಚ್ಚು ಮತಗಳನ್ನು ಪಡೆದ್ದಿದ್ದಾರೆ ಅವರಿಗೆ ಅಭಿನಂತೆ ಸಲ್ಲಿಸುವುದರ ಜೊತೆಗೆ ಮತದಾರರಿಗೂ ಅಭಿನಂದನೆ ಸಲ್ಲಿಸುತ್ತೇನೆ.
ಮಾಣಿಲದಲ್ಲಿ ಹೊಸ ಸಂಪರ್ಕ ಸೇತುವೆ ನಿರ್ಮಾಣಕ್ಕೆ ಕರ್ನಾಟಕದ ಕಾಂಗ್ರೆಸ್ ಸರಕಾರ ಅನುದಾನ ಒದಗಿಸಿದ ಕಾರಣ ಆ ಭಾಗದ ಜನರು ಸಂತೃಪ್ತರಾಗಿದ್ದು ಸುಮಾರು 5,000 ಕ್ಕೂ ಮಿಕ್ಕಿ ಮತಗಳು ಕಾಂಗ್ರೆಸ್ ಅಭ್ಯರ್ಥಿಗೆ ಲಾಭವಾಗಿದೆ. ಗಡಿನಾಡ ಕಾಸರಗೋಡು ಜಿಲ್ಲೆಯ ವಿದ್ಯಾರ್ಥಿಗಳಿಗೆ ಕರ್ನಾಟಕದ ಕಾಲೇಜುಗಳಲ್ಲಿ ವ್ಯಾಸಂಗ ಮಾಡುವುದಕ್ಕೆ ನಾನು ಅವಕಾಶವನ್ನು ಕಲ್ಪಿಸಿದ್ದೆ, ಈ ಮೊದಲು ಕೇರಳದ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ನೀಡುತ್ತಿರಲಿಲ್ಲ ಅದರ ವ್ಯವಸ್ಥೆ ಜೊತೆಗೆ ಬಸ್ ಸೌಲಭ್ಯವನ್ನು ಕಲ್ಪಿಸಿದ್ದು ಈ ಎಲ್ಲಾ ಕಾರಣಕ್ಕೆ ಕಾಸರಗೋಡು ಜಿಲ್ಲೆಯ ಮತದಾರರು ಕಾಂಗ್ರೆಸ್ ಅಭ್ಯರ್ಥಿ ಕೈ ಹಿಡಿಯುವಂತಾಗಿದೆ. ಕೇರಳದಲ್ಲಿ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬರಲಿದ್ದು ಮುಂದೆ ಕರ್ನಾಟಕದಂತೆ ಕೇರಳವೂ ಅಭಿವೃದ್ದಿಯಾಗಲಿದೆ ಎಂದು ಶಾಸಕ ಅಶೋಕ್ ರೈ ಪ್ರತಿಕ್ರಿಯಿಸಿದ್ದಾರೆ.