ಸತತ 15 ನೇ ವರ್ಷವು ಕುಕ್ಕೆ ಶ್ರೀ ಸುಬ್ರಮಣ್ಯ ದೇವಳ ರಾಜ್ಯದಲ್ಲಿ  ಆದಾಯದಲ್ಲಿ ನಂ.1: ಕುಕ್ಕೆ ದೇವಳದ ವಾರ್ಷಿಕ ಆದಾಯ 167ಕೋ.89 ಲಕ್ಷ ರೂ.

ಸತತ 15 ನೇ ವರ್ಷವು ಕುಕ್ಕೆ ಶ್ರೀ ಸುಬ್ರಮಣ್ಯ ದೇವಳ ರಾಜ್ಯದಲ್ಲಿ ಆದಾಯದಲ್ಲಿ ನಂ.1: ಕುಕ್ಕೆ ದೇವಳದ ವಾರ್ಷಿಕ ಆದಾಯ 167ಕೋ.89 ಲಕ್ಷ ರೂ.


ಸುಬ್ರಹ್ಮಣ್ಯ: ರಾಜ್ಯದ ಮುಜರಾಯಿ ಇಲಾಖೆಯ ಆಧೀನದ ಪ್ರಸಿದ್ಧ ನಾಗಾರಾಧನೆಯ ಪುಣ್ಯ ಕ್ಷೇತ್ರ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯವು 2025-26ನೇ ಸಾಲಿನ ಆರ್ಥಿಕ ವರ್ಷದಲ್ಲಿ 167 ಕೋಟಿ 89 ಲಕ್ಷದ 09 ಸಾವಿರದ 080.77 ರೂ ಆದಾಯ ಗಳಿಸಿದೆ. 


2025 ಎಪ್ರೀಲ್ 1ರಿಂದ 2026 ಮಾರ್ಚ್ 31ರ ತನಕದ ಆರ್ಥಿಕ ವರ್ಷದಲ್ಲಿ ದೇವಳಕ್ಕೆ ಈ ಆದಾಯ ಲಭಿಸಿದೆ. ಇದರಲ್ಲಿ ಒಟ್ಟು 85,20,14,531.42 ರೂ ಖರ್ಚಾಗಿದೆ. 2024-2025ನೇ ಸಾಲಿನಲ್ಲಿ 155 ಕೋಟಿ ರೂ ಆದಾಯ ಗಳಿಸಿತ್ತು.ಈ ಬಾರಿ 167,89,09,080.77 ರೂ ಆದಾಯ ಗಳಿಸುವ ಮೂಲಕ ಈ ಆರ್ಥಿಕ ವರ್ಷದಲ್ಲಿ ಕಳೆದ ಆರ್ಥಿಕ ವರ್ಷದಿಂದ ಸುಮಾರು ರೂ.12 ಕೋಟಿ ಅಧಿಕ ಆದಾಯ ಗಳಿಸಿದೆ. ಈ ಮೂಲಕ ಸತತ 15ನೇ ವರ್ಷ ಆದಾಯ ಗಳಿಕೆಯಲ್ಲಿ ನಂಬರ್ ವನ್ ಮುಜರಾಯಿ ದೇವಳವಾಗಿ ಹೊರಹೊಮ್ಮಿದೆ.


ದೇವಸ್ಥಾನಕ್ಕೆ ಮುಖ್ಯವಾಗಿ ಹರಕೆ ಸೇವೆ, ಕಾಣಿಕೆ ಡಬ್ಬಿ, ಬಡ್ಡಿ, ಛತ್ರಗಳ ಬಾಡಿಗೆ, ಕಟ್ಟಡಗಳ ಬಾಡಿಗೆ ಮತ್ತು ಕೃಷಿ ತೋಟದಿಂದ ಆದಾಯವು ಬರುತ್ತದೆ. ಕಳೆದ 14 ವರ್ಷಗಳಿಂದ ನಿರಂತರವಾಗಿ ಆದಾಯ ಗಳಿಕೆಯಲ್ಲಿ ರಾಜ್ಯದ ನಂಬರ್ ದೇವಸ್ಥಾನವಾಗಿ ಹೊರ ಹೊಮ್ಮಿರುವ ಕುಕ್ಕೆಯು 15ನೇ ವರ್ಷವೂ ತನ್ನ ನಂಬರ್ ವನ್ ಸ್ಥಾನವನ್ನು ಗಟ್ಟಿಗೊಳಿಸಿದೆ.


ಪ್ರಪ್ರಥಮ ಬಾರಿಗೆ 167 ಕೋಟಿ ಗೂ ಮಿಕ್ಕಿ ಆದಾಯ:

ಗುತ್ತಿಗೆಗಳಿಂದ 2,53,09,230.00 ರೂ, ಧಾನ್ಯಗಳ ಇಳುವರಿ ಮತ್ತು ತೋಟದ ಉತ್ಪನ್ನದಿಂದ 10,50,323.00 ರೂ, ಕಟ್ಟಡ ಮತ್ತು ಅಂಗಡಿಗಳ ಬಾಡಿಗೆಯಿಂದ 94,46,470.00 ರೂ, ಕಾಣಿಕೆಯಿಂದ 5,47,43,244.45 ರೂ, ಇ ಹುಂಡಿಯಿAದ 38,01,676.80 ರೂ, ಕಾಣಿಕೆ ಹುಂಡಿಯಿAದ 24,69,63,576.00, ಹರಿಕೆ ಸೇವೆಗಳಿಂದ 64,08,90,940.51 ರೂ, ಅನುದಾನದಿಂದ ರೂ.1,67,956.00, ಹೂಡಿಕೆಯಿಂದ ಬಂದ ಬಡ್ಡಿ 49,11,07,412,ಉಳಿತಾಯ ಖಾತೆ ಹಾಗೂ ಇತರ ಬಡ್ಡಿ 41,80,588.00, ಸ್ವೀಪ್ ವ್ಯವಹರಣೆಯಿಂದ ಬಂದ ಬಡ್ಡಿ 12,90,390.00 ರೂ, ಇತರ ಬಾಬ್ತುಗಳು 3,20,31,937.00 ರೂ, ಛತ್ರ ಸಂರಕ್ಷಣಾ ವಂತಿಗೆ 6,93,66,026.00 ರೂ, ಅನ್ನಸಂತರ್ಪಣೆ ನಿಧಿಯಿಂದ ರೂ.9,14,71,606.01, ಅಭಿವೃದ್ದಿ ನಿಧಿ 14,17,284.00 ರೂ, ಶಾಶ್ವತ ಸೇವಾ ಮೂಲಧನ ರೂ.56,70,421 ಹೀಗೆ ಒಟ್ಟು 167ಕೋ.89ಲಕ್ಷದ 09 ಸಾವಿರದ 080.77 ರೂ ಆದಾಯ ಶ್ರೀ ದೇವಳಕ್ಕೆ ಬಂದಿದೆ.ಈ ಮೂಲಕ ಪ್ರಪ್ರಥಮ ಬಾರಿಗೆ 167 ಕೋಟಿಗೂ ಮಿಕ್ಕಿ ಆದಾಯ ಗಳಿಕೆಯ ದಾಖಲೆ ಸ್ಥಾಪಿತವಾಯಿತು.

ಆದಾಯದಲ್ಲಿ ಹೆಚ್ಚಳ:

2006-07ರಲ್ಲಿ ದೇವಳದ ಆದಾಯವು 19.76 ಕೋಟಿ ರೂ. ಆಯಿತು. 2007-08ರಲ್ಲಿ 24.44 ಕೋಟಿ ರೂ.ಗಳಿಗೆ ಆದಾಯವು ನೆಗೆದು ರಾಜ್ಯದ ಶ್ರೀಮಂತ ದೇವಾಲಯವಾಗಿ ಪರಿಗಣಿತವಾಯಿತು. ನಂತರದ ವರ್ಷಗಳಲ್ಲಿ ರಾಜ್ಯದ ನಂ.1 ದೇವಸ್ಥಾನವೆಂದು ಪರಿಗಣಿಸಲ್ಪಟ್ಟಿತು. 2008-09ರಲ್ಲಿ 31 ಕೋಟಿ ಆದಾಯ,2009-10ರಲ್ಲಿ 38.51 ಕೋಟಿ ರೂ. ಆದಾಯ, 2011-12ರಲ್ಲಿ 56.24 ಕೋಟಿ, 2012-13ರಲ್ಲಿ 66.76 ಕೋಟಿ ರೂ., 2013-14ರಲ್ಲಿ 68 ಕೋಟಿ ರೂ, 2014-15ರಲ್ಲಿ 77ಕೋ 60ಲಕ್ಷ, 2015-16ರಲ್ಲಿ 88ಕೋ.83ಲಕ್ಷ, 2016-17ರಲ್ಲಿ 89 ಕೋಟಿ 65ಲಕ್ಷ, 2017-18ರಲ್ಲಿ 95 ಕೋಟಿ 92 ಲಕ್ಷ, 2018-19ರಲ್ಲಿ 92 ಕೋಟಿ 09 ಲಕ್ಷ, 2019-20ರಲ್ಲಿ 98 ಕೋಟಿ 92 ಲಕ್ಷ, 2020-21 ರಲ್ಲಿ 68 ಕೋಟಿ 94 ಲಕ್ಷ ರೂ, 2021-22 ರಲ್ಲಿ 72 ಕೋಟಿ 73 ಲಕ್ಷ, 2022-23 ರಲ್ಲಿ 123 ಕೋಟಿ 64 ಲಕ್ಷ, 2023-24ನೇ ಸಾಲಿನಲ್ಲಿ 146 ಕೋಟಿ 1 ಲಕ್ಷ, 2024-25ನೇ ಸಾಲಿನಲ್ಲಿ 155 ಕೋಟಿ 95 ಲಕ್ಷ ಆದಾಯ ಗಳಿಸಿ ಸತತ 14 ವರ್ಷ ರಾಜ್ಯದ ನಂಬರ್ ವನ್ ಆದಾಯ ಗಳಿಕೆಯ ದೇವಳವಾಗಿತ್ತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article