ಬಾಳುಗೋಡು: ಮುಂಡೊಕಜೆ ನೀರಿನ ಸಮಸ್ಯೆ ಬಗೆಹರಿಸಲು ಪ್ರಯತ್ನ: ಜಿ.ಕೃಷ್ಣಪ್ಪ
Tuesday, May 26, 2026
ಸುಬ್ರಹ್ಮಣ್ಯ: ಬಾಳುಗೋಡು ಗ್ರಾಮದ ಮುಂಡೊಕಜೆ ಎಂಬಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ಆ ಪ್ರಯುಕ್ತ ಚುನಾವಣಾ ಬಹಿಷ್ಕಾರ ಮಾಡುವುದಾಗಿ ಇಲ್ಲಿನ ನಿವಾಸಿಗಳು ನಿರ್ಧರಿಸಿದ್ದರು.
ಇಲ್ಲಿನ ಸಮಸ್ಯೆಗಳನ್ನು ತಾ.ಪಂ. ಇ.ಒ ಅವರ ಮುಖಾಂತರ ಅರಿತ ಕೆಪಿಸಿಸಿ ಸದಸ್ಯ ಜಿ. ಕೃಷ್ಣಪ್ಪ ಅವರು ಗ್ರಾಮ ಪಂಚಾಯತ್ ಮತ್ತು ಸ್ಥಳೀಯರನ್ನು ಮಾತನಾಡಿಸಿ, ಕೊಳವೆ ಬಾವಿ ಸ್ಥಳ ಗುರುತಿಸುವಂತೆ ಪಂಚಾಯತ್ ನವರ ಸಹಕಾರದಲ್ಲಿ ಮಾಡಿಸಿದ್ದರು. ಅಲ್ಲದೆ ಮೇ.25 ರಂದು ಬೋರ್ ಕೊರೆಸಲಾಗಿದ್ದು ಮಂಡೋಕಜೆ ಭಾಗಕ್ಕೆ ಇನ್ನಾದರೂ ನೀರಿನ ವ್ಯವಸ್ಥೆ ಆಗಬಹುದೆಂದು ಭರವಸೆ ಹುಟ್ಟಿದೆ.
ಈ ಸಂದರ್ಭದಲ್ಲಿ ಕಡಬ ಬ್ಲಾಕ್ ಕಾಂಗ್ರೆಸ್ ಎಸ್ ಸಿ ಘಟಕ ಅಧ್ಯಕ್ಷ ಗೋಪಿನಾಥ್, ಸುಬ್ರಹ್ಮಣ್ಯ ದೇವಾಲಯದ ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯ ಲೋಲಕ್ಷಾ ಕೈಕಂಬ, ಅಚ್ಚುತ ಗುತ್ತಿಗಾರು, ಶರತ್ ಕೇರ್ಮಾಯಿ, ಪ್ರಮೋದ್ ಬಾಳುಗೋಡು, ಜಯರಾಮ್ ಮುಂಡಕಜೆ, ಲೋಕೇಶ್, ತಾ.ಪಂ. ರಾಜಣ್ಣ, ಇಂಜಿನಿಯರ್ ಮಣಿಕಂಠ, ಪಿಡಿಒ ಶ್ಯಾಮ್ ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.