ಕುಮಾರಧಾರ ಸ್ನಾನಘಟ್ಟದಲ್ಲಿ ಭಕ್ತಸಂದಣಿ: ರವಿ ಕಕ್ಕೆ ಪದವು ತಂಡದವರಿಂದ ಸ್ವಚ್ಛತಾ ಕಾರ್ಯ
Sunday, May 24, 2026
ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ಸ್ನಾನಘಟ್ಟದಲ್ಲಿ ಇಂದು ರವಿವಾರ ಸಾವಿರಾರು ಭಕ್ತರು ಸೇರಿದ್ದರು ತೀರ್ಥ ಸ್ನಾನಕ್ಕೆಂದು ಬಂದ ಭಕ್ತರು ಅಡ್ಡಾದಿಡ್ಡಿಯಾಗಿ ಎಲ್ಲೆಂದರಲ್ಲಿ ವಾಹನಗಳನ್ನ ನಿಲ್ಲಿಸಿ, ಪದಚಾರಿಗಳಿಗೆ ಹಾಗೂ ರಸ್ತೆ ದಾಟುವವರಿಗೆ ತೊಂದರೆಯನ್ನು ಉಂಟು ಮಾಡಿದ್ದಾರೆ.
ಇದು ಅಲ್ಲದೆ ಅಡ್ಡಾದಿಡ್ಡಿ ಎಲ್ಲೆಂದರಲ್ಲಿ ಕಸ ಕಡ್ಡಿ ಪ್ಲಾಸ್ಟಿಕ್ ಬಾಟಲ್, ತ್ಯಾಜ್ಯಗಳನ್ನು ಎಸೆದಿದ್ದರು. ಅದರಲ್ಲೂ ಕುಲ್ಕುಂದದಿಂದ ಕುಮಾರಧಾರ ವರೆಗಿನ ಮುಖ್ಯರಸ್ತೆಯ ಎರಡು ಬದಿಗಳಲ್ಲಿ ಸಾವಿರಾರುಗಟ್ಟಲೆ ಬಾಟಲ್‌ಗಳು ಹಾಗೂ ಪ್ಲಾಸ್ಟಿಕ್ ಅನ್ನು ಯಾತ್ರಾರ್ತಿಗಳು ಎಸೆದಿರುತ್ತಾರೆ.
ಇದನ್ನು ಗಮನಿಸಿದ ರವಿ ಕಕ್ಕೆ ಪದವು ಸಮಾಜ ಸೇವ ಟ್ರಸ್ಟ್‌ನ ಸದಸ್ಯರು ತಮ್ಮ ನಾಯಕ ಡಾ. ರವಿ ಕಕ್ಕೆ ಪದವು ಅವರ ನೇತೃತ್ವದಲ್ಲಿ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್‌ನ ಸಹಕಾರದೊಂದಿಗೆ ಎಲ್ಲಾ ಕಸ ಕಡ್ಡಿ ಬಾಟಲುಗಳು, ತ್ಯಾಜ್ಯಗಳನ್ನ ಸಂಗ್ರಹಿಸಿ ಮಾಡಿರುತ್ತಾರೆ.
ಗ್ರಾಮ ಪಂಚಾಯತ್ ಸದಸ್ಯ ಗಿರೀಶ್ ಆಚಾರ್ಯ ಇದ್ದರು.