ಬೀರುಕೋಡಿ ಹಿಂದು ರುದ್ರ ಭೂಮಿಯಲ್ಲಿ ಪರಿಸರ ದಿನಾಚರಣೆ
ಹಣ್ಣಿನ ಗಿಡ ನಾಟಿ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮಾಜಿ ಶಾಸಕ ಎ. ರುಕ್ಮಯ ಪೂಜಾರಿ ಮಾತನಾಡಿ, ನಾಟಿ ಮಾಡಿದ ಗಿಡಗಳ ಪೋಷಣೆ ಮುಖ್ಯವಾಗಿದೆ. ಈ ದೃಷ್ಟಿಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ನಡೆಯುವ ಎಲ್ಲಾ ಕಾರ್ಯಕ್ರಮಗಳು ಮಾದರಿಯಾಗಿದ್ದು, ಮೋಕ್ಷದಾಮದ ಸುತ್ತಮುತ್ತಲು ನೆಟ್ಟ ಹಣ್ಣು ಹಂಪಲಿನ ಗಿಡಗಳಿಂದಾಗಿ ಪ್ರಕೃತಿಯಲ್ಲಿರುವ ಪ್ರಾಣಿ ಪಕ್ಷಿಗಳಿಗೆ ಆಹಾರ ಸಿಗುವಂತಾಗಿ ಇದೊಂದು ಸುಂದರ ಧಾಮವಾಗಲಿ ಎಂದರು.
ಹಿಂದೂ ರುದ್ರ ಭೂಮಿ ಅಧ್ಯಕ್ಷ ಚಂದ್ರಶೇಖರ ರೈ, ಜನಜಾಗೃತಿ ವೇದಿಕೆಯ ಕಲ್ಲಡ್ಕ ವಲಯ ಅಧ್ಯಕ್ಷ ಬಟ್ಯಪ್ಪ ಶೆಟ್ಟಿ, ಭಜನಾ ಪರಿಷತ್ತಿನ ಕಲ್ಲಡ್ಕ ವಲಯ ಅಧ್ಯಕ್ಷ ಜಯರಾಮ್ ರೈ, ಪಂಚಾಯತ್ ಕಾರ್ಯದರ್ಶಿ ಅಶ್ರಫ್, ಕಲ್ಲಡ್ಕ ವಲಯ ವಲಯ ಅಧ್ಯಕ್ಷೆ ತುಳಸಿ, ಬೋಳಂತೂರು ಒಕ್ಕೂಟ ಅಧ್ಯಕ್ಷೆ ಸೀತಾ, ಕಲ್ಲಡ್ಕ ವಲಯ ಮೇಲ್ವಿಚಾರಕ ಶುಕರಾಜ್, ಹಿಂದೂ ರುದ್ರ ಭೂಮಿ ಸಮಿತಿ ಸದಸ್ಯರು ಜಿ.ಎನ್. ನೊಣಯ್ಯ ಮತ್ತು ವಿಶ್ವನಾಥ ಶೆಟ್ಟಿ, ಶೌರ್ಯ ವಿಪತ್ತು ಸಮಿತಿಯ ಸಂಯೋಜಕಿ ವಿದ್ಯಾ, ಶೌರ್ಯ ಘಟಕದ ನಿಯೋಜಿತ ಅಧ್ಯಕ್ಷ ಗಣೇಶ್, ಸದಸ್ಯರಾದ ರವಿಚಂದ್ರ, ಚಿನ್ನಾ ಕಲ್ಲಡ್ಕ, ಒಕ್ಕೂಟಸೇವಾಪ್ರತಿನಿಧಿ ಲೀಲಾವತಿ, ಒಕ್ಕೂಟದ ಪದಾಧಿಕಾರಿಗಳು,
ಸಂಘದ ಸದಸ್ಯರು, ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು, ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.