ಗೋಳ್ತಮಜಲು ಘನತ್ಯಾಜ್ಯ ಘಟಕದಲ್ಲಿ ಪರಿಸರ ದಿನಾಚರಣೆ

ಗೋಳ್ತಮಜಲು ಘನತ್ಯಾಜ್ಯ ಘಟಕದಲ್ಲಿ ಪರಿಸರ ದಿನಾಚರಣೆ


ಬಂಟ್ವಾಳ: ಗೋಳ್ತಮಜಲು ಗ್ರಾಮ ಪಂಚಾಯತಿಯ ಘನತ್ಯಾಜ್ಯ ಘಟಕದಲ್ಲಿ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು.

ಆಶೀರ್ವಾದ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ವಿದ್ಯಾಶ್ರೀ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುನಿಲ್ ಕುಮಾರ್, ಕಾರ್ಯದರ್ಶಿ ಚಿತ್ರ, ಪಂಚಾಯಿತಿ ಸಿಬ್ಬಂದಿಗಳಾದ ಹರೀಶ್, ಸಾಯಿಪ್ರಸಾದ್, ಎಂಬಿಕೆ ಭವಾನಿ, ಎಲ್‌ಸಿಆರ್‌ಪಿ ಅರುಣಾಕ್ಷಿ ಮತ್ತು ಸ್ಮಿತಾ, ಕೃಷಿ ಸಖಿ ಪುಷ್ಪ, ಪಶು ಸಖಿ ಸರಿತಾ, ಚಂದ್ರಾವತಿ, ಹಸಿರು ದಳದ ಮೇಲ್ವಿಚಾರಕರಾದ ಸಾಂತಪ್ಪ ಮತ್ತು ಭವ್ಯ, ವಿಟ್ಲ ಪ್ರಥಮ ದರ್ಜೆ ಕಾಲೇಜಿನ ಸಂತೋಷ್ ಇವರ ತಂಡ, ಮತ್ತು ಘಟಕದ ಸಿಬ್ಬಂದಿಗಳು ಭಾಗವಹಿಸಿದ್ದರು.

ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳನ್ನು ಮುಂದಿನ ದಿನಗಳಲ್ಲಿ ಬಳಸದೆ ಇರುವ ಬಗ್ಗೆ ಪ್ರತಿಜ್ಞೆಯನ್ನು ಮಾಡಲಾಯಿತು. ಈ ಪಂಚಾಯಿತಿ ಅಭಿವೃದ್ಧಿ ಅಧಿಕಾರಿವರುಪ್ರತಿಜ್ಞಾವಿಧಿ ಬೋಧಿಸಿದರು.

ಸಾಂತಪ್ಪ ಸ್ವಾಗತಿಸಿ, ಸುನಿಲ್ ಕುಮಾರ್ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article