ಶಿರ್ವ ಮಹಿಳಾ ಮಂಡಲದಿಂದ ‘ಸ್ವಸ್ಥ ಸ್ತ್ರೀ-ಸ್ವಸ್ಥ ಸಂಸಾರ’ ಕಾರ್ಯಾಗಾರ
Sunday, June 7, 2026
ಶಿರ್ವ: ಶಿರ್ವ ಮಹಿಳಾ ಮಂಡಲ ಇದರ ವತಿಯಿಂದ ಮಹಿಳೆಯರ ಆರೋಗ್ಯ, ಸೌಂದರ್ಯ ಮತ್ತು ವ್ಯಕ್ತಿತ್ವ ವಿಕಸನವನ್ನು ಉತ್ತೇಜಿಸುವ ‘ಸ್ವಸ್ಥ ಸ್ತ್ರೀ-ಸ್ವಸ್ಥ ಸಂಸಾರ’ ಎಂಬ ವಿನೂತನ ಒಂದು ದಿನದ ಒಂದು ದಿನದ ಕಾರ್ಯಾಗಾರವನ್ನು ಶಿರ್ವ ‘ಮಹಿಳಾ ಸೌಧ’ದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಹೆರಿಗೆ ಮತ್ತು ಸ್ತ್ರೀರೋಗ ತಜ್ಞೆ ಡಾ. ರಾಜಲಕ್ಷ್ಮೀ ಉದ್ಘಾಟಿಸಿ ಮಾತನಾಡಿ, ಮಹಿಳೆಯರ ದೈಹಿಕ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಮಾಹಿತಿ ನೀಡಿ ಆರೊಗ್ಯವಂತ ಮಹಿಳೆಯೇ ಆರೋಗ್ಯವಂತ ಕುಟುಂಬ ಮತ್ತು ಸಮಾಜದ ನಿರ್ಮಾಣಕ್ಕೆ ಅಡಿಪಾಯವಾಗಿದ್ದು, ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಅತೀವ ಕಾಳಜಿ ವಹಿಸಬೇಕು ಎಂದರು.
ಸೌಂದರ್ಯತಜ್ಞೆ ಸುಪ್ರೀತಾ ಅಂಚನ್ ಮಾತನಾಡಿ, ಸೌಂದರ್ಯ ವೃದ್ಧಿ, ತ್ವಚೆ ಆರೈಕೆ, ಮೇಕಪ್ ಕುರಿತ ಉಪಯುಕ್ತ ಮಾಹಿತಿ ನೀಡಿದರು.
ಜೇಸಿಐ ರಾಷ್ಟ್ರೀಯ ತರಬೇತುದಾರ ಪ್ರಶಾಂತ್ ಶೆಟ್ಟಿ ಆತ್ಮವಿಶ್ವಾಸ, ವ್ಯಕ್ತಿತ್ವ ವಿಕಸನ, ಪರಿಣಾಮಕಾರಿ ಭಾಷಣಕಲೆ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಾಗಾರದಲ್ಲಿ 50ಕ್ಕೂ ಅಧಿಕ ಮಹಿಳೆಯರು ಭಾಗವಹಿಸಿದ್ದರು. ಮಹಿಳಾ ಮಂಡಲದ ಗೌರವ ಅಧ್ಯಕ್ಷೆ ಬಬಿತಾ ಜಗದೀಶ್ ಅರಸ್, ಗೌರವ ಸಲಹೆಗಾರರಾದ ಗೀತಾ ವಿಟ್ಠಲ್ ವಾಗ್ಲೆ ಬಂಟಕಲ್, ಕಾರ್ಯದರ್ಶಿ ಐರಿನ್ ಪಿಂಟೊ ಪರಿಚಯಿಸಿದರು. ಅಧ್ಯಕ್ಷೆ ಡಾ. ಸ್ಫೂರ್ತಿ ಶೆಟ್ಟಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ, ವಂದಿಸಿದರು.