ಆಟೋರಿಕ್ಷಾ ಕಳವು
Sunday, June 28, 2026
ಬಂಟ್ವಾಳ: ಬಿ.ಸಿ. ರೋಡಿನ ಶ್ರೀ ಚಂಡಿಕಾ ಪರಮೇಶ್ವರಿ ದೇವಸ್ಥಾನದ ಬಳಿ ನಿಲ್ಲಿಸಲಾಗಿದ್ದ ಅಟೋ ರಿಕ್ಷಾವೊಂದನ್ನು ಕಳವುಗೈದ ಘಟನೆ ನಡೆದಿದೆ.
ಅರಳ ಗ್ರಾಮದ ನಿವಾಸಿ ಭುವನೇಶ್ವರ (42) ಅವರು ತನ್ನ ಕೆಎ೧೯ ಎಎ2420 ನೋಂದಣಿ ಸಂಖ್ಯೆಯ ಆಟೋ ರಿಕ್ಷಾವನ್ನು ಜೂನ್ 25 ರಂದು ಸಂಜೆ 4.20ಕ್ಕೆ ಬಿಸಿ ರೋಡ್ ಚಂಡಿಕಾ ಪರಮೇಶ್ವರಿ ದೇವಸ್ಥಾನದ ಬಳಿ ನಿಲ್ಲಿಸಿ ಬಿಸಿ ರೋಡು ಪೇಟೆಗೆ ಹೋಗಿ ವಾಪಾಸು ಸಂಜೆ 5 ಗಂಟೆಗೆ ಬಂದು ನೋಡಿದಾಗ ಆಟೋ ರಿಕ್ಷಾ ನಿಲ್ಲಿಸಿದ ಜಾಗದಲ್ಲಿ ಇಲ್ಲದೇ ಇದ್ದು, ಯಾರೋ ಕಳ್ಳರು ಕಳವು ಮಾಡಿದ್ದಾರೆ. ಕಳವಾದ ಆಟೋ ರಿಕ್ಷಾದ ಮೌಲ್ಯ 40 ಸಾವಿರ ರೂ. ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ಭುವನೇಶ್ವರ ಅವರು ನೀಡಿದ ದೂರಿನಂತೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.