ಟೋಲ್ ಶುಲ್ಕ ಪಾವತಿಸದೆ ಗೇಟ್ ತುಂಡರಿಸಿ ಪರಾರಿ: ಕೇಸು ದಾಖಲು
Sunday, June 28, 2026
ಬಂಟ್ವಾಳ: ಬ್ರಹ್ಮರಕೂಟ್ಟು ಟೋಲ್ ಪ್ಲಾಝಾದಲ್ಲಿ ವಾಹನ ಚಾಲಕನೋರ್ವ ಶುಲ್ಕ ಪಾವತಿಸದೆ ಗೇಟ್ ತುಂಡರಿಸಿ ಪರಾರಿಯಾದ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಟೋಲ್ ಗೇಟಿನಲ್ಲಿ ಸಹ ವ್ಯವಸ್ಥಾಪಕನಾಗಿ ಕಾರ್ಯನಿರ್ವಹಿಸುವ, ಸುರತ್ಕಲ್ ನಿವಾಸಿ ಯಶವಂತ ಕುಂದರ್ ಅವರು ಪೊಲೀಸರಿಗೆ ದೂರು ನೀಡಿದ್ದು, ಜೂ.26 ರಂದು ಬ್ರಹ್ಮರಕೂಟ್ಟು ಟೋಲ್ ಗೇಟಿನ 5ನೇ ಬೂತಿನಲ್ಲಿ ವಾಹನವೊಂದರ ಚಾಲಕನಲ್ಲಿ ಶುಲ್ಕ ಪಾವತಿಸುವಂತೆ ತಿಳಿಸಿದರೂ ಪಾವತಿಸದೆ ಏನು ಮಾಡುತ್ತೀಯಾ ಮಾಡು ಎಂದು ಗದರಿಸಿ ಗೇಟ್ ತುಂಡು ಮಾಡಿ ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಹೆದ್ದಾರಿ ಪ್ರಾಧಿಕಾರದ ಸೊತ್ತಾಗಿರುವ ಟೋಲ್ ಪ್ಲಾಝಾಕ್ಕೆ ಹಾನಿ ಮಾಡಿ ಸುಮಾರು 5 ಸಾ.ರೂ. ನಷ್ಟ ಉಂಟು ಮಾಡಿರುವುದಾಗಿ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.