ಶಿವಮೊಗ್ಗ: ಕ್ರೇನ್ ಚಕ್ರದಡಿ ಸಿಲುಕಿ ಪಿಲಿಗೂಡು ವ್ಯಕ್ತಿ ಸಾವು

ಶಿವಮೊಗ್ಗ: ಕ್ರೇನ್ ಚಕ್ರದಡಿ ಸಿಲುಕಿ ಪಿಲಿಗೂಡು ವ್ಯಕ್ತಿ ಸಾವು


ಬೆಳ್ತಂಗಡಿ: ಶಿವಮೊಗ್ಗ ಜಿಲ್ಲೆಯ ಶಿವಮೊಗ್ಗ ನಗರದ ಹೊಸಮನೆ ದಿಡ್ಡಮ್ಮ ದೇವಸ್ಥಾನದ ಗೋಪುರ ಕೆಲಸದ ವೇಳೆ ಕ್ರೇನ್‌ಗೆ ಚಕ್ರಕ್ಕೆ ಸಿಲುಕಿ ಕೂಲಿ ಕಾರ್ಮಿಕರೊಬ್ಬರು ಮೃತಪಟ್ಟ ದುರ್ಘಟನೆ ಜೂ.6ರಂದು ಸಂಜೆ ನಡೆದಿದೆ.

ಮೃತರನ್ನು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ಪಿಲಿಗೂಡು ನಿವಾಸಿ ನಾಗೇಶ್ (48) ಎಂದು ಗುರುತಿಸಲಾಗಿದೆ.

ನಾಗೇಶ್ ನಾಯ್ಕ ಅವರು ಶಿವಮೊಗ್ಗದ ದೇವಸ್ಥಾನದ ಗೋಪುರದ ಕಾಮಗಾರಿಯಲ್ಲಿ ಕೆಲಸ ನಿರ್ವಹಿಸಲು ಜೂ.5 ರಂದು ಶುಕ್ರವಾರ ಶಿವಮೊಗ್ಗಕ್ಕೆ ತೆರಳಿದ್ದರು.ದೇವಾಲಯದ ಕೆಲಸದ ವೇಳೆ ಕಲ್ಲನ್ನು ತೆಗೆದುಕೊಂಡು ರಿವರ್ಸ್ ಹೋಗುವ ವೇಳೆ ಎಡವಿ ಬಿದ್ದು ಕ್ರೇನ್‌ಗೆ ಚಕ್ರದಡಿ ಸಿಲುಕಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಮೃತರು ಪತ್ನಿ ಕವಿತಾ ಹಾಗೂ ಓರ್ವ ಪುತ್ರಿ,ಓರ್ವ ಪುತ್ರ ಹಾಗೂ ಬಂಧು ಬಳಗವನ್ನು ಆಗಲಿದ್ದಾರೆ.

ಕ್ರೇನ್ ಚಾಲಕನ ಅಜಾಗರೂಕತೆಯಿಂದ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.ಘಟನೆಯ ಬಗ್ಗೆ ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article