ಸಿಇಟಿ ಟಾಪ್-10ರಲ್ಲಿ ಎಕ್ಸ್‌ಪರ್ಟ್ ವಿದ್ಯಾರ್ಥಿಗಳ ಪ್ರಭುತ್ವ: 15 ರ‍್ಯಾಂಕ್‌ಗಳ ಐತಿಹಾಸಿಕ ಸಾಧನೆ
ಮೊದಲ 10 ರ‍್ಯಾಂಕ್‌ಗಳಲ್ಲಿ ಕಾಲೇಜಿನ ಮೂವರು ವಿದ್ಯಾರ್ಥಿಗಳು ಮೊದಲ 3ನೇ ರ‍್ಯಾಂಕ್, ಮೂವರು ವಿದ್ಯಾರ್ಥಿಗಳು ನಾಲ್ಕನೇ ರ‍್ಯಾಂಕ್, ಓರ್ವ ವಿದ್ಯಾರ್ಥಿ ಆರನೇ ರ‍್ಯಾಂಕ್, ಮೂವರು ವಿದ್ಯಾರ್ಥಿಗಳು ಏಳನೇ ರ‍್ಯಾಂಕ್, ಐವರು ವಿದ್ಯಾರ್ಥಿಗಳು ಎಂಟನೇ ರ‍್ಯಾಂಕ್ ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ.
ಸಮಯ್ ಎ.ಎಸ್. ಅವರು ಕೃಷಿ, ಫುಡ್‌ಸೈನ್ಸ್ ಹಾಗೂ ಸೆರಿಕಲ್ಚರ್‌ನಲ್ಲಿ 3ನೇ ರ‍್ಯಾಂಕ್ ಮತ್ತು ಎಂಜಿನಿಯರಿಂಗ್‌ನಲ್ಲಿ 23ನೇ ರ‍್ಯಾಂಕ್ ಪಡೆದಿದ್ದಾರೆ. ರಿಶಿಕಾ ಕೆ.ಎಸ್. ಅವರು ಫುಡ್‌ಸೈನ್ಸ್, ಕೃಷಿ ಹಾಗೂ ಸೆರಿಕಲ್ಚರ್‌ನಲ್ಲಿ 4ನೇ ರ‍್ಯಾಂಕ್ ಮತ್ತು ಎಂಜಿನಿಯರಿಂಗ್‌ನಲ್ಲಿ 20, ನರ್ಸಿಂಗ್‌ನಲ್ಲಿ 26 ಮತ್ತು ಪಶು ವೈದ್ಯಕೀಯದಲ್ಲಿ 26ನೇ ರ‍್ಯಾಂಕ್ ಪಡೆದಿದ್ದಾರೆ. ಅಂಕಿತ್ ಅಶೋಕ್ ದೊಡವಾಳ ಅವರು ಕೃಷಿಯಲ್ಲಿ 6ನೇ ರ‍್ಯಾಂಕ್, ಪಶು ವೈದ್ಯಕೀಯ, ನರ್ಸಿಂಗ್, ಬಿ ಫಾರ್ಮಾದಲ್ಲಿ 11ನೇ ರ‍್ಯಾಂಕ್, ಎಂಜಿನಿಯರಿಂಗ್‌ನಲ್ಲಿ 43ನೇ ರ‍್ಯಾಂಕ್ ಪಡೆದರೆ, ದೀಕ್ಷಾ ಶೆಣೈ ಅವರು ಬಿಎನ್‌ವೈಎಸ್‌ನಲ್ಲಿ 6ನೇ ರ‍್ಯಾಂಕ್, ಪಶುವೈದ್ಯಕೀಯ ಹಾಗೂ ನರ್ಸಿಂಗ್‌ನಲ್ಲಿ 14, ಬಿ-ಫಾರ್ಮಾ ಹಾಗೂ ಡಿ-ಫಾರ್ಮಾದಲ್ಲಿ 30ನೇ ರ‍್ಯಾಂಕ್ ಪಡೆದಿದ್ದಾರೆ. ಅರಳೆ ವಿರೂಪಾಕ್ಷಿ ಅವರು ಕೃಷಿ, ಫುಡ್‌ಸೈನ್ಸ್ ಹಾಗೂ ಸೆರಿಕಲ್ಚರ್‌ನಲ್ಲಿ 7ನೇ ರ‍್ಯಾಂಕ್, ಪಶುವೈದ್ಯಕೀಯ, ಬಿಎಸ್ಸಿ ನರ್ಸಿಂಗ್‌ನಲ್ಲಿ 33ನೇ ರ‍್ಯಾಂಕ್, ಎಂಜಿನಿಯರಿಂಗ್‌ನಲ್ಲಿ 36ನೇ ರ‍್ಯಾಂಕ್ ಪಡೆದರೆ, ಕೃತಿಕಾ ಮಲ್ಲಿಕಾರ್ಜುನ ಅವರು ಕೃಷಿ, ಫುಡ್‌ಸೈನ್ಸ್ ಹಾಗೂ ಸೆರಿಕಲ್ಚರ್‌ನಲ್ಲಿ 8ನೇ ರ‍್ಯಾಂಕ್, ಎಂಜಿನಿಯರಿಂಗ್‌ನಲ್ಲಿ 40ನೇ ರ‍್ಯಾಂಕ್ ಪಡೆದಿದ್ದಾರೆ. ರಿಷಬ್ ಎಂ. ಶೆಟ್ಟಿ ಅವರು ನರ್ಸಿಂಗ್ ಮತ್ತು ಪಶುವೈದ್ಯಕೀಯದಲ್ಲಿ 8ನೇ ರ‍್ಯಾಂಕ್, ಬಿಫಾರ್ಮಾ ಹಾಗೂ ಫಾರ್ಮಾ ಡಿಯಲ್ಲಿ 15ನೇ ರ‍್ಯಾಂಕ್ ಪಡೆದು ಅಭೂತಪೂರ್ವ ಸಾಧನೆ ಮಾಡಿದ್ದಾರೆ.
ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಕಠಿಣ ಪರಿಶ್ರಮ, ಪರಿಸರ, ಸರಿಯಾದ ಉತ್ತಮ ಮಾರ್ಗದರ್ಶನದಿಂದಾಗಿ ಈ ಸಾಧನೆ ಸಾಧ್ಯವಾಗಿದೆ. ಬಿಎಸ್ಸಿ ಕೃಷಿ ವಿಭಾಗದ ಮೊದಲ 10 ರ‍್ಯಾಂಕ್‌ನಲ್ಲಿ ಐದು ರ‍್ಯಾಂಕ್‌ಗಳನ್ನು ಎಕ್ಸ್‌ಪರ್ಟ್ ವಿದ್ಯಾರ್ಥಿಗಳು ಪಡೆದಿರುವುದು ವಿಶೇಷವಾಗಿದೆ. ಈಗಾಗಲೇ ಬೋರ್ಡ್ ಪರೀಕ್ಷೆ ಹಾಗೂ ಜೆಇಇ ಮೈನ್ಸ್‌ನಲ್ಲಿ ಉತ್ತಮ ಫಲಿತಾಂಶವನ್ನು ಸಂಸ್ಥೆಯ ವಿದ್ಯಾರ್ಥಿಗಳು ಪಡೆದಿದ್ದು, ಮುಂದಿನ ದಿನಗಳಲ್ಲಿ ನೀಟ್‌ನಲ್ಲೂ ಉತ್ತಮ ಫಲಿತಾಂಶ ಪಡೆಯುವ ನಿರೀಕ್ಷೆ ಇದೆ. ಸಾಧನೆ ಮಾಡಿದ ಎಲ್ಲ ವಿದ್ಯಾರ್ಥಿಗಳಿಗೆ ಹಾರ್ದಿಕ ಅಭಿನಂದನೆಗಳು ಎಂದು ಸಂಸ್ಥೆಯ ಅಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್ ಅಭಿನಂದಿಸಿದ್ದಾರೆ.