ಉಳ್ಳಾಲ ತಾಲೂಕು ಆಸ್ಪತ್ರೆ ನಿರ್ಮಾಣಕ್ಕೆ ಒತ್ತಾಯಿಸಿ ಡಿವೈಎಫ್ಐ ಪ್ರತಿಭಟನೆ

ಉಳ್ಳಾಲ ತಾಲೂಕು ಆಸ್ಪತ್ರೆ ನಿರ್ಮಾಣಕ್ಕೆ ಒತ್ತಾಯಿಸಿ ಡಿವೈಎಫ್ಐ ಪ್ರತಿಭಟನೆ


ದೇರಳಕಟ್ಟೆ: ವೆನ್ಲಾಕ್ ಅನ್ನು ಪ್ರಾದೇಶಿಕ ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಸಲು, ಜಯದೇವ ಹೃದ್ರೋಗ, ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ ಆರಂಭಿಸಲು ಒತ್ತಾಯಿಸಿ, ಮುಡಿಪು ಹೋಬಳಿಗೆ ಸಮುದಾಯ ಆಸ್ಪತ್ರೆ, ಉಳ್ಳಾಲ ತಾಲೂಕಿಗೆ 100 ಹಾಸಿಗೆಗಳ ಸರಕಾರಿ  ತಾಲೂಕು ಆಸ್ಪತ್ರೆ ಸ್ಥಾಪಿಸಲು ಆಗ್ರಹಿಸಿ ಹಾಗೂ ಖಾಸಗೀ ಆಸ್ಪತ್ರೆಗಳೊಂದಿಗೆ ಮಾಡಿರುವ ಕರಾರು ಒಪ್ಪಂದ ರದ್ದುಗೊಳಿಸಲು ಒತ್ತಾಯಿಸಿ ಇಂದು ದೇರಳಕಟ್ಟೆ ಜಂಕ್ಷನ್ ನಲ್ಲಿ ಡಿವೈಎಫ್‌ಐ ಉಳ್ಳಾಲ ತಾಲೂಕು ಸಮಿತಿ ನೇತೃತ್ವದಲ್ಲಿ ಪ್ರತಿಭಟನಾ ಪ್ರದರ್ಶನ ನಡೆಯಿತು. 


ಪ್ರತಿಭಟನೆಯನ್ನು ಉದ್ದೇಶಿಸಿ ಡಿವೈಎಫ್ಐ ದ.ಕ ಜಿಲ್ಲಾಧ್ಯಕ್ಷರಾದ ಬಿ.ಕೆ ಇಮ್ತಿಯಾಜ್ ಮಾತನಾಡುತ್ತಾ ನೂತನ ಸಚಿವ ಸಂಪುಟದಲ್ಲಿ ಆರೋಗ್ಯ ಮಂತ್ರಿಯಾಗಿ ಆಯ್ಕೆಯಾಗಿರುವ ಯು.ಟಿ ಖಾದರ್ ಅವರು ಖಾಸಗೀ ಮೆಡಿಕಲ್ ಕಾಲೇಜುಗಳ ಪರವಹಿಸುವುದನ್ನು ನಿಲ್ಲಿಸಿ ಸರಕಾರಿ ಆಸ್ಪತ್ರೆಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲು ಸಾಧ್ಯವಾಗಬೇಕು. ನಾಲ್ಕೈದು ಖಾಸಗೀ ಮೆಡಿಕಲ್ ಕಾಲೇಜುಗಳಿರುವ ಉಳ್ಳಾಲದ ಈ ಭಾಗದಲ್ಲಿ ಕನಿಷ್ಟ ಒಂದು ಸರಕಾರಿ ತಾಲೂಕು ಆಸ್ಪತ್ರೆ ನಿರ್ಮಿಸಲು ಸಾಧ್ಯವಾಗದಿರೋದು, ಇರುವ ಆರೋಗ್ಯ ಕೇಂದ್ರಗಳನ್ನು ಖಾಸಗೀ ಆಸ್ಪತ್ರೆಗೆ ವಹಿಸಿಕೊಟ್ಟಿರುವ ನಡೆ ಬಹಳ ದುರಂತ. ಆರೋಗ್ಯ ಮಂತ್ರಿಗಳು ಖಾಸಗೀ ಆಸ್ಪತ್ರೆಗಳೊಂದಿಗೆ ಮಾಡಿರುವ ಕರಾರು ಒಪ್ಪಂದವನ್ನು ಕೂಡಲೇ ರದ್ದುಗೊಳಿಸಿ ಡಿವೈಎಫ್ಐ ಮುಂದಿಟ್ಟಿರುವ ಬೇಡಿಕೆಗಳ ಈಡೇರಿಕೆಗೆ ಕ್ರಮವಹಿಸಬೇಕೆಂದು ಒತ್ತಾಯಿಸಿದರು. 

ಡಿವೈಎಫ್ಐ ದ.ಕ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಮಾತನಾಡುತ್ತಾ ಡಿವೈಎಫ್ಐ ಈಗಿನ ಆರೋಗ್ಯ ಸಚಿವರು ಇತ್ತೀಚೆಗೆ ಮಾಧ್ಯಮದ ಮುಂದೆ ನನಗೆ ಪೀಪಲ್ ಆರ್ ಇಪಾರ್ಟೆಂಟ್ , ಸರಕಾರಿಯೋ, ಖಾಸಗೀಯೋ ಅನ್ನೋದು ಮುಖ್ಯವಲ್ಲ ಜನರಿಗೆ ಸವಲತ್ತುಗಳು ತೆಗೆಸಿಕೊಡೋದು ಮುಖ್ಯ ಅಂದವರು ತಮ್ಮ ಕ್ಷೇತ್ರವನ್ನೊಮ್ಮೆ ನೋಡಬೇಕು ಉಳ್ಳಾಲ ತಾಲೂಕಾಗಿ ಆರು ವರುಷ ಕಳೆದರೂ ಆಡಳಿತ ಸೌಧ ಇಲ್ಲ, ತಾಲೂಕು ಆಸ್ಪತ್ರೆ, ಸರಕಾರಿ ಪದವಿ ಕಾಲೇಜು, ಸಾರ್ವಜನಿಕ ಶೌಚಾಲಯ ಸಹಿತ ಯಾವುದೇ ಮೂಲಭೂತ ಸೌಕರ್ಯಗಳಿಲ್ಲದ ಈ ಕ್ಷೇತ್ರದ ಜನರ ಬಗ್ಗೆ ಶಾಸಕರು ಹೇಳುವ ವಿಚಾರಕ್ಕೂ ವಾಸ್ತವಕ್ಕೂ ಯಾವುದೇ ಸಂಬಂಧಗಳೇ ಇಲ್ಲ ಒಟ್ಟು ಇವರಿಗೆ ಜನರೇ ಮುಖ್ಯ ಅವರಿಗೆ ಸವಲತ್ತುಗಳು ಸಿಗೋದೇ ಮುಖ್ಯ ಎಂದು ಲೇವಡಿ ಮಾಡಿದರು. ಸರಕಾರಿ ಆಸ್ಪತ್ರೆಯ ಅಭಿವೃದ್ಧಿ ಪ್ರಶ್ನೆಯಲ್ಲಿ ಡಿವೈಎಫ್ಐ ಸರಕಾರದ ಮುಂದಿಟ್ಟಿರುವ ಬೇಡಿಕೆಗಳನ್ನು ಕೂಡಲೇ ಈಡೇರಿಕೆಗೆ ಮುಂದಾಗಬೇಕು ಆವರೆಗೆ ನಮ್ಮಯ ಹೋರಾಟ ನಿಲ್ಲುವುದಿಲ್ಲ ಎಂದರು..ಡಿವೈಎಫ್ಐ ಉಳ್ಳಾಲ ತಾಲೂಕು ಅಧ್ಯಕ್ಷ ಅಡ್ವೋಕೇಟ್ ನಿತಿನ್ ಕುತ್ತಾರ್ ಮಾತನಾಡಿದರು.

ಪ್ರತಿಭಟನೆಯಲ್ಲಿ ಡಿವೈಎಫ್ಐ ಜಿಲ್ಲಾ ಮುಖಂಡಾರದ ಸುನೀಲ್ ತೇವುಲ, ರಝಾಕ್ ಮುಡಿಪು, ಅಶ್ರಫ್ ಹರೇಕಳ, ಸರ್ಫರಾಜ್ ಗಂಡಿ, ವಿಕಾಸ್ ಕುತ್ತಾರ್, ಮಿಥುನ್ ಕುತ್ತಾರ್, ಬಶೀರ್ ಹರೇಕಳ, ರಝಾಕ್ ಮೊಂಟೆಪದವ್, ಶರೀಫ್ ಮೊಂಟೆಪದವ್, ಮಹಾಬಲ ದೆಪ್ಪೆಲಿಮಾರ್, ಶೇಖರ್ ಕುತ್ತಾರ್, ಅಬೂಬಕರ್ ಜಲ್ಲಿ, ಇಬ್ರಾಹಿಂ ಮದಕ, ಖಾದರ್ ಸಣ್ಣಬೈಲ್, ರಿಝ್ವಾನ್ ಆಲಡ್ಕ, ಸಂಕೇತ್ ಕುತ್ತಾರ್, ಫಾರೂಕ್ ಕೊಣಾಜೆ, ರಮೇಶ್ ಉಳ್ಳಾಲ,ಸಿರಾಜ್ ಮೊಂಟೆಪದವ್ ಅಮೀರ್ ಉಳ್ಳಾಲ ಬೈಲ್, ಇಮ್ರಾನ್ ಗಂಡಿ,ದಿವ್ಯರಾಜ್ ಕುತ್ತಾರ್, ಭರತ್ ಕುತ್ತಾರ್ ಉಪಸ್ಥಿತರಿದ್ದರು.

ಡಿವೈಎಫ್ಐ ಉಳ್ಳಾಲ ತಾಲೂಕು ಕಾರ್ಯದರ್ಶಿ ರಿಝ್ವಾನ್ ಹರೇಕಳ ಸ್ವಾಗತಿಸಿ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article