ಪಾದುವಾರಂಭ-2026-27: ನೂತನ ಪಿಯು ಶೈಕ್ಷಣಿಕ ವರ್ಷಕ್ಕೆ ಚಾಲನೆ
ʼಪಾದುವಾರಂಭʼ 2026-27, ಪಿಯುಸಿಯ ನೂತನ ಶೈಕ್ಷಣಿಕ ವರ್ಷಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪಾದುವ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳವಾಗಿರುವುದು ಕೇವಲ ಶೈಕ್ಷಣಿಕ ದಾಖಲೆಗಳಿಂದಲ್ಲ. ಅದರೊಂದಿಗೆ ಅನೇಕ ಪಠ್ಯೇತರ ಚಟುವಟಿಕೆಗಳಿಗೆ ವ್ಯಾಪಕವಾಗಿರುವುದು ಕಾರಣವಾಗಿದೆ ಎಂದರು.
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಪಾದುವ ಕ್ಯಾಂಪಸ್ ನಿರ್ದೇಶಕ ಹಾಗೂ ಪಾದುವ ಪದವಿ ಕಾಲೇಜಿನ ಪ್ರಾಂಶುಪಾಲ ವಂ. ಫಾ. ಅರುಣ್ ವಿಲ್ಸನ್ ಲೋಬೊ, ವಿದ್ಯಾರ್ಥಿಯ ಬದುಕಿನಲ್ಲಿ ಪಿಯುಸಿ ಮಹತ್ವದ ಹಂತ. ಭವಿಷ್ಯದ ಜೀವನದ ಗುರಿಯನ್ನು ನಿರ್ಧರಿಸುವ ಮತ್ತು ಅದನ್ನು ಸಾಧಿಸುವ ಹಂತ ಹಾಗೂ ಮೌಲ್ಯಗಳನ್ನು ರೂಪಿಸಿಕೊಳ್ಳಬೇಕು ಎಂದು ನುಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಜೀವನ ಕೌಶಲ್ಯ ತರಬೇತಿದಾರೆ ಪ್ರೀತಿ ಶೆಟ್ಟಿಗಾರ್ ಮಾತನಾಡಿ, ಬದುಕಿನಲ್ಲಿ ಪ್ರತಿಯೊಂದು ಸೋಲು ಕಲಿಕೆಯಾಗಿದೆ. ಪಿಯು ಶಿಕ್ಷಣದಿಂದ ಜೀವನ ಆರಂಭವಾಗುತ್ತದೆ. ಇಲ್ಲಿಂದ ಐದೇಳು ವರ್ಷಗಳಲ್ಲಿ ಬದುಕನ್ನು ಕಟ್ಟಿಕೊಳ್ಳಬೇಕು. ಪ್ರಯತ್ನಪೂರ್ವಕ ಶ್ರಮದಿಂದ ಯಶಸ್ಸು ಸಾಧ್ಯ ಎಂದರು.
ಈ ಸಂದರ್ಭದಲ್ಲಿ 2025-26 ನೇ ಸಾಲಿನ ದ್ವಿತೀಯ ಪಿಯಸಿ ವಾರ್ಷಿಕ ಪರೀಕ್ಷೆಯಲ್ಲಿ ರ್ಯಾಂಕ್ ವಿಜೇತ ವಿದ್ಯಾರ್ಥಿಗಳನ್ನು ಪೋಷಕರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.
ಪಾದುವ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ. ರೋಶನ್ ಸಾಂತುಮಯೋರ್ ಅತಿಥಿಗಳನ್ನು ಸ್ವಾಗತಿಸಿದರು. ಕಾರ್ಯಕ್ರಮದ ಸಂಯೋಜಕಿ ಉಪನ್ಯಾಸಕಿ ರಜನಿ ಪಿ. ಅಜಿತ್ ರ್ಯಾಂಕ್ ವಿಜೇತರ ಪಟ್ಟಿಯನ್ನು ಓದಿದರು. ಉಪನ್ಯಾಸಕಿ ಲಾವಿಯಾ ಮೊಂತೆರೊ ವಂದಿಸಿದರೆ, ಉಪನ್ಯಾಸಕಿ ಲೊರೆಟ್ಟಾ ಆಂಟನಿ ಕಾರ್ಯಕ್ರಮ ನಿರೂಪಿಸಿದರು.