ಕಾಸರಗೋಡು ಎಸ್ಪಿಯಾಗಿ ನಿತಿನ್ ರಾಜ್

ಕಾಸರಗೋಡು ಎಸ್ಪಿಯಾಗಿ ನಿತಿನ್ ರಾಜ್


ಕಾಸರಗೋಡು: ಜಿಲ್ಲಾ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ನಿತಿನ್ ರಾಜ್ ಪಿ. ಅವರನ್ನು ನೇಮಿಸಲಾಗಿದೆ. 

ಇವರು ಈ ಮೊದಲು ಕಣ್ಣೂರು ನಗರ ಪೊಲೀಸ್ ಆಯುಕ್ತರಾಗಿದ್ದರು. ಹಾಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ವಿಜಯ್ ಭರತ್ ರೆಡ್ಡಿ ಅವರನ್ನು ಕಣ್ಣೂರು ನಗರ ಪೊಲೀಸ್ ಆಯುಕ್ತರನ್ನಾಗಿ ವರ್ಗಾವಣೆ ಮಾಡಲಾಗಿದೆ. 

ಕಾಸರಗೋಡು ಜಿಲ್ಲೆಯ ರಾವಣೇಶ್ವರ ನಿವಾಸಿಯಾಗಿರುವ ನಿತಿನ್ ರಾಜ್, ಕೇರಳ ಕೇಡರ್ ನ ಐಪಿಎಸ್ ಅಧಿಕಾರಿ. 2019 ಬ್ಯಾಚ್ ಅಧಿಕಾರಿಯಾದ ಇವರು, 2018ರ ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ 210ನೇ ರ‍್ಯಾಂಕ್ ಗಳಿಸಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article