ಪ್ರೊ. ನಾಗಪ್ಪ ಗೌಡ ಅವರು ಆದರ್ಶ ವ್ಯಕ್ತಿತ್ವದ ಪ್ರಾಧ್ಯಾಪಕ: ಪ್ರೊ. ಪಿ.ಎಲ್. ಧರ್ಮ

ಪ್ರೊ. ನಾಗಪ್ಪ ಗೌಡ ಅವರು ಆದರ್ಶ ವ್ಯಕ್ತಿತ್ವದ ಪ್ರಾಧ್ಯಾಪಕ: ಪ್ರೊ. ಪಿ.ಎಲ್. ಧರ್ಮ


ಕೊಣಾಜೆ: ಪ್ರೊ. ನಾಗಪ್ಪ ಗೌಡ ಅವರು ಮಂಗಳೂರು ವಿವಿಯಲ್ಲಿ ಸಾಧಕ ವಿದ್ಯಾರ್ಥಿಯಾಗಿ , ಹಿರಿಯ ಪ್ರಾಧ್ಯಾಪಕರಾಗಿ, ಎಸ್ ವಿಪಿ ಕನ್ನಡ ಸಂಸ್ಥೆಯಲ್ಲಿ ವಿಭಾಗದಲ್ಲಿ ಅಧ್ಯಕ್ಷರಾಗಿ ವಿವಿಯ ಅನೇಕ ಜವಾಬ್ಧಾರಿಗಳನ್ಜು ಸಮರ್ಥವಾಗಿ ನಿರ್ವಹಿಸಿ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗಾಗಿ ದುಡಿದ ಹಾಗೂ ವಿವಿಯ ಬೆಳವಣಿಗೆಗೆ ಕೊಡುಗೆ ನೀಡಿದ ಓರ್ವ ಆದರ್ಶ ವ್ಯಕ್ತಿತ್ವದ ಪ್ರಾಧ್ಯಾಪಕರಾಗಿದ್ದಾರೆ ಎಂದು ಮಂಗಳೂರು ವಿವಿ ಕುಲಪತಿ ಪ್ರೊ. ಪಿ‌.ಎಲ್. ಧರ್ಮ ಅವರು ಹೇಳಿದರು.

ಮಂಗಳೂರು ವಿಶ್ವವಿದ್ಯಾನಿಲಯದ ಎಸ್ ವಿ ಪಿ ಕನ್ನಡ ಅಧ್ಯಯನ ಸಂಸ್ಥೆಯ ವತಿಯಿಂದ ಮಂಗಳವಾರ  ಕನ್ನಡ ಪ್ರಾಧ್ಯಾಪಕರಾಗಿ, ವಿಭಾಗದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಪ್ರೊ.ನಾಗಪ್ಪ ಗೌಡ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಅವರಿಗೆ ಸನ್ಮಾನ ನೆರವೇರಿಸಿ ಮಾತನಾಡಿದರು. 

ಮಂಗಳೂರು ವಿವಿ ಕನ್ನಡ ವಿಭಾಗ ಮತ್ತು ಅಲ್ಲಿಯ ಪ್ರಾಧ್ಯಾಪಕರು  ಕನ್ನಡದ ಭಾಷೆ ಹಾಗೂ ಪರಂಪರೆಗೆ ಮೌಲಿಕ ಕೊಡುಗೆ ನೀಡುತ್ತಾ ಬಂದಿವೆ. ಆದರೆ ಕನ್ನಡ ಭಾಷೆಗೆ ಎದುರಾದ ಸವಾಲುಗಳೇನು ಎಂಬುದರ ಬಗ್ಗೆ ಚಿಂತನೆಗಳು ಅಗತ್ಯ ಎಂದರು.

 ವಿಶ್ರಾಂತ ಕುಲಪತಿಗಳು ಹಾಗೂ ವಿದ್ವಾಂಸರಾದ‌ ಪ್ರೊ. ಬಿ.ಎ. ವಿವೇಕ ರೈ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಮಂಗಳೂರು ವಿವಿಯ ಕನ್ನಡ ಅಧ್ಯಯನ ಸಂಸ್ಥೆಯಗೆ ದೊಡ್ಡ ಪರಂಪರೆಬಿದೆ.  ಪ್ರೊ.ಎಸ್ ವಿ ಪಿ, ಪ್ರೊ. ಲಕ್ಕಪ್ಪಗೌಡ ಸೇರಿದಂತೆ ಅನೇಕ ಹಿರಿಯ ಪ್ರಾಧ್ಯಾಪಕರು ಇಲ್ಲಿ ಸೇವೆ ಸಲ್ಲಿಸಿ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿ ನಿವೃತ್ತರಾಗಿದ್ದಾರೆ. ಎಲ್ಲರನ್ನು ಸೇರಿಕೊಂಡು ವಿವಿ, ವಿಭಾಗವನ್ನು ಕಟ್ಟುವುದು ಮಹತ್ತರವಾದ ಜವಬ್ಧಾರಿ‌. ಪ್ರೊ.ನಾಗಪ್ಪ ಗೌಡ ಅವರು ಈ ರೀತಿಗ ಕೆಲಸ ಮಾಡಿದ್ದಾರೆ. ಅವರು ಸೇವೆಯಿಂದ ನಿವೃತ್ತರಾದರೂ ವಿಭಾಗವು ಸದಾ ನೆನಪಿಡುವ ಕೆಲಸ ಮಾಡಿದ್ದಾರೆ ಎಂದರು.

ಮಂಗಳೂರು ವಿವಿ ಕಲಾನಿಕಾಯದ ಡೀನ್ ಪ್ರೊ. ಸೋಮಣ್ಣ ಹೊಂಗಳ್ಳಿ ಮಾತನಾಡಿ, ನಾಗಪ್ಪ ಗೌಡರದ್ದು ಬಡವರ ಪರವಾದ ಒಲವು. ಪಾರದರ್ಶಕ ವ್ಯಕ್ತಿತ್ವ ಎಂದರು.

ಎಸ್ ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಸಹಪ್ರಾಧ್ಯಾಪಕ ಡಾ. ಧನಂಜಯ ಕುಂಬ್ಳೆ ಮಾತನಾಡಿ, ನಾಯಕನಾದವನಿಗೆ ತಾಳ್ಮೆ, ತಣ್ಣನೆಯ ಹಠ, ಜೀವಪರ ಧೋರಣೆಯ ಬದ್ಧತೆ, ಎಲ್ಲರನ್ನೂ ಒಳಗೊಳ್ಳುವ ಗುಣ, ಪರರಿಗೆ ಕೇಡು ಬಗೆಯದಿರುವ ಸನ್ಮನಸು ಬೇಕು. ಪ್ರೊ. ನಾಗಪ್ಪ ಗೌಡರಲ್ಲಿ ಈ ಎಲ್ಲ ಗುಣಗಳಿದ್ದವು. ವಿವಿಯ ಕನ್ನಡ ವಿಭಾಗದ ಕಟ್ಟುವಿಕೆಯಲ್ಲಿ ಅವರ ಪ್ರಾಮಾಣಿಕ ಪ್ರಯತ್ನವಿದೆ ಎಂದರು.

ವಿಭಾಗದ ಸನ್ಮಾನ ಸ್ವೀಕರಿಸಿ ಮಾತನಾಡಿದ ಎಸ್ ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ ಪ್ರೊ‌. ನಾಗಪ್ಪ ಗೌಡ ಅವರು ಮಾತನಾಡಿ, ತಂದೆ ತಾಯಿಯ ಆಶೀರ್ವಾದ ಹಾಗೂ ದೊಡ್ಡ ಮಟ್ಟದ ಗುರುಪರಂಪರೆಯಿಂದಲೇ ನಾನು ಈ ಹಂತಕ್ಕೆ ಬೆಳೆದು ನಿಲ್ಲಲು ಕಾರಣವಾಯಿತು. ಅದೇ ರೀತಿ ಇದೀಗ ದೊಡ್ಡ ಶಿಷ್ಯ ಪರಂಪರೆಯೂ ಇರುವುದು ತೃಪ್ತಿ ತಂದಿದೆ.‌ ನಾನು ಘಟ್ಟ ಇಳಿದು 43 ವರ್ಷಗಳಾಗಿದ್ದು, ಬಳಿಕ ಇಲ್ಲಿಯೇ ವಿದ್ಯಾಭ್ಯಾಸ, ವೃತ್ತಿ ಜೀವನವನ್ನು ಆರಂಭಿಸಿ ಎಸ್ ವಿಪಿ ಕನ್ನಡ ಸಂಸ್ಥೆಯಲ್ಲಿ ಅಧ್ಯಕ್ಷನಾಗಿ ಪ್ರಾಮಾಣಿಕ ಸೇವೆ ಸಲ್ಲಿಸಿ ನಿವೃತ್ತಿಯಾಗುತ್ತಿದ್ದೇನೆ. ಅದ್ದರಿಂದ ಈ ಕರಾವಳಿಯ ಮಣ್ಣನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದರು. ಅಲ್ಲದೆ ತನ್ನ ವೃತ್ತಿ ಬದುಕಿನುದ್ದಕ್ಕೂ ಸಹಕಾರ ನೀಡಿದ ಪ್ರತಿಯೊಬ್ಬರಿಗೂ ಕೃತಜ್ಞತೆಯನ್ನು ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ವಿಶ್ರಾಂತ ಪ್ರಾಧ್ಯಾಪಕರಾದ ಪ್ರೊ. ಚಿನ್ನಪ್ಪ ಗೌಡ, ಪ್ರೊ. ಅಭಯ್ ಕುಮಾರ್, ಪರೀಕ್ಷಾಂಗ ಕುಲಸಚಿವ ಪ್ರೊ. ದೇವೇಂದ್ರಪ್ಪ, ಹಣಕಾಸು ಅಧಿಕಾರಿ ಪಂಚಲಿಂಗಸ್ವಾಮಿ ಸೇರಿದಂತೆ ಪ್ರೊ‌. ನಾಗಪ್ಪ ಗೌಡ ಅವರ ಪತ್ನಿ ಆಶಾ, ಪುತ್ರರಾದ  ಶ್ರೀವತ್ಸ, ಪೂರ್ಣಚಂದ್ರ ಮತ್ತು ಪ್ರೊ. ನಾಗಪ್ಪ ಗೌಡ ಅವರ ಸಹೋದ್ಯೋಗಿಗಳು, ಮಿತ್ರರು, ಸಂಶೋಧನಾ ವಿದ್ಯಾರ್ಥಿಗಳು, ವಿವಿದ ಪೀಠಗಳ ಸಿಬ್ಬಂದಿಗಳು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಉಪನ್ಯಾಸಕರಾದ ಡಾ. ಯಶುಕುಮಾರ್ ಅವರು ಕಾರ್ಯಕ್ರಮ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article