ಫುಲ್ ಟ್ಯಾಂಕ್ ಡೀಸೆಲ್ ತುಂಬಿಸಿ ಬಿಲ್ ಪಾವತಿಸದೆ ಪರಾರಿಯಾದ ಕಾರು ಚಾಲಕ

ಫುಲ್ ಟ್ಯಾಂಕ್ ಡೀಸೆಲ್ ತುಂಬಿಸಿ ಬಿಲ್ ಪಾವತಿಸದೆ ಪರಾರಿಯಾದ ಕಾರು ಚಾಲಕ


ಶಿರ್ವ: ಶಂಕರಪುರ ಸಮೀಪದ ಸುಭಾಸ್‌ನಗರ ಕುಂಜಾರುಗಿರಿ ಕ್ರಾಸ್ ಅನತಿ ದೂರದಲ್ಲಿರುವ ಇಂಡಿಯನ್ ಆಯಿಲ್ ಫಿಲ್ಲಿಂಗ್ ಸ್ಟೇಶನ್‌ನಲ್ಲಿ  ಡೀಸೆಲ್ ತುಂಬಿಸಿಕೊಂಡು ಹಣ ಪಾವತಿಸದೆ ಪರಾರಿಯಾದ ಘಟನೆ ಶನಿವಾರ ರಾತ್ರಿ ನಡೆದಿದೆ.

ಬಿಳಿ ಬಣ್ಣದ ಫೋರ್ಡ್ ಇಕೋ ಸ್ಫೋರ್ಟ್ಸ್ ಕಾರಿನಲ್ಲಿ ಬಂದ ಮೂವರು ಯುವಕರು ಫುಲ್ ಟ್ಯಾಂಕ್ ಡೀಸೆಲ್ ತುಂಬಿಸಿಕೊಳ್ಳುವಂತೆ ಸಿಬ್ಬಂದಿಗೆ ತಿಳಿಸಿದ್ದರು. ಬಳಿಕ ಬಿಲ್ ನೀಡುವಂತೆ ಹೇಳಿ ಯಾವುದೇ ಹಣ ಪಾವತಿಸದೆ ಕಾರನ್ನು ಅತೀ ವೇಗವಾಗಿ ಚಲಾಯಿಸಿಕೊಂಡು ಪರಾರಿಯಾಗಿದ್ದಾರೆ.

ಒಟ್ಟು 4,711 ರೂ. ಮೌಲ್ಯದ ಡೀಸೆಲ್ ತುಂಬಿಸಿಕೊಳ್ಳಲಾಗಿದೆ. ಕಾರಿನ ಒಳಗೆ ಮೂವರು ಯುವಕರಿದ್ದು, ಅವರು ತುಳು ಭಾಷೆಯಲ್ಲಿ ನಿರರ್ಗಳವಾಗಿ ಮಾತನಾಡುತ್ತಿದ್ದರು ಎನ್ನಲಾಗಿದೆ. ತಾವು ಕುಮಟಾದವರು ಎಂದು ಹೇಳಿದ್ದರೂ ಅದು ಸುಳ್ಳಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಯುವಕರು ಮದ್ಯಪಾನ ಮಾಡಿರಬಹುದು ಎಂಬ ಅನುಮಾನವೂ ವ್ಯಕ್ತವಾಗಿದ್ದು, ಕಾರಿನ ಒಳಗೆ ಬಿಯರ್ ಬಾಟಲ್ ಹಾಗೂ ಚಿಪ್ಸ್ ಇದ್ದುದಾಗಿ ಸಿಬ್ಬಂದಿ ತಿಳಿಸಿದ್ದಾರೆ. 

ವಾಹನಕ್ಕೆ ಟೆಂಟ್ ಗ್ಲಾಸ್ ಅಳವಡಿಸಲಾಗಿತ್ತು. ಈ ಕುರಿತು ಪೆಟ್ರೋಲ್ ಬಂಕ್ ಸಿಬ್ಬಂದಿ ಮಂಗಳವಾರ ಶಿರ್ವ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಸಿಸಿ ಟಿವಿ ದೃಶ್ಯಗಳಲ್ಲಿ ಕಾರಿನ ನೋಂದಣಿ ಸಂಖ್ಯೆ ಸ್ಪಷ್ಟವಾಗಿ ಕಾಣಿಸದ ಕಾರಣ ವಾಹನದ ಗುರುತು ಪತ್ತೆ ಹಚ್ಚಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article