ಖ್ಯಾತ ಗಾಯಕಿ ಎಸ್. ಜಾನಕಿ ಕಮಲಶಿಲೆಗೆ ಭೇಟಿ

ಖ್ಯಾತ ಗಾಯಕಿ ಎಸ್. ಜಾನಕಿ ಕಮಲಶಿಲೆಗೆ ಭೇಟಿ


ಕುಂದಾಪುರ: ದಕ್ಷಿಣ ಭಾರತದ ಖ್ಯಾತ ಗಾಯಕಿ ಎಸ್. ಜಾನಕಿ ಮಂಗಳವಾರ ತಮ್ಮ ಕುಟುಂಬದವರೊಂದಿಗೆ ಶ್ರೀ ಕ್ಷೇತ್ರ ಕಮಲಶಿಲೆಗೆ ಆಗಮಿಸಿ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರೀ ಅಮ್ಮನವರ ದರ್ಶನ ಪಡೆದರು. ಶ್ರೀ ದೇವಿಗೆ ತುಪ್ಪದ ದೀಪ ಸೇವೆಯನ್ನು ಸಮರ್ಪಿಸಿ ವಿಶೇಷ ಪೂಜೆ ಸಲ್ಲಿಸಿದ ಅವರು ನಂತರ ಭೋಜನ ಪ್ರಸಾದ ಸ್ವೀಕರಿಸಿ ತೆರಳಿದರು. 


ದೇವಳದ ಅನುವಂಶೀಯ ಆಡಳಿತ ಮೊಕ್ತೇಸರ ಎಸ್. ಸಚ್ಚಿದಾನಂದ ಚಾತ್ರ ಗಾಯಕಿ ಮತ್ತು ಕುಟುಂಬದವರನ್ನು ಬರಮಾಡಿಕೊಂಡರು. 

ಜಾನಕಿಯವರಿಗೆ ಪ್ರಸಾದ ರೂಪವಾಗಿ ಶಾಲು ಹೊದೆಸಿ, ಮಂಗಳ ದ್ರವ್ಯಗಳನ್ನಿತ್ತು ಗೌರವಿಸಿದರು. ಅವರ ಪುತ್ರಿ, ಕುಟುಂಬ ಸದಸ್ಯರು, ದೇವಳದ ಜೊತೆ ಮೊಕ್ತೇಸರ ಚಂದ್ರಶೇಖರ ಶೆಟ್ಟಿ, ಅರ್ಚಕ ಶ್ರೀಧರ ಅಡಿಗ, ಗುರುಪ್ರಸಾದ್ ಇನ್ನಿತರರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article