ಮೂಡುಬಿದಿರೆ: ಗಾಳಿ-ಮಳೆಗೆ ಪತ್ರಕತ೯ ಜಗದೀಶ್ ಪೂಜಾರಿ ಮನೆಗೆ ಹಾನಿ
Tuesday, June 30, 2026
ಮೂಡುಬಿದಿರೆ: ಮೂಡುಬಿದಿರೆ ತಾಲೂಕಿನ ಪಾಲಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಡಂದಲೆ ಪೂಪಾಡಿಕಲ್ಲಿನಲ್ಲಿ ಪತ್ರಕರ್ತ ಜಗದೀಶ್ ಪೂಜಾರಿ ಅವರ ಮನೆಯ ಮೇಲೆ ಸೋಮವಾರ ರಾತ್ರಿ ಮರವೊಂದು ಬಿದ್ದು ಮನೆಯು ಭಾಗಶಃ ಹಾನಿಗೊಳಗಾಗಿದೆ.
ರಾತ್ರಿ ಸುರಿದ ಗಾಳಿ-ಮಳೆಯ ತೀವ್ರತೆಗೆ ಮನೆಯ ಸಮೀಪದಲ್ಲಿದ್ದ ಮರವೊಂದು ಉರುಳಿ ಮನೆ
ಯ ಮೇಲ್ಛಾವಣಿಗೆ ಬಿದ್ದ ಪರಿಣಾಮ ಮನೆಯ ಒಂದು ಭಾಗಕ್ಕೆ ಹಾನಿಯಾಗಿದೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.
ಗ್ರಾಮ ಆಡಳಿತ ಅಧಿಕಾರಿ ಶ್ರೀನಿವಾಸ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.