ಮಾದಕವಸ್ತು ಸೇವನೆ: ಇಬ್ಬರ ಬಂಧನ
Monday, June 29, 2026
ಬಂಟ್ವಾಳ: ತಾಲೂಕು ಪುದು ಗ್ರಾಮದ ಸುಜೀರು ನದಿ ಬದಿಮಾದಕ ವಸ್ತುವನ್ನು ಸೇವಿಸಿ ನಶೆಯೇರಿಸಿಕೊಂಡು ಸಾರ್ವಜನಿಕ ಸ್ಥಳದಲ್ಲಿ ಜನರಿಗೆ ತೊಂದರೆಯಾಗುವಂತೆ ವರ್ತಿಸುತ್ತಿದ್ದ ಇಬ್ಬರು ಯುವಕರನ್ನು ಬಂಟ್ಚಾಳ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಆದಂ ರಕೀಝ್ ಹಾಗೂ ಅಬ್ದುಲ್ ರಫತ್ ಬಂಧಿತ ಯುವಕರಾಗಿದ್ದಾರೆ. ಖಚಿತ ವರ್ತಮಾನದ ಮೇರೆಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಎಸ್‌ಐ ಕಲೈಮಾರ್ ಪಿ., ಮತ್ತವರ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಪರಿಶೀಸಿಲಿಸದಾಗ ಇಬ್ಬರು ಯುವಕರು ಮಾದಕ ವಸ್ತುವನ್ನು ಸೇವಿಸಿ ನಶೆ ಹೊಂದಿ ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ವರ್ತಿಸುತ್ತಿರುವುದು ಕಂಡು ಬಂದಿದೆ.
ಕೂಡಲೇ ಯುವಕರಿಬ್ಬರನ್ನು ವಶಕ್ಕೆ ಪಡೆದು ವಿಚಾರಿಸಿ ಮಾದಕವಸ್ತು ಸೇವನೆಯ ಬಗ್ಗೆ ಖಚಿತಪಡಿಸಿಕೊಳ್ಳಲು ಬಂಟ್ವಾಳ ತಾಲೂಕು ಆಸ್ಪತ್ರೆಯಲ್ಲಿ ತಪಾಸಣೆಗೊಳಪಡಿಸಿದಾಗ ಇವರಿಬ್ಬರು ಮಾದಕವಸ್ತು ಸೇವಿಸಿರುವುದು ದೃಢಪಟ್ಟಿರುತ್ತದೆ.
ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.