ಮೆಡಿಕಲ್‌ಗಳಲ್ಲಿ ಪರಿಶೀಲನೆ
Monday, June 29, 2026
ಬಂಟ್ವಾಳ: ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆಯ ಪ್ರಯುಕ್ತ ಬಂಟ್ವಾಳ ನಗರ ಠಾಣಾ ಪೊಲೀಸರು ಹಾಗೂ ಔಷಧ ನಿಯಂತ್ರಣ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಬಂಟ್ವಾಳದ ವಿವಿಧ ಔಷಧಿ ಅಂಗಡಿಗಳಿಗಳಿಗೆ (ಮೆಡಿಕಲ್) ಭೇಟಿ ನೀಡಿ ಮಾರಾಟವಾಗುವ ಔಷಧಿಗಳ ದಾಖಲೆಗಳನ್ನು ಪರಿಶೀಲಿಸಿದರು.
ವೈದ್ಯರ ಪ್ರಿಸ್ಕ್ರಿಪ್ಷನ್ ಆಧಾರಿತ ಔಷಧಗಳ ವಿತರಣೆ, ನಿಷೇಧಿತ ಹಾಗೂ ದುರುಪಯೋಗಕ್ಕೆ ಒಳಪಡುವ ಔಷಧಿಗಳ ಸಂಗ್ರಹ ಮತ್ತು ಮಾರಾಟದ ಕ್ರಮಗಳ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಮಾದಕ ವಸ್ತುಗಳ ದುರುಪಯೋಗಕ್ಕೆ ಕಾರಣವಾಗಬಹುದಾದ ಔಷಧಿಗಳನ್ನು ವೈದ್ಯರ ಅಗತ್ಯ ದಾಖಲೆಗಳಿಲ್ಲದೆ ಮಾರಾಟ ಮಾಡಬಾರದು ಎಂದು ಮೆಡಿಕಲ್ ಮಾಲೀಕರು ಮತ್ತು ಸಿಬ್ಬಂದಿಗೆ ಸೂಚನೆ ನೀಡಲಾಯಿತಲ್ಲದೆ ಔಷಧ ಮಾರಾಟಕ್ಕೆ ಸಂಬಂಧಿಸಿದ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಅಧಿಕಾರಿಗಳು ನಿರ್ದೇಶನ ನೀಡಿದರು.