ಜೂ.28 ರಂದು ರಾಷ್ಟ್ರೀಯ ಪಲ್ಸ್ ಪೋಲಿಯೋ: ಡಾ. ಎಚ್.ಆರ್. ತಿಮ್ಮಯ್ಯ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬೆಳಗ್ಗೆ 8ರಿಂದ ಸಂಜೆ 5ರವರೆಗೆ ಪಲ್ಸ್ ಪೋಲಿಯೋ ಕಾರ್ಯಕ್ರಮ ಜಿಲ್ಲೆಯಾದ್ಯಂತ ನಡೆಯಲಿದೆ. ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ಬೆಂಗಳೂರಿನಲ್ಲಿ ನಡೆಯುವ ಪ್ರಧಾನ ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದು ಮಾಹಿತಿ ನೀಡಿದರು.
ನಗರದ ಲೇಡಿಗೋಶನ್ ಆಸ್ಪತ್ರೆಯಲ್ಲಿ ಅಂದು ಬೆಳಗ್ಗೆ 8 ಗಂಟೆಗೆ ಸಂಸದರು, ಶಾಸಕರ ಉಪಸ್ಥಿತಿಯಲ್ಲಿ ಉದ್ಘಾ ಟನೆ ನಡೆಯಲಿದೆ. ಪ್ರತಿ ಮಗುವಿಗೂ ಎರಡು ಜೀವ ಕ್ಷಕ ಪೋಲಿಯೋ ಹನಿ ಹಾಕಿಸಬೇಕು ಎಂದು ವಿವರಿಸಿದರು.
1,40,677 ಮಕ್ಕಳಿಗೆ ಪೋಲಿಯೋ ಹನಿ ಹಾಕಿಸುವ ಗುರಿ:
ದ.ಕ. ಜಿಲ್ಲೆಯಲ್ಲಿ 0-5 ವರ್ಷದೊಳಗಿನ 1,40,677 ಮಕ್ಕಳಿಗೆ ಪೋಲಿಯೋ ಹನಿ ಹಾಕಿಸುವ ಗುರಿ ಹೊಂದಲಾ ಗಿದ್ದು, ಇದಕ್ಕಾಗಿ ಒಟ್ಟು 756 ಬೂತ್‌ಗಳನ್ನು ತೆರೆಯಲಾಗುವುದು. ಈ ಪೈಕಿ 26 ಟ್ರಾನ್ಸಿಟ್ ತಂಡ, ಮಂಗಳೂರು ನಗರದಲ್ಲಿ ಮೂರು ಮೊಬೈಲ್ ತಂಡ ಇರಲಿದೆ ಮಾಹಿತಿ ನೀಡಿದರು.
26 ಟ್ರಾನ್ಸಿಟ್ ತಂಡಗಳು ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣ, ಸುಬ್ರಹ್ಮಣ್ಯ, ಧರ್ಮಸ್ಥಳ, ಕಟೀಲು ಸಹಿತ ದೇವಸ್ಥಾನಗಳಲ್ಲಿ ಕಾರ್ಯನಿರ್ವಹಿಸಲಿವೆ. ಜಿಲ್ಲೆಯಲ್ಲಿ 506 ಮಂದಿ ವಲಸೆ ಮಕ್ಕಳಿದ್ದು, ಅವರಿಗೂ ಪೋಲಿಯೋ ಹನಿ ಹಾಕಿಸಲು ಕ್ರಮ ಕೈಗೊಳ್ಳಲಾಗುವುದು. ಜನತೆ ಯಾವುದೇ ಗೊಂದಲ, ಅನುಮಾನವಿಲ್ಲದೆ ಪೋಲೀಯೋ ಹನಿ ಹಾಕಿಸಿಕೊಳ್ಳುವಂತೆ ಅವರು ವಿನಂತಿಸಿದರು.ದೇಶದಲ್ಲಿ 2011ರ ಜನವರಿ 13ರಂದು ಕೊನೆಯ ಪೋಲಿಯೋ ಪ್ರಕರಣ ಪತ್ತೆಯಾಗಿತ್ತು. ರಾಜ್ಯದಲ್ಲಿ 2007ರಲ್ಲಿ ಕೊನೆಯ ಪೋಲಿಯೋ ಪ್ರಕರಣ ಕಂಡು ಬಂದಿದೆ. 2014ರ ಮಾರ್ಚ್ 27ಕ್ಕೆ ನಮ್ಮ ದೇಶವನ್ನು ಪೋಲಿಯೋ ಸಾಂಕ್ರಾಮಿಕ ದೇಶಗಳ ಪಟ್ಟಿಯಿಂದ ಹೊರಗಿಡಲಾಗಿದೆ. ಕಳೆದ 14 ವರ್ಷಗಳಿಂದ ನಮ್ಮ ದೇಶ ಪೋಲಿಯೋ ಮುಕ್ತವಾಗಿದೆ. ಆದರೆ, ನೆರೆಯ ರಾಷ್ಟ್ರ ಗಳಲ್ಲಿ ಪೋಲಿಯೋ ಪ್ರಕರಣಗಳು ಕಂಡುಬಂದಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಪೋಲಿಯೋ ಲಸಿಕೆ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳಾದ ಡಾ. ರಾಜೇಶ್ ಬಿ.ವಿ, ಡಾ. ಸುದರ್ಶನ್, ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ ಉಳೇಪಾಡಿ ಉಪಸ್ಥಿತರಿದ್ದರು.