ಮಳೆಗಾಲದ ಸಂಭಾವ್ಯ ಸವಾಲುಗಳನ್ನು ಎದುರಿಸಲು ಮೆಸ್ಕಾಂ ಸಿದ್ಧ-499 ಮ೦ದಿಯ ವಿಶೇಷ ಕಾಯ೯ಪಡೆ: 64 ವಾಹನಗಳು

ಮಳೆಗಾಲದ ಸಂಭಾವ್ಯ ಸವಾಲುಗಳನ್ನು ಎದುರಿಸಲು ಮೆಸ್ಕಾಂ ಸಿದ್ಧ-499 ಮ೦ದಿಯ ವಿಶೇಷ ಕಾಯ೯ಪಡೆ: 64 ವಾಹನಗಳು

ಮ೦ಗಳೂರು: ವಿದ್ಯುತ್‌ಗೆ ಸ೦ಬ೦ಧಿಸಿದ೦ತೆ ಮಳೆಗಾಲದ ಸ೦ಭಾವ್ಯ ಸವಾಲುಗಳನ್ನು ಎದುರಿಸಲು ಮೆಸ್ಕಾ೦ ಸನ್ನದ್ದವಾಗಿದ್ದು, ವಿಭಾಗವಾರು ತುರ್ತು ನಿರ್ವಹಣಾ ಕೆಲಸಗಳನ್ನು ನಿರ್ವಹಿಸಲು ಮೆಸ್ಕಾ೦ ವ್ಯಾಪ್ತಿಯ 4 ಜಿಲ್ಲೆಗಳ 14 ವಿಭಾಗಗಳಿಗೆ ಒಟ್ಟು 489 ಮ೦ದಿಯ ಕಾಯ೯ಪಡೆಯನ್ನು ರಚಿಸಲಾಗಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

ಒಟ್ಟು 62 ವಾಹನಗಳನ್ನು ಹೆಚ್ಚುವರಿಯಾಗಿ ವ್ಯವಸ್ಥೆಗೊಳಿಸಲಾಗಿದೆ. ಇದಲ್ಲದೆ ದೂರವಾಣಿ ಕರೆಗಳ ನಿವ೯ಹಣೆಗಾಗಿ 23 ಮ೦ದಿಯ ವಿಶೇಷ ಪಡೆಯನ್ನು  ಸಿದ್ದಗೊಳಿಸಲಾಗಿದೆ. 

ತುರ್ತು ಸ೦ದಭ೯ಗಳಲ್ಲಿ ಸ್ಪ೦ದಿಸಲು ಮಂಗಳೂರು ಜಿಲ್ಲೆಗೆ ಸ೦ಬಂಧಿಸಿದಂತೆ ಅತ್ತಾವರ-12 ಮ೦ದಿಯ ಕಾಯ೯ಪಡೆ, 6 ವಾಹನಗಳು, ಕಾವೂರು-36 ಮ೦ದಿ, 8 ವಾಹನಗಳು. ಪುತ್ತೂರು-48 ಮ೦ದಿಯ ಕಾಯ೯ಪಡೆ, 8 ವಾಹನಗಳು. ಬಂಟ್ವಾಳ-50 ಮ೦ದಿಯ ಕಾಯ೯ಪಡೆ, 7 ವಾಹನಗಳು.

ಉಡುಪಿ ಜಿಲ್ಲೆಗೆ ಸ೦ಬಂಧಿಸಿದಂತೆ ಉಡುಪಿ-55 ಮ೦ದಿಯ ಕಾಯ೯ಪಡೆ, 5 ವಾಹನಗಳು, ಕಾರ್ಕಳ-24 ಮ೦ದಿಯ ಕಾಯ೯ಪಡೆ, 4 ವಾಹನಗಳು, ಕುಂದಾಪುರ-48 ಮ೦ದಿಯ ಕಾಯ೯ಪಡೆ.

ಶಿವಮೊಗ್ಗ ಜಿಲ್ಲೆಗೆ ಸ೦ಬಂಧಿಸಿದಂತೆ ಶಿವಮೊಗ್ಗ-33 ಮ೦ದಿಯ ಕಾಯ೯ಪಡೆ, 1 ವಾಹನ, ಶಿಕಾರಿಪುರ-24 ಮ೦ದಿಯ ಕಾಯ೯ಪಡೆ, 3 ವಾಹನಗಳು, ಭದ್ರಾವತಿ-20 ಮ೦ದಿಯ ಕಾಯ೯ಪಡೆ, 2 ವಾಹನಗಳು, ಸಾಗರ- 34 ಮ೦ದಿಯ ಕಾಯ೯ಪಡೆ, 6 ವಾಹನಗಳು. 

ಚಿಕ್ಕಮಗಳೂರು ಜಿಲ್ಲೆಗೆ ಸ೦ಬಂಧಿಸಿದಂತೆ ಚಿಕ್ಕಮಗಳೂರು-40 ಮ೦ದಿಯ ಕಾಯ೯ಪಡೆ, 4 ವಾಹನಗಳು, ಕೊಪ್ಪ-41 ಮ೦ದಿಯ ಕಾಯ೯ಪಡೆ, 3 ವಾಹನಗಳು, ಕಡೂರು 34 ಮ೦ದಿಯ ಕಾಯ೯ಪಡೆ 7 ವಾಹನಗಳನ್ನು ವ್ಯವಸ್ಥೆಗೊಳಿಸಲಾಗಿದೆ.

ವಿದ್ಯುತ್ ಸರಬರಾಜು ವ್ಯವಸ್ಥೆಗೆ ಅಡಚಣೆಯಾಗುವ ಮತ್ತು ಅಪಾಯಕಾರಿಯಾಗಿರುವ ಮರ/ಕೊಂಬೆಗಳನ್ನು ಕತ್ತರಿಸುವ ಕೆಲಸ ಕಾರ್ಯವನ್ನು ಈಗಾಗಲೇ ಪ್ರಾರಂಭಿಸಿದ್ದು, ಹಲವು ಕಡೆ ಕೆಲಸ ಪ್ರಗತಿಯಲ್ಲಿದೆ. ಅಪಾಯಕಾರಿ ಸ್ಥಿತಿಯಲ್ಲಿ ಕಂಡುಬರುವ ವಿದ್ಯುತ್ ಕಂಬಗಳು ಮತ್ತು ತಂತಿಗಳನ್ನು ಸರಿಪಡಿಸುವ ಕಾರ್ಯ ಪ್ರಗತಿಯಲ್ಲಿದೆ.  


ನಾಲ್ಕು ಜಿಲ್ಲೆಗಳ ವ್ಯಾಪ್ತಿಯಲ್ಲಿ ಮಳೆಗಾಲದ ಪೂರ್ವ ಸಿದ್ಧತಾ ಚಟುವಟಿಕೆಗಳು ಈಗಾಗಲೇ ಪ್ರಾರಂಭಗೊಂಡಿವೆ, ಕಂಪೆನಿ ವ್ಯಾಪ್ತಿಯ ಎಲ್ಲಾ ಕ್ಷೇತ್ರಾಧಿಕಾರಿಗಳು ತಮ್ಮ ಕಾರ್ಯ ವ್ಯಾಪ್ತಿಯಲ್ಲಿ ಅಗತ್ಯ ಕ್ರಮಗಳನ್ನು ಪರಿಣಾಮಕಾರಿಯಾಗಿ ಕೈಗೊಳ್ಳುವಂತೆ ಸೂಚನೆ ನೀಡಲಾಗಿದ್ದು, ಅವರುಗಳು ಕಾರ್ಯಪ್ರವೃತ್ತರಾಗಿದ್ದಾರೆ.

ಗ್ರಾಹಕರು ವಿದ್ಯುತ್ ಸಂಬಂಧಿತ ದೂರುಗಳಿಗೆ 24*7 ಕೇಂದ್ರೀಯ ಸೇವಾ ಕೇಂದ್ರವನ್ನು ಮೆಸ್ಕಾಂ ಸಹಾಯವಾಣಿ ಸಂಖ್ಯೆ 1912 ಮೂಲಕ ಸಂಪರ್ಕಿಸಬಹುದು ಅಲ್ಲದೇ ಅಪಾಯಕಾರಿ ಮತ್ತು ತುರ್ತು ಸಂದರ್ಭಗಳಲ್ಲಿ ದೂರವಾಣಿ ಸಂಖ್ಯೆ 8277883388 ಮತ್ತು 0824-2950953 ನ್ನು ಸಂಪರ್ಕಿಸಬಹುದು ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article