ಮೋದಿ ಸರಕಾರದ ನೀತಿಗಳಿಂದ ಕಾರ್ಮಿಕ ವರ್ಗದ ಬದುಕು ವಿನಾಶದತ್ತ: ಸುಕುಮಾರ್ ತೊಕ್ಕೋಟು
ವೇದಿಕೆಯಲ್ಲಿ ಉಪಸ್ಥಿತರಿದ್ದ CPIM ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಮಾತನಾಡಿ, ದ.ಕ.ಜಿಲ್ಲೆಯ ರಾಜಕಾರಣ ಉಳ್ಳವರ ಪರವಾಗಿ ವ್ಯವಸ್ಥಿತವಾಗಿ ಮುಂದುವರಿಯುತ್ತಿದ್ದು, ಅಭಿವೃದ್ಧಿ ಹಾಗೂ ಸೌಹಾರ್ದತೆಯ ಪ್ರಶ್ನೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯವರು ಕೊಡುಕೊಳ್ಳುವಿಕೆಯಲ್ಲಿಯೇ ಮಗ್ನರಾಗಿದ್ದಾರೆ.ಆದರೆ ಇಲ್ಲಿನ ಸಾಮಾನ್ಯ ಜನತೆಯ ಶಿಕ್ಷಣ ಉದ್ಯೋಗ, ಆರೋಗ್ಯದ ಸೇರಿದಂತೆ ಬದುಕಿನ ಪ್ರಶ್ನೆಯಲ್ಲಿ ಮಾತನಾಡಲು ಇವರಿಬ್ಬರಿಗೂ ಆಸಕ್ತಿ ಇಲ್ಲವಾಗಿದೆ. ಕಮ್ಯುನಿಸ್ಟ್ ಪಕ್ಷ ಮಾತ್ರವೇ ಅತ್ಯಂತ ಹಿಂದುಳಿದ, ಶೋಷಿತರ, ಬಡವರ ಪರವಾಗಿ ಗಟ್ಟಿ ಧ್ವನಿಯನ್ನು ಮೊಳಗಿಸುತ್ತದೆ. ಆರೋಗ್ಯ ಕ್ಷೇತ್ರವನ್ನೇ ಮಾರಲು ಹೊರಟ ರಾಜ್ಯ ಸರಕಾರದ ಜನವಿರೋಧಿ ನೀತಿಯ ವಿರುದ್ಧ ಹಾಗೂ ಆರೋಗ್ಯ ಸಚಿವರ ದುರಂಹಕಾರದ ವಿರುದ್ಧ ಮುಂದಿನ ದಿನಗಳಲ್ಲಿ ಸಮರಶೀಲ ಹೋರಾಟವನ್ನು ರೂಪಿಸಲು CPIM ಸಜ್ಜಾಗಿದೆ ಎಂದು ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು CPIM ಹಿರಿಯ ನಾಯಕರಾದ ಸುಂದರ ಕುಂಪಲರವರು ವಹಿಸಿದ್ದರು. ವೇದಿಕೆಯಲ್ಲಿ CPIM ಹಿರಿಯ ನಾಯಕರಾದ ಕೃಷ್ಣಪ್ಪ ಸಾಲ್ಯಾನ್, ಪದ್ಮಾವತಿ ಶೆಟ್ಟಿ,CPIM ಜಿಲ್ಲಾ ಸಮಿತಿ ಸದಸ್ಯರಾದ ಶೇಖರ್ ಕುಂದರ್,ಜಯಂತ ನಾಯಕ್, ರಫೀಕ್ ಹರೇಕಳ,CPIM ಉಳ್ಳಾಲ ವಲಯ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಉಪಸ್ಥಿತರಿದ್ದರು.
