ಎಂಆರ್‌ಪಿಎಲ್-ಇಡ್ಯಾ ಕಡಲತೀರ ಸ್ವಚ್ಛತಾ ಅಭಿಯಾನ

ಎಂಆರ್‌ಪಿಎಲ್-ಇಡ್ಯಾ ಕಡಲತೀರ ಸ್ವಚ್ಛತಾ ಅಭಿಯಾನ


ಮಂಗಳೂರು: ವಿಶ್ವ ಪರಿಸರ ದಿನಾಚರಣೆ-2026ರ ಅಂಗವಾಗಿ ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಂಆರ್‌ಪಿಎಲ್) ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಂಯುಕ್ತವಾಗಿ ಜೂನ್ 2ರಂದು ಸುರತ್ಕಲ್ ಸಮೀಪದ ಇಡ್ಯಾ ಕಡಲತೀರದಲ್ಲಿ ಸ್ವಚ್ಛತಾ ಅಭಿಯಾನವನ್ನು ಆಯೋಜಿಸಿತು.


ಮುಖ್ಯ ಅತಿಥಿಯಾಗಿ ಕೆಎಸ್‌ಪಿಸಿಬಿ ಮಂಗಳೂರು ಹಿರಿಯ ಪರಿಸರ ಅಧಿಕಾರಿ ರಾಜಶೇಖರ್ ಪುರಾಣಿಕ್ ಭಾಗವಹಿಸಿದ್ದರು. ವಿಶೇಷ ಆಹ್ವಾನಿತರಾಗಿ ಪರಿಸರ ಅಧಿಕಾರಿ ಡಾ. ಮಂಜು ಆರ್. ಉಪಸ್ಥಿತರಿದ್ದರು.


ಸುರತ್ಕಲ್ ನಾಗರಿಕ ಸಲಹಾ ಸಮಿತಿಯ ಸದಸ್ಯರು, ಅಧ್ಯಕ್ಷ ಸತೀಶ್ ಸದಾನಂದ ನೇತೃತ್ವದಲ್ಲಿ ಭಾಗವಹಿಸಿದ್ದು, ಗೋವಿಂದ ದಾಸ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಎಂಆರ್‌ಪಿಎಲ್ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ವಚ್ಛತಾ ಕಾರ್ಯದಲ್ಲಿ ಕೈಜೋಡಿಸಿದರು.


ಕಾರ್ಯಕ್ರಮದಲ್ಲಿ ಎಂಆರ್‌ಪಿಎಲ್‌ನ ಗುಂಪು ಮಹಾ ವ್ಯವಸ್ಥಾಪಕ (ಎಚ್‌ಎಸ್‌ಇ) ಎಚ್.ಎಸ್. ರಾಜೀವ್, ಮುಖ್ಯ ಮಹಾ ವ್ಯವಸ್ಥಾಪಕ (ಎಚ್‌ಎಸ್‌ಇ) ಕೃಷ್ಣ ಪಿಳ್ಳೈ ಅನಿಲ್ ಕುಮಾರ್, ಮಹಾ ವ್ಯವಸ್ಥಾಪಕ (ಎಚ್‌ಎಸ್‌ಇ) ಪ್ರಸನ್ನ ಕುಮಾರ್ ಟಿ., ಮಹಾ ವ್ಯವಸ್ಥಾಪಕ (ಎಚ್‌ಎಸ್‌ಇ) ರಾಜೇಂದ್ರ ಆಚಾರ್ಯ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.


150ಕ್ಕೂ ಹೆಚ್ಚು ಸ್ವಯಂಸೇವಕರು ಹಾಗೂ ಎಂಆರ್‌ಪಿಎಲ್ ಸಿಬ್ಬಂದಿ ಉತ್ಸಾಹದಿಂದ ಕಡಲತೀರ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article