ಅಯೋಧ್ಯಾದಲ್ಲಿ ನಡೆದ ಘಟನೆ ದುಃಖ ತಂದಿದೆ: ರಾಮ ಜನ್ಮಭೂಮಿ ಟ್ರಸ್ಟ್

ಅಯೋಧ್ಯಾದಲ್ಲಿ ನಡೆದ ಘಟನೆ ದುಃಖ ತಂದಿದೆ: ರಾಮ ಜನ್ಮಭೂಮಿ ಟ್ರಸ್ಟ್

ಮಂಗಳೂರು: ಶ್ರೀರಾಮ ಮಂದಿರದಲ್ಲಿ (ಅಯೋಧ್ಯಾ) ಕಳೆದ ಕೆಲವು ದಿನಗಳಿಂದ ಕೇಳಿಬರುತ್ತಿರುವ ಘಟನೆಗಳಿಂದ ನಾವು ಸ್ತಬ್ಧರಾಗಿದ್ದೇವೆ, ಆಘಾತಕ್ಕೊಳಗಾಗಿದ್ದೇವೆ ಮತ್ತು ಅತ್ಯಂತ ದುಃಖಿತರಾಗಿದ್ದೇವೆ. ಸಮಸ್ತ ರಾಮಭಕ್ತರು ಮತ್ತು ರಾಮಸೇವಕರ ಪ್ರತಿನಿಧಿಗಳಾಗಿ ಇಲ್ಲಿ ಸೇವೆ ಸಲ್ಲಿಸುತ್ತಿರುವ ನಾವು, ಇದರ ನ್ಯಾಯಸಮ್ಮತ ತನಿಖೆ ಹಾಗೂ ರಾಮಭಕ್ತರಿಗೆ ಭರವಸೆ ನೀಡಲು ಬದ್ಧರಾಗಿದ್ದೇವೆ ಎಂದು ರಾಮ ಜನ್ಮಭೂಮಿ ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ (ನ್ಯಾಸ)ದ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಜೀ ಮತ್ತು ಟ್ರಸ್ಟಿ ಅನಿಲ್ ಮಿಶ್ರಾ ಜೀ ಅವರಿಂದ ರಾಜೀನಾಮೆ ಪತ್ರ ಸ್ವೀಕೃತವಾಗಿದೆ. ಟ್ರಸ್ಟ್ ತನ್ನ ಮುಂಬರುವ ಸಭೆಯಲ್ಲಿ ಈ ಕುರಿತು ಪರಿಶೀಲಿಸಲಿದೆ.

ಪ್ರಭು ಶ್ರೀರಾಮನ ಸೇವೆಗೆ ಅರ್ಪಿಸಲು ಬೆಳ್ಳಿಯ ಇಟ್ಟಿಗೆಗಳು, ಆಭರಣಗಳು ಇತ್ಯಾದಿಗಳನ್ನು ಟ್ರಸ್ಟ್‌ನ ಅಧಿಕಾರಿಗಳಿಗೆ ವೈಯಕ್ತಿಕವಾಗಿ ಹಸ್ತಾಂತರಿಸಿದ ಶ್ರದ್ಧಾಳು ಭಕ್ತರಿಗೆ ಟ್ರಸ್ಟ್ ಭರವಸೆ ನೀಡಬಯಸುತ್ತದೆ ಏನೆಂದರೆ, ಆ ಎಲ್ಲಾ ವಸ್ತುಗಳು ಸುರಕ್ಷಿತವಾಗಿದ್ದು, ನಿಖರವಾದ ಲೆಕ್ಕಾಚಾರದೊಂದಿಗೆ ಲಭ್ಯವಿವೆ.

ಮಂದಿರದ ಕಾಣಿಕೆ ಪೆಟ್ಟಿಗೆಗಳಿಂದ ಸಂಗ್ರಹವಾದ ಹಣದ ಘಟನೆಗೆ ಸಂಬಂಧಿಸಿದಂತೆ, ಟ್ರಸ್ಟ್‌ನ ವಿನಂತಿಯ ಮೇರೆಗೆ ಉತ್ತರ ಪ್ರದೇಶ ಸರ್ಕಾರವು ರಚಿಸಿದ ಎಸ್‌ಐಟಿ (ವಿಶೇಷ ತನಿಖಾ ತಂಡ)ಗೆ ನೀಡಿದ ಮಧ್ಯಂತರ ವರದಿಯ ಆಧಾರದ ಮೇಲೆ ಟ್ರಸ್ಟ್ ಎಫ್.ಐ.ಆರ್. ದಾಖಲಿಸಿದೆ ಮತ್ತು ಅದರ ಮೇಲೆ ಕಾನೂನು ಕ್ರಮ ಮುಂದುವರಿದಿದೆ.

ಭವಿಷ್ಯದಲ್ಲಿ ಇಂತಹ ಯಾವುದೇ ದೌರ್ಭಾಗ್ಯಪೂರ್ಣ ಪರಿಸ್ಥಿತಿ ಮರುಕಳಿಸದಂತೆ ನಾವು ಖಚಿತಪಡಿಸುತ್ತೇವೆ ಎಂದು ಎಲ್ಲರಿಗೂ ಭರವಸೆ ನೀಡುತ್ತೇವೆ. ಅಪರಾಧಿಗಳಿಗೆ ಕಾನೂನುಬದ್ಧವಾಗಿ ಸೂಕ್ತ ಹಾಗೂ ಕಠಿಣ ಶಿಕ್ಷೆಯಾಗಬೇಕೆಂದು ನಾವು ಒತ್ತಾಯಿಸುತ್ತೇವೆ.

ಅಸಾಮಾಜಿಕ, ಅಧಾರ್ಮಿಕ ಮತ್ತು ಸ್ವಾರ್ಥಿ ಶಕ್ತಿಗಳು ಸನಾತನ ಧರ್ಮದ ಮೇಲೆ ಕಳಂಕ ಹಚ್ಚಲು ಮಾಡುವ ಪ್ರಯತ್ನಗಳನ್ನು ಯಶಸ್ವಿಯಾಗಲು ಬಿಡುವುದಿಲ್ಲ. ದಯವಿಟ್ಟು ಹರಡಲಾಗುತ್ತಿರುವ ದಾರಿತಪ್ಪಿಸುವ ಮತ್ತು ಆಧಾರರಹಿತ ವದಂತಿಗಳಿಂದ ನೀವೂ ದೂರವಿರಿ ಹಾಗೂ ಇತರರೂ ಇದಕ್ಕೆ ಬಲಿಯಾಗದಂತೆ ನೋಡಿಕೊಳ್ಳಿ. ಈ ಕಾರ್ಮೋಡಗಳು ಸರಿಯಲಿವೆ, ಕತ್ತಲು ದೂರವಾಗಲಿದೆ, ಸತ್ಯದ ಸೂರ್ಯನ ಪ್ರಕಾಶ ಮೂಡಲಿದೆ ಹಾಗೂ ಶ್ರೀರಾಮ ಭಕ್ತಿಯ ಪ್ರಬಲ ಧಾರೆ ಅಖಂಡವಾಗಿ ಹರಿಯಲಿದೆ ಎಂಬ ನಂಬಿಕೆ ನಮಗಿದೆ ಎಂದು ರಾಮ ಜನ್ಮಭೂಮಿ ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article