ಎಂಆರ್‌ಪಿಎಲ್: ಪಿ. ಸುಜಿತ್ ಕಾರ್ಯನಿರ್ವಾಹಕ ನಿರ್ದೇಶಕರಾಗಿ ನೇಮಕ

ಎಂಆರ್‌ಪಿಎಲ್: ಪಿ. ಸುಜಿತ್ ಕಾರ್ಯನಿರ್ವಾಹಕ ನಿರ್ದೇಶಕರಾಗಿ ನೇಮಕ


ಮಂಗಳೂರು: ಎಂಆರ್‌ಪಿಎಲ್ ಕಾರ್ಯನಿರ್ವಾಹಕ ನಿರ್ದೇಶಕ (ಪ್ರಾಜೆಕ್ಟ್ಸ್) ಆಗಿ ಪತ್ತಾಥಿಲ್ ಸುಜಿತ್ ನೇಮಕಗೊಂಡಿದ್ದಾರೆ. 

ಈ ಹಿಂದೆ ಅವರು ಸಂಸ್ಥೆಯ ಕಾರ್ಪೊರೇಟ್ ಸ್ಟ್ರಾಟಜಿ ವಿಭಾಗದಲ್ಲಿ ಗ್ರೂಪ್ ಜನರಲ್ ಮ್ಯಾನೇಜರ್ ಆಗಿ ಸೇವೆ ಸಲ್ಲಿಸುತ್ತಿದ್ದು, ಸಂಸ್ಥೆಯ ದೀರ್ಘಕಾಲಿಕ ಯೋಜನೆಗಳು, ವ್ಯವಹಾರ ಅಭಿವೃದ್ಧಿ ಹಾಗೂ ತಂತ್ರಾತ್ಮಕ ನಿರ್ಧಾರಗಳಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಕೇರಳದ ಪಾಲಕ್ಕಾಡ್ ಮೂಲದ ಸುಜಿತ್ ಅವರು ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವೀಧರರಾಗಿದ್ದು, ಮೂರು ದಶಕಗಳಿಗಿಂತ ಹೆಚ್ಚು ಕೈಗಾರಿಕಾ ಅನುಭವ ಹೊಂದಿದ್ದಾರೆ. 1993ರಲ್ಲಿ ಎಂಆರ್ಪಿಎಲ್‌ಗೆ ಸೇರ್ಪಡೆಯಾದ ಬಳಿಕ ನಿರ್ವಹಣೆ, ವಿಶ್ವಾಸಾರ್ಹತೆ, ಎಂಜಿನಿಯರಿಂಗ್ ಮತ್ತು ಇನ್ಸ್ಪೆಕ್ಷನ್, ಪ್ರಾಜೆಕ್ಟ್ಸ್ ಹಾಗೂ ಕಾರ್ಪೊರೇಟ್ ಸ್ಟ್ರಾಟಜಿ ಸೇರಿದಂತೆ ಹಲವು ವಿಭಾಗಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article