‘ಜನ ಸೇವೆಗಾಗಿ ಅಧಿಕಾರದ ಬಳಕೆ’: ಪಿ.ವಿ. ಮೋಹನ್
ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.
ಆಸ್ಕರ್ ಫೆರ್ನಾಂಡಿಸ್, ಜನಾರ್ದನ ಪೂಜಾರಿ, ವೀರಪ್ಪ ಮೊಲಿ ಅವರಂತಹ ನಾಯಕರ ಜತೆ ಅಂದಿನ ರಾಜಕೀಯ ಆದರ್ಶವನ್ನು ಅನುಸರಿಸಿ ಬೆಳೆದುಕೊಂಡು ಬಂದಿದ್ದೇನೆ. ಇಂದಿನ ರಾಜಕೀಯ ಏನೇ ಇದ್ದರೂ ಜನರ ಪರವಾಗಿ ಕೆಲಸ ಮಾಡುತ್ತೇನೆ. ಪಕ್ಷಕ್ಕಾಗಿ ಕೆಲಸ ಮಾಡುವ ಸುದೀರ್ಘ ಅವಕಾಶದ ಬಳಿಕ ಈಗ ಅಧಿಕಾರದ ಅವಕಾಶ ಸಿಕ್ಕಿದೆ. ಇದು ನನಗೆ ದೊರೆತ ಉಡುಗೊರೆ. ಸೇವೆಗೆ ಜನರು ಶಕ್ತಿ ನೀಡಬೇಕು ಎಂದರು.
ದ.ಕ. ಜಿಲ್ಲೆಯಲ್ಲಿ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಎಲ್ಲ ವಿಧಾನಸಭಾ ಸ್ಥಾನಗಳನ್ನು ಗೆಲ್ಲಬೇಕಾದರೆ ಸೌಹಾರ್ದ, ಭಾವೈಕ್ಯ ಬೇಕು. ಇದನ್ನು ಗಟ್ಟಿಗೊಳಿಸುವ ಕೆಲಸವನ್ನು ಕಾರ್ಯಕರ್ತರು ಮಾಡ ಬೇಕಾಗಿದೆ. ಪಕ್ಷದಲ್ಲಿ ಪ್ರತಿಯೋರ್ವ ಕಾರ್ಯಕರ್ತನಿಗೆ ಬೆಲೆ ಇದೆ. ಪಕ್ಷ ತಾಯಿ ಇದ್ದ ಹಾಗೆ. ಸರಿಯಾದ ಸಮಯದಲ್ಲಿ ಕೊಡಬೇಕಾದುದನ್ನು ಖಂಡಿತವಾಗಿಯೂ ಕೊಡುತ್ತದೆ ಎಂದರು.
ಎಸ್‌ಐಆರ್‌ನ್ನು ಹಗುರವಾಗಿ ತೆಗೆದು ಕೊಳ್ಳಬೇಡಿ. ಕೇರಳದಲ್ಲಿ ಎಸ್‌ಐಆರ್ ಗೆದ್ದಿದ್ದೇವೆ. ದ.ಕ., ಉಡುಪಿಯಲ್ಲಿಯೂ ಗೆಲ್ಲಬೇಕು. ಅದಕ್ಕಾಗಿ ಕಾರ್ಯಕರ್ತರು ತಳಮಟ್ಟದಲ್ಲಿ ಕೆಲಸ ಮಾಡಬೇಕು ಎಂದು ಹೇಳಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್‌ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ, ಮಾಜಿ ಶಾಸಕ ಜೆ.ಆರ್. ಲೋಬೊ, ವಿವಿಧ ನಿಗಮಗಳ ಅಧ್ಯಕ್ಷರಾದ ಮಮತಾ ಗಟ್ಟಿ, ಶಾಲೆಟ್ ಪಿಂಟೋ, ವಿಶ್ವಾಸ್ ಕುಮಾರ್ದಾಸ್, ಮಾಜಿ ಮೇಯರ್ ಶಶಿಧರ ಹೆಗ್ಡೆ, ಪದ್ಮರಾಜ್ ಪೂಜಾರಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಪ್ಪಿ, ಲುಕಾಱನ್, ಸುಭಾಷ್, ಡೆನ್ನಿಸ್, ನವಾಜ್, ಚಿತ್ತರಂಜನ್, ಜೋಕಿಂ, ದಿನೇಶ್, ಮನೋರಾಜ್ ರಾಜೀವ್, ಜೇಬಾ ಸುಬೋಧ್ ಆಳ್ವ ಉಪಸ್ಥಿತರಿದ್ದರು. ರೋಹಿತ್ ಉಳ್ಳಾಲ ಕಾರ್ಯಕ್ರಮ ನಿರ್ವಹಿಸಿದರು.