ನಗರಪಾಲಿಕೆಯಿಂದ ಬೀದಿ ವ್ಯಾಪಾರಿಗಳ ತೆರವು: ಕಾರ್ಯಾಚರಣೆ ವಿರುದ್ಧ ಆಕ್ರೋಶ, ಪ್ರತಿಭಟನಾಕಾರರ ಬಂಧನ
ಬಡವರ ಮೇಲೆ ಬ್ರಹ್ಮಾಸ್ತ್ರ ಶೋಭೆ ತರುವುದಿಲ್ಲ: ಬಿ.ಕೆ. ಇಮ್ತಿಯಾಜ್
ನಗರಪಾಲಿಕೆ ಆಯುಕ್ತರು ಕಾನೂನು ಪ್ರಕಾರ ಕಾರ್ಯಚರಿಸಬೇಕೆ ಹೊರತು ಯಾರದೇ ಒತ್ತಡಕ್ಕೆ ಮಣಿದು ಕಾರ್ಯ ನಿರ್ವಹಿಸುತ್ತಿರುವುದು ಸರಿಯಲ್ಲ ಬೀದಿ ವ್ಯಾಪಾರಿಗಳ ಬದುಕುವ ಹಕ್ಕನ್ನು ಕಸಿಯುವ ಅಧಿಕಾರ ಯಾರಿಗೂ ಇಲ್ಲ. ಬಡವರ ಮೇಲೆ ಬ್ರಹ್ಮಾಸ್ತ್ರ ಬಳಸುವುದು ನಗರಕ್ಕೆ ಶೋಭೆ ತರುವುದಿಲ್ಲ. ಬೀದಿಬದಿ ವ್ಯಾಪಾರದ ಕಾನೂನಿಗೆ ವಿರುದ್ಧವಾದ ಏಕಪಕ್ಷೀಯ ಧಾಳಿಯನ್ನು ಪಾಲಿಕೆ ನಿಲ್ಲಿಸಬೇಕೆಂದು ದ.ಕ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘ (ಸಿಐಟಿಯು) ಗೌರವಧ್ಯಕ್ಷ ಬಿ.ಕೆ. ಇಮ್ತಿಯಾಜ್ ಒತ್ತಾಯಿಸಿದ್ದಾರೆ.
ಸಿಐಟಿಯು ಖಂಡನೆ:
ನಗರ ಪಾಲಿಕೆ ನಡೆಸಿರುವ ಕಾನೂನು ಬಾಹಿರ ಧಾಳಿಯನ್ನು ಸಿಐಟಿಯು ದ.ಕ ಜಿಲ್ಲಾ ಸಮಿತಿ ಖಂಡಿಸಿದೆ.
ಪಾಲಿಕೆಯಲ್ಲಿ ಪಟ್ಟಣ ವ್ಯಾಪಾರ ಸಮಿತಿಯಲ್ಲಿ ಆಗಬೇಕಾದ ತೀರ್ಮಾನವನ್ನು ಶಾಸಕರು ಮಾಡುತ್ತಿದ್ದಾರೆ. ಬಡ ಬೀದಿಬದಿ ವ್ಯಾಪಾರಿಗಳ ಮೇಲೆ ಇದೇ ರೀತಿಯ ಧಾಳಿ ಮುಂದುವರಿದರೆ ಸರಣಿ ಹೋರಾಟ ನಡೆಸಲಿದ್ದೇವೆ ಎಂದು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಎಚ್ಚರಿಕೆ ನೀಡಿದ್ದಾರೆ.
ಬಂಧಿತರ ಬಿಡುಗಡೆ:
ಕಾರ್ಯಾಚಾರಣೆ ವೇಳೆ ವಶಕ್ಕೆ ಪಡೆದ ಮುಖಂಡರು ಮತ್ತು ಬೀದಿಬದಿ ವ್ಯಾಪಾರಸ್ಥರನ್ನು ಬೀದಿಬದಿ ವ್ಯಾಪಾರಿಗಳ ಸಂಘದ ನಾಯಕರು ಮತ್ತು ಪೋಲೀಸರ ಸಮ್ಮುಖದಲ್ಲಿ ಸಂಧಾನದ ನಂತರ ಬಂಧಿತರನ್ನು ಬಿಡುಗಡೆ ಮಾಡಲಾಯಿತು.
ಸಂಘದ ಪ್ರಮುಖರಾದ ಮುಜಾಫರ್ ಅಹ್ಮದ್, ಹಸನ್ ಕುದ್ರೋಳಿ, ಎಂ.ಎನ್ ಶಿವಪ್ಪ, ವಿಜಯ್ ಜೈನ್, ಹಂಝ ಮೊಹಮ್ಮದ್, ಅಬ್ದುಲ್ ಖಾದರ್, ಶಿವಾನಂದ, ಗುಡ್ಡಪ್ಪ, ಸಯ್ಯದ್ ಸಾದಿಕ್, ಮುತ್ತುರಾಜ್, ಅಶ್ರಫ್ ಮುಂತಾದವರು ಉಪಸ್ಥಿತರಿದ್ದರು
