ಭಾರತೀಯ ನೌಕಾಪಡೆಯಲ್ಲಿ ಸಬ್ ಲೆಫ್ಟಿನೆಂಟ್ ಅಧಿಕಾರಿಯಾಗಿ ನಿಯೋಜನೆಗೊಂಡ ನಿಶೆಲ್ ಫ್ಲೋರಾ ಆಲ್ಮೆಡಾ ಅವರನ್ನು ಅಭಿನಂದಿಸಿದ ಶಾಸಕ ಕಾಮತ್

ಭಾರತೀಯ ನೌಕಾಪಡೆಯಲ್ಲಿ ಸಬ್ ಲೆಫ್ಟಿನೆಂಟ್ ಅಧಿಕಾರಿಯಾಗಿ ನಿಯೋಜನೆಗೊಂಡ ನಿಶೆಲ್ ಫ್ಲೋರಾ ಆಲ್ಮೆಡಾ ಅವರನ್ನು ಅಭಿನಂದಿಸಿದ ಶಾಸಕ ಕಾಮತ್


ಮಂಗಳೂರು: ಭಾರತೀಯ ನೌಕಾಪಡೆಯಲ್ಲಿ ಸಬ್ ಲೆಫ್ಟಿನೆಂಟ್ ಅಧಿಕಾರಿಯಾಗಿ ನಿಯೋಜನೆಗೊಂಡ ಕುಲಶೇಖರ ಕೊಂಗೂರು ನಿವಾಸಿ ನಿಶೆಲ್ ಫ್ಲೋರಾ ಆಲ್ಮೆಡಾ ಅವರ ಮನೆಗೆ ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಿ. ವೇದವ್ಯಾಸ ಕಾಮತ್ ರವರು ಭೇಟಿ ನೀಡಿ ವಿಶೇಷವಾಗಿ ಅಭಿನಂದಿಸಿದರು. 

ನವೀನ್ ಆಲ್ಮೆಡಾ ಹಾಗೂ ಕ್ರಿಸ್ ಎವರ್ಟ್ ಡಿಸೋಜ ದಂಪತಿಗಳ ಪುತ್ರಿ, ಕುಮಾರಿ ನಿಶೆಲ್ ಫ್ಲೋರಾ ಆಲ್ಮೆಡಾ ಅವರು ಸೇನೆಗೆ ಆಯ್ಕೆಯಾಗಿರುವುದು ಇಡೀ ನಮ್ಮ ತುಳುನಾಡಿಗೆ ಸಂತಸ ತಂದಿದೆ. ಇವರ ಈ ಸಾಧನೆಯು ಯುವ ಜನಾಂಗಕ್ಕೆ ಪ್ರೇರಣೆಯಾಗಿದೆ. ಕೊಂಗೂರಿನ ನಾಗರೀಕ ಬಂಧುಗಳು ಪ್ರೀತಿ ಹಾಗೂ ಹೆಮ್ಮೆಯಿಂದ ಇವರನ್ನು ಬರಮಾಡಿಕೊಂಡಿರುವುದು ಸೇನೆಗೆ ನಮ್ಮ ಜನರು ಕೊಡುವ ಗೌರವಕ್ಕೆ ಸಾಕ್ಷಿ. ಅವರಿಗೆ ಭಾರತ ಮಾತೆಯ ಸೇವೆಯಲ್ಲಿ ಅದ್ಭುತ ಅವಕಾಶಗಳು ಒದಗಿ ಬರಲೆಂದು ತುಂಬು ಹೃದಯದಿಂದ ಹಾರೈಸುತ್ತೇನೆ ಎಂದು ಶಾಸಕರು ಹೇಳಿದರು.

ಈ ಸಂದರ್ಭದಲ್ಲಿ ಬಿಜೆಪಿ ಪ್ರಮುಖರಾದ ರಮೇಶ್ ಹೆಗ್ಡೆ, ನಿಕಟಪೂರ್ವ ಮ.ನ.ಪಾ ಸದಸ್ಯರಾದ ಕಿಶೋರ್ ಕೊಟ್ಟಾರಿ, ಪ್ರವೀಣ್ ನಿಡ್ಡೇಲ್, ಮಣಿ, ತೇಜಸ್, ಕೊಂಗೂರು, ಭಾಸ್ಕರ್, ಚೇತನ್, ಮೊದಲಾದವರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article