ರೈಲು ಬಡಿದು ಇಬ್ಬರು ಸಾವು

ರೈಲು ಬಡಿದು ಇಬ್ಬರು ಸಾವು

ಮಂಜೇಶ್ವರ: ರೈಲು ಬಡಿದು ಇಬ್ಬರು ಮೃತಪಟ್ಟ ಎರಡು ಪ್ರತ್ಯೇಕ ಘಟನೆ ಮಂಗಳವಾರ ರಾತ್ರಿ ಮಂಜೇಶ್ವರ ರೈಲು ನಿಲ್ದಾಣ ಪರಿಸರದಲ್ಲಿ ನಡೆದಿದೆ.

ಮಂಜೇಶ್ವರದಲ್ಲಿ ವಾಸವಾಗಿರುವ ಮೂಲತಃ ಮೊಗ್ರಾಲ್ ಪುತ್ತೂರಿನ ಉಮೇಶ್ (39) ಮತ್ತು ಮಂಜೇಶ್ವರ ಕೀರ್ತೇಶ್ವರದ ಮನೀಶ್ (35) ಮೃತಪಟ್ಟವರು.

ಸಂಜೆ ರೈಲು ಬಡಿದು ಮೃತಪಟ್ಟ ಸ್ಥಿತಿಯಲ್ಲಿ ಉಮೇಶ್‌ರವರ ಮೃತದೇಹ ಪತ್ತೆಯಾಗಿದೆ. ರಾತ್ರಿ ವೇಳೆಗೆ ರೈಲ್ವೇ ಹಳಿಯಲ್ಲಿ ಮನೀಶ್ ರವರ ಮೃತದೇಹ ಪತ್ತೆಯಾಗಿದೆ.

ಇಬ್ಬರ ಮೃತದೇಹಗಳನ್ನು ಕಾಸರಗೋಡು ಜನರಲ್ ಆಸ್ಪತ್ರೆ ಶವಾಗಾರದಲ್ಲಿರಿಸಲಾಗಿದೆ. 

ಸ್ಥಳ ಮಹಜರು ನಡೆಸಿದ ಮಂಜೇಶ್ವರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article