ನೆಲ್ಲಿಕಾರು ಚಚ್೯ ಆವರಣದಲ್ಲಿ ಪರಿಸರ ದಿನ ಆಚರಣೆ
Sunday, June 28, 2026
ಮೂಡುಬಿದಿರೆ: ಇಲ್ಲಿನ ಅರಣ್ಯ ಇಲಾಖೆ, ಇಂಡಿಯನ್ ಕ್ಯಾಥೋಲಿಕ್ ಯೂತ್ ಮೂಮೆಂಟ್ ಮತ್ತು ಸಂತ ವಿಕ್ಟರ್ ಚರ್ಚ ನೆಲ್ಲಿಕಾರು ಇದರ ವತಿಯಿಂದ ಚರ್ಚ ಆವರಣದಲ್ಲಿ ವನಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಧಮ೯ಗುರು ಪೀಟರ್ ಅರಾನ್ಹ ಮಾತನಾಡಿ ನಮ್ಮ ದೇಶ ಹಾಗೂ ಮುಂದಿನ ಭವಿಷ್ಯಕ್ಕಾಗಿ ಪ್ರತಿಯೊಬ್ಬರೂ ಗಿಡಗಳನ್ನು ನೆಟ್ಟು ಪೋಷಿಸುವುದು ಅಗತ್ಯವೆಂದು ಹೇಳಿದರು.
ಉಪ ವಲಯಾರಣ್ಯಾಧಿಕಾರಿ ಬಸವರಾಜ್ ಮಾತನಾಡಿ ಅರಣ್ಯ ಸಂರಕ್ಷಣೆಯ ಮಹತ್ವದ ಬಗ್ಗೆ ಮಾಹಿತಿ ನೀಡಿದರು.
ಐಸಿವೈಎಂನ ಅಧ್ಯಕ್ಷ ಪ್ರಕಾಶ್ ಎಡ್ವಿನ್ ಡಿ'ಸೋಜ, ಉಪಾಧ್ಯಕ್ಷ ಪ್ರಕಾಶ್ ಮೋರಸ್, ನೆಲ್ಲಿಕಾರು ಚಚಿ೯ನ ಐಸಿವೈಎಂನ ಅಧ್ಯಕ್ಷ ಜಾಕ್ಸನ್ ಡಿ'ಸೋಜ, ನೆಲ್ಲಿಕಾರು ಯುನಿಟ್ ನ ಮೆಲ್ವೀನ್ ಪಿರೇರಾ, ಮೂಡುಬಿದಿರೆ ಐಸಿವೈಎಂನ ಅಧ್ಯಕ್ಷ ಕಿರಣ್ ಪಿರೇರಾ, ಗಸ್ತು ಅರಣ್ಯ ಪಾಲಕ ಧಮ೯ರಾಜ ಈ ಸಂದಭ೯ದಲ್ಲಿದ್ದರು.