ಕೇಮಾರು-ಹಕ್ಕೇರಿಯಲ್ಲಿ ಕೆಸರುಡೊಂಜಿ ದಿನ

ಕೇಮಾರು-ಹಕ್ಕೇರಿಯಲ್ಲಿ ಕೆಸರುಡೊಂಜಿ ದಿನ


ಮೂಡುಬಿದಿರೆ: ಯುವ ಉತ್ಸಾಹಿ ಬಳಗ (ರಿ.) ಕೇಮಾರು ಹಾಗೂ ಯುವಸಂಗಮ ಕಾಂತಾವರ (ರಿ.) ಇವರ ಜಂಟಿ ಆಶ್ರಯದಲ್ಲಿ  4ನೇ ವರ್ಷದ ಕೆಸರುಡೊಂಜಿ ದಿನ ಕಾರ್ಯಕ್ರಮವು ಭಾನುವಾರ  ಕೇಮಾರು ಹಕ್ಕೇರಿ ಬಾಕಿಮಾರು ಗದ್ದೆಯಲ್ಲಿ ಜರಗಿತು.

ಯುವ ಉತ್ಸಾಹಿ ಬಳಗದ ಅಧ್ಯಕ್ಷ ಚಂದ್ರಹಾಸ ಜೈನ್ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಕಾಂತಾವರ ದೇವಸ್ಥಾನ ಅರ್ಚಕ ಕೃಷ್ಣಮೂರ್ತಿ ಭಟ್ ಕೆಸರುಗದ್ದೆಗೆ ಹಾಲು, ತೀರ್ಥ, ತೆಂಗಿನಕಾಯಿ ಅರ್ಪಿಸಿ ಚಾಲನೆ ನೀಡಿದರು.


ಕಾಂತಾವರ ದೇವಸ್ಥಾನದ ಧರ್ಮದರ್ಶಿ ಬಾರಾಡಿಬೀಡು ಡಾ.ಜೀವಂಧರ್ ಬಲ್ಲಾಳ್ ಅಧ್ಯಕ್ಷತೆಯಲ್ಲಿ ಜರಗಿದ ಸಭಾ ಕಾರ್ಯಕ್ರಮದಲ್ಲಿ  ,ಶ್ರೀ ಕ್ಷೇತ್ರ ಕೇಮಾರು ಈಶ ವಿಠಲದಾಸ ಸ್ವಾಮೀಜಿ ಆಶೀರ್ವಚನ ನೀಡಿದರು.

ಈ ಸಂದರ್ಭದಲ್ಲಿ ಕ್ರೀಡಾ ಕ್ಷೇತ್ರದ ಸಾಧನೆಗಾಗಿ ರಶ್ಮಿತಾ ಶೆಟ್ಟಿ ಕೇಮಾರು ಹಾಗೂ ಕಾಷ್ಠ ಶಿಲ್ಪ ಸಾಧನೆಗಾಗಿ ಶ್ಯಾಮರಾಯ ಆಚಾರ್ಯ ಮೈಂತೂರು ಕಾಂತಾವರ ಇವರನ್ನು ಸನ್ಮಾನಿಸಲಾಯಿತು.

SSLC ಹಾಗೂ ಪಿಯುಸಿ ಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಯಿತು.

ಸುದರ್ಶನ್ ಆಚಾರ್ಯ ಸ್ವಾಗತಿಸಿದರು. ನಿತಿನ್ ಅಮೀನ್ ಹಾಗೂ ಸನತ್ ಆಚಾರ್ಯ ತಂಡಗಳ ವಾರ್ಷಿಕ ವರದಿ ವಾಚಿಸಿದರು.

ಕೆಸರುಗದ್ದೆಯಲ್ಲಿ ವಾಲಿಬಾಲ್, ತ್ರೋಬಾಲ್, ಕಬಡ್ಡಿ, ಹಗ್ಗಜಗ್ಗಾಟ, ಹಾಗೂ ವೈಯಕ್ತಿಕ ಆಟಗಳು ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಜೈ ತುಳುನಾಡು ಕಾರ್ಲ ಎಗ್ಗೆ ವತಿಯಿಂದ ತುಳು ಲಿಪಿ ಕಲಿಸುವ ಕಾರ್ಯಕ್ರಮ ನಡೆಸಲಾಯಿತು.

ಸಭೆಯಲ್ಲಿ ಕಾರ್ಕಳ ಶಾಸಕ ವಿ ಸುನೀಲ್ ಕುಮಾರ್, ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು, ಜಯೇಶ್ ಬಲ್ಲಾಳ್, ಕೆ.ಎಂ. ಎಫ್ ನಿರ್ದೇಶಕ ಕೆ. ಪಿ ಸುಚರಿತ ಶೆಟ್ಟಿ, ಅಕ್ರಮ ಸಕ್ರಮ ಸಮಿತಿ ಸದಸ್ಯ ವಾಸುದೇವ ಪಿ ನಾಯಕ್, ಬಿಜೆಪಿ ಮಂಡಲ ಅಧ್ಯಕ್ಷ ದಿನೇಶ್ ಪುತ್ರನ್, ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಸುದರ್ಶನ್, ಶಾಂತಿಪ್ರಸಾದ್ ಹೆಗ್ಡೆ,  ಡಾ.ಅಮರಶ್ರೀ ಅಮರನಾಥ್ ಶೆಟ್ಟಿ ಸೇರಿದಂತೆ ಗಣ್ಯರು ಪಾಲ್ಗೊಂಡು ಶುಭಹಾರೈಸಿದರು.

ಧರ್ಮರಾಜ ಕಂಬಳಿ,ಹರೀಶ್ ಎಂ.ಕೆ, ವಿಖ್ಯಾತ್ ಶೆಟ್ಟಿ ಕಾರ್ಕಳ,ಅವಿನಾಶ್ ಜಿ ಶೆಟ್ಟಿ, ಸೃಷ್ಟಿ ಉದಯ ಶೆಟ್ಟಿ, ಜಗದೀಶ್ ಅಂಚನ್ ಬಾಂದೊಟ್ಟು, ಕಾಳು ಪಾಣಾರ ಮುಡಾಯಿಬೆಟ್ಟು ,ರಜತ್ ರಾಮ್ ಮೋಹನ್ ,ಕಿರಣ್ ಕುಲಾಲ್ ಸಾಣೂರು, ಭರತ್ ಶೆಟ್ಟಿ ಬೆಳುವಾಯಿ,ಕುಮಾರ್ ಪ್ರಸಾದ್,ಪ್ರಕಾಶ್ ಕೋಟ್ಯಾನ್ ,ಜ್ಯೋತಿ ಕೆ,ರೇಣುಕಾ ಅಮೀನ್, ಶಮಾ ಬಲ್ಲಾಳ್ ಬೆಂಗಳೂರು,ಮಹಾವೀರ ಜೈನ್ ಬೆಂಗಳೂರು,ರಂಜಿತ್ ಶೆಟ್ಟಿ ಪುಂಚಾಡಿ,ನಾಗರಾಜ್ ಪೂಜಾರಿ ಒಂಟಿಕಟ್ಟೆ,ನಾಗೇಶ್ ಅಮೀನ್ ಇರುವೈಲು,ಪ್ರಕಾಶ್ ಬಲಿಪ ಮಿಯಾರು,ಸೂರಜ್ ಜೈನ್ ಮಾರ್ನಾಡು , ಅಭಿಲಾಷ್ ಶೆಟ್ಟಿ ಕಟೀಲು, ಅಶ್ವಥ್ ಪಣಪಿಲ, ಪ್ರಕಾಶ್  ಜೆ ಶೆಟ್ಟಿಗಾರ್, ಅಭಿಲಾಷ್ ಅರ್ಜುನಾಪುರ, ರಾಜೇಶ್ ಕೋಟ್ಯಾನ್, ಪ್ರಭಾಕರ ಕುಲಾಲ್ ,ಮಹೇಶ್ ಕುಲಾಲ್, ನಿಶಿಲ್ ಶೆಟ್ಟಿ,ಯೋಗೀಶ್ ಆಚಾರ್ಯ ಬೋವಾಡಿ ,ಮಂಜುನಾಥ್ ಶೆಟ್ಟಿ ಕೊಳಕೆಬೈಲು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಯುವಸಂಗಮ ಕಾಂತಾವರ ದ ಅಧ್ಯಕ್ಷ ವಿಜಯ್ ಸಾಲಿಯಾನ್ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಪಂದ್ಯಾಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ರಿತೇಶ್ ಕೋಟ್ಯಾನ್,ಸಂತೋಷ್ ಆಚಾರ್ಯ ಧನ್ಯವಾದವಿತ್ತರು. ಸುಕೇಶ್ ಕೋಟ್ಯಾನ್ ಕಾಂತಾವರ, ಮನೀಶ್ ಕುಲಾಲ್ ನಿರೂಪಿಸಿದರು

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article