ಬಿಜೆಪಿ ಮೂಡುಬಿದಿರೆ ಓಬಿಸಿ ಮೋಚಾ೯ದಿಂದ ಸ್ವಚ್ಛತಾ ಕಾಯ೯ಕ್ರಮ

ಬಿಜೆಪಿ ಮೂಡುಬಿದಿರೆ ಓಬಿಸಿ ಮೋಚಾ೯ದಿಂದ ಸ್ವಚ್ಛತಾ ಕಾಯ೯ಕ್ರಮ


ಮೂಡುಬಿದಿರೆ: ಭಾರತೀಯ ಜನತಾ ಪಾಟಿ೯ ಹಿಂದುಳಿದ ವಗ೯ಗಳ ಮೋಚಾ೯, ಮುಲ್ಕಿ-ಮೂಡುಬಿದಿರೆ ಮಂಡಲದ ವತಿಯಿಂದ ಲಾಡಿಯಲ್ಲಿರುವ ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ಪೂವ೯ ಬಾಲಕರ ನಿಲಯದ ಆವರಣದಲ್ಲಿ ಸ್ವಚ್ಛತಾ ಕಾಯ೯ಕ್ರಮ ನಡೆಯಿತು. 


ಓಬಿಸಿ ಮೋಚಾ೯ದ ಅಧ್ಯಕ್ಷ ಪ್ರದೀಪ್ ಕುಮಾರ್ ಕಾಯ೯ಕ್ರಮದ ನೇತೃತ್ವ ವಹಿಸಿದ್ದರು.

ಓಬಿಸಿ ದ. ಕ ಜಿಲ್ಲಾ ಪ್ರಧಾನ ಕಾಯ೯ದಶಿ೯ ವಿನೋದ್ ಬೆಳ್ಳೆಯಾರು, ಬಿಜೆಪಿ ಮುಲ್ಕಿ-ಮೂಡುಬಿದಿರೆ ಮಂಡಲದ ಅಧ್ಯಕ್ಷ ದಿನೇಶ್ ಪುತ್ರನ್, ಯುವ ಮೋಚಾ೯ದ  ಅಧ್ಯಕ್ಷ ಕುಮಾರ್ ಪ್ರಸಾದ್, ಕಾಯ೯ದಶಿ೯ ಭರತ್ ಶೆಟ್ಟಿ, ಮೂಡುಬಿದಿರೆ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಲಕ್ಷ್ಮಣ್ ಪೂಜಾರಿ, ಮಂಡಲ ಓಬಿಸಿ ಪ್ರಭಾರಿಗಳಾದ ಪ್ರಭಾಕರ ಕುಲಾಲ್, ಪ್ರಧಾನ ಕಾಯ೯ದಶಿ೯ಗಳಾದ ಸಂಪತ್ ಕುಮಾರ್ ನೆತ್ತೋಡಿ ಮತ್ತು ಹೇಮಂತ್ ಪಡುಪಣಂಬೂರು, ಶಕ್ತಿ ಕೇಂದ್ರದ ಪ್ರಮುಖರಾದ ವಿಠ್ಠಲ, ಮಂಡಲದ ಪ್ರಮುಖರಾದ ಸಾತ್ವಿಕ್ ಮಲ್ಯ ಮತ್ತಿತರರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article