ಪಾಡ್ಯಾರು ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

ಪಾಡ್ಯಾರು ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ


ಮೂಡುಬಿದಿರೆ:  ಮೂಡುಬಿದಿರೆ ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಾಡ್ಯಾರು ಇಲ್ಲಿ ಮಂಗಳೂರು ಸಾಮಾಜಿಕ  ವಲಯ  ಅರಣ್ಯಾಧಿಕಾರಿ  ಜಯಪ್ರಕಾಶ್ ಮತ್ತು ಉಪ ವಲಯ ಅರಣ್ಯಾಧಿಕಾರಿ  ಆನಂದ್ ಅವರು ಗಿಡ ನೆಡುವ ಮೂಲಕ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು. ಶಾಲೆಯಲ್ಲಿರುವ ಎಲ್ಲಾ ವಿದ್ಯಾರ್ಥಿಗಳು ತಮ್ಮ ತಾಯಿಯ ಹೆಸರಿನಲ್ಲಿ ಗಿಡ ನೆಡುವ ಮೂಲಕ ಇಕೋ ಕ್ಲಬ್ ಮತ್ತು ಶಾಲಾ ವನದ ಪರಿಸರದಲ್ಲಿ ಹುಣಸೆ ಹೊಂಗೆ ಕಹಿಬೇವು ಬಿದಿರು ರಾಮಪತ್ರಿ ಜಾರಿಗೆ ಹೆಬ್ಬಲಸು ಹೀಗೆ ವಿವಿಧ ಗಿಡಗಳನ್ನು ನೆಟ್ಟು ಅವುಗಳನ್ನು ಬೆಳೆಸುವ ಪ್ರತಿಜ್ಞೆ ಕೈಗೊಂಡರು. 

ಜಯಪ್ರಕಾಶ್ ಅವರು ಪರಿಸರ ದಿನಾಚರಣೆಯ ಮಹತ್ವ ಮತ್ತು ಅಗತ್ಯವನ್ನು ಮಕ್ಕಳಿಗೆ ತಿಳಿ ಹೇಳಿದರು. ಮುಖ್ಯ ಶಿಕ್ಷಕ ಪ್ರಸನ್ನ ವಿ. ಶೆಣೖ,  ಸಹ ಶಿಕ್ಷಕ ರಾಬರ್ಟ್ ಡಿಸೋಜಾ, ಸ್ವಯಂಸೇವಕ ಶಿಕ್ಷಕಿ ಪ್ರತಿಭಾ, ಪ್ರಜ್ವಲ್ ಮತ್ತು ಅಕ್ಷರ ದಾಸೋಹ ಸಿಬ್ಬಂದಿ ಕಸ್ತೂರಿ ಉಪಸ್ಥಿತರಿದ್ದರು. ಸುಮಾರು 16 ಗಿಡಗಳನ್ನು ವಿದ್ಯಾರ್ಥಿಗಳು  ನೆಟ್ಟರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article