ಮೂಡುಬಿದಿರೆ ಪಣಪಿಲದ ವಿರಾಜ್ ಪೂಜಾರಿ ಭಾರತೀಯ ಸೇನೆಗೆ ಆಯ್ಕೆ
Thursday, June 4, 2026
ಮೂಡುಬಿದಿರೆ: ತಾಲೂಕಿನ ಪಣಪಿಲ ಗ್ರಾಮದ ಯುವಕ ವಿರಾಜ್ ಪೂಜಾರಿ ಭಾರತೀಯ ಸೇನೆಯ ಅಗ್ನಿವೀರ್ ಜಿಡಿ (ಜನರಲ್ ಡ್ಯೂಟಿ) ಹುದ್ದೆಗೆ ಆಯ್ಕೆಯಾಗಿದ್ದಾರೆ.
ಪಣಪಿಲ ಗ್ರಾಮದ ತಾರಿದಪಡ್ಪು ನಿವಾಸಿಗಳಾದ ವಿಶ್ವನಾಥ ಪೂಜಾರಿ- ವಿಜಯ ದಂಪತಿಯ ಪುತ್ರನಾಗಿರುವ ವಿರಾಜ್ ಪೂಜಾರಿ ಕಠಿಣ ಪರಿಶ್ರಮ ಮತ್ತು ದೇಶಸೇವೆಯ ಕನಸು ಕಂಡಿದ್ದು ಇದೀಗ ಭಾರತೀಯ ಸೇನೆಗೆ ಸೇರ್ಪಡೆಯಾಗುವ ಮೂಲಕ ಗ್ರಾಮಕ್ಕೆ ಕೀರ್ತಿ ತಂದಿದ್ದಾರೆ.
ಕೂಲಿ ಕಾಮಿ೯ಕರಾಗಿರುವ ವಿಶ್ವನಾಥ ಪೂಜಾರಿ- ವಿಜಯ ದಂಪತಿಯ ಮೂವರು ಗಂಡುಮಕ್ಕಳಲ್ಲಿ ವಿರಾಜ್ ಪೂಜಾರಿ ಎರಡನೇ ಮಗನಾಗಿದ್ದಾರೆ. ಮಗನ ಸಾಧನೆಗೆ ಬೆನ್ನೆಲುಬಾಗಿ ನಿಂತಿದ್ದಾರೆ.
ಗ್ರಾಮೀಣ ಭಾಗದ ಬಡ ಕುಟುಂಬದ ಹಿನ್ನೆಲೆಯಿಂದ ಬಂದು, ಸೈನ್ಯಕ್ಕೆ ಆಯ್ಕೆಯಾಗುವ ಮೂಲಕ ಇವರು ಇತರ ಗ್ರಾಮೀಣ ಯುವಕರಿಗೆ ಮಾದರಿಯಾಗಿದ್ದಾರೆ.