ಡಾ. ಎಂ. ಮೋಹನ್ ಆಳ್ವ ಹುಟ್ಟೂರ ಅಭಿನಂದನಾ ಸಮಾರಂಭ: ಕನ್ನಡ ಭವನದಲ್ಲಿ ಮೊದಲ ಪೂರ್ವಭಾವಿ ಸಭೆ

ಡಾ. ಎಂ. ಮೋಹನ್ ಆಳ್ವ ಹುಟ್ಟೂರ ಅಭಿನಂದನಾ ಸಮಾರಂಭ: ಕನ್ನಡ ಭವನದಲ್ಲಿ ಮೊದಲ ಪೂರ್ವಭಾವಿ ಸಭೆ


ಮೂಡುಬಿದಿರೆ: ಜಾತಿ ಮತ ಭೇದ ಮರೆತು ಸಮಾಜ ಸೇವೆ ಗೈದ ಶಿಕ್ಷಣ ತಜ್ಞ, ಸಾಂಸ್ಕೃತಿಕ ರಾಯಭಾರಿ ಡಾ. ಎಂ.ಮೋಹನ್ ಆಳ್ವರನ್ನು ಮೂಡುಬಿದಿರೆಯಲ್ಲಿ ಸಂಭ್ರಮದಿಂದ ಗುರುತಿಸಿ ಗೌರವಿಸೋಣ, ರಾಷ್ಟ್ರದ ಪದ್ಮ ಪ್ರಶಸ್ತಿಯೊಂದನ್ನು ಅವರಿಗೆ ನೀಡುವಲ್ಲಿ ಪ್ರಯತ್ನಿಸಬೇಕು. ಜನರ ಭಾವನೆಗೆ ಒಪ್ಪುವ ಗೌರವ ಅವರಿಗೆ ಸಲ್ಲಿಕೆಯಾಗಬೇಕು ಎಂಬ ಸಾವ೯ಜನಿಕರ ಒಕ್ಕೊರಲ ಅಭಿಪ್ರಾಯ ಕನ್ನಡಭವನದಲ್ಲಿ ಶುಕ್ರವಾರ ಕೇಳಿ ಬಂದಿದೆ. 


ಮೂಡುಬಿದಿರೆಯ ನವ ನಿರ್ಮಾತೃ ಡಾ. ಎಂ. ಮೋಹನ್ ಆಳ್ವ ಅವರ 75 ವರ್ಷದ ಸಂಭ್ರಮದ ಅಂಗವಾಗಿ, ಶಾಸಕ ಉಮಾನಾಥ ಎ ಕೋಟ್ಯಾನ್ ನೇತೃತ್ವದಲ್ಲಿ  ಮೂಡುಬಿದಿರೆಯಲ್ಲಿ ನಾಗರಿಕರ ವತಿಯಿಂದ ಅಭಿನಂದನಾ ಸಮಾರಂಭವನ್ನು ನಡೆಸಬೇಕೆಂಬ ಉದ್ದೇಶದಿಂದ ಕನ್ನಡ ಭವನದಲ್ಲಿ ನಡೆದ ಪ್ರಥಮ ಪೂರ್ವಭಾವಿ ಸಭೆಯಲ್ಲಿ ಈ ಕುರಿತು ಮಾತುಕತೆ ನಡೆಯಿತು. 

ಉಮಾನಾಥ ಎ. ಕೋಟ್ಯಾನ್ ಮಾತನಾಡಿ ಮೂಡುಬಿದಿರೆಯ ಜನರು ಸೇರಿ ಅವರ ಅಭಿನಂದನೆ ನಡೆಸಿ ಪ್ರತಿ ವರ್ಷ ಅವರ ಹೆಸರಿನಲ್ಲಿ ಕನ್ನಡ ಮಾಧ್ಯಮ ಶಾಲೆಗೆ ಕೊಡುಗೆ ನೀಡುವುದು, ಬಡವರ ಮಕ್ಕಳಿಗೆ ಸಹಾಯ ನೀಡುವುದು. ಮತ್ತು ಅವರ ಸಾಧನೆಯ ಕುರಿತು ಗ್ರಂಥವೊಂದನ್ನು ಪ್ರಕಟಿಸಲು ಯೋಜಿಸಿರುವುದಾಗಿ ತಿಳಿಸಿದರು. 

ಮಾಜಿ ಸಚಿವ ಕೆ ಅಭಯಚಂದ್ರ ಅವರು ಮಾತನಾಡಿ, ಕನ್ನಡ ಭವನದಲ್ಲಿ ಅಭಿನಂದನಾ ಸಭೆ ನಡೆಸುವಂತೆ ಸಲಹೆಯಿತ್ತರು.  ತನ್ನ ದೇಣಿಗೆಯಾಗಿ ರೂ 1ಲಕ್ಷ ವನ್ನು ಘೋಷಿಸಿದರು. ಉದ್ಯಮಿ ಶ್ರೀಪತಿ ಭಟ್, ನಾರಾಯಣ ಪಿ ಎಂ, ಚೌಟರ ಅರಮನೆ ಕುಲದೀಪ್ ಎಂ., ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್,  ಆಳ್ವಾಸ್ ಆಸ್ಪತ್ರೆ ಹಿರಿಯ ವೈದ್ಯ ಡಾ ಹರೀಶ್ ನಾಯಕ್, ಎಂಸಿಎಸ್ ಸೊಸೈಟಿ ಅಧ್ಯಕ್ಷ  ಬಾಹುಬಲಿ ಪ್ರಸಾದ್,  ರಾಜೇಶ್ವರಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಉದ್ಯಮಿ ಜಯರಾಮ್ ಕೋಟ್ಯಾನ್, ನ್ಯಾಯವಾದಿ ಶ್ವೇತಾ ಜೈನ್, ಕೆಪಿ ಜಗದೀಶ್ ಅಧಿಕಾರಿ, ರೋಟರಿ ಟೆಂಪಲ್ ಟೌನ್ ಅಧ್ಯಕ್ಷ ಹರೀಶ್ ಎಂ ಕೆ, ಉದ್ಯಮಿ ಪೂರ್ಣ ಚಂದ್ರ ಜೈನ್, ಮಹೇಂದ್ರ ವರ್ಮ, ಅಶ್ವಿನ್ ಜೆ ಪಿರೇರಾ, ಅಬುಲ್ ಅಲಾ, ವಿಶ್ವನಾಥ್ ಕಾಮತ್ ಬೋಳ, ವೆಂಕಟರಮಣ ಹನುಮಂತ ದೇವಳಗಳ ಆಡಳಿತ ಮೊಕ್ತೇಸರ ಉಮೇಶ್ ಪೈ, ಡಾ ಮುರಳಿಕೃಷ್ಣ, ಪಡುಮಾರ್ನಾಡು ದಯಾನಂದ ಪೈ, ಪ್ರೆಸ್ ಕ್ಲಬ್ ಅಧ್ಯಕ್ಷ ಸೀತಾರಾಮ ಆಚಾರ್ಯ, ಪತ್ರಕರ್ತರ ಸಂಘದ ಅಧ್ಯಕ್ಷ ನವೀನ್ ಸಾಲ್ಯಾನ್, ದಿವಾಕರ್ ಬಂಗೇರ, ರಿಕ್ಷಾ ಯೂನಿಯನ್ ಅಧ್ಯಕ್ಷ ದೀಪಕ್ ರಾಜ್ , ರಾಜೇಶ್ ಸುವರ್ಣ, ರಾಹುಲ್ ಕುಲಾಲ್ ಈ ಸಂದರ್ಭದಲ್ಲಿ ಭಾಗವಹಿಸಿದ್ದರು.  ರಾಮಚಂದ್ರ ಮಿಜಾರು ಕಾರ್ಯಕ್ರಮದ ರೂಪುರೇಷಗಳನ್ನು ತಿಳಿಸಿ ಧನ್ಯವಾದವಿತ್ತರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article