ಸಂತ ಫಿಲೋಮಿನಾಕಾಲೇಜಿನ ದ್ವಿತೀಯ-ಚತುರ್ಥ ಸೆಮಿಸ್ಟರ್ ಪರೀಕ್ಷಾ ಫಲಿತಾಂಶ ಪ್ರಕಟ

ಸಂತ ಫಿಲೋಮಿನಾಕಾಲೇಜಿನ ದ್ವಿತೀಯ-ಚತುರ್ಥ ಸೆಮಿಸ್ಟರ್ ಪರೀಕ್ಷಾ ಫಲಿತಾಂಶ ಪ್ರಕಟ


ಪುತ್ತೂರು: ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ-2025-26ನೇ ಶೈಕ್ಷಣಿಕ ವರ್ಷದ ದ್ವಿತೀಯ ಹಾಗೂ ಚತುರ್ಥ ಸೆಮಿಸ್ಟರ್ ಪದವಿ ಪರೀಕ್ಷೆಗಳ ಫಲಿತಾಂಶವನ್ನು ಶನಿವಾರ ಪ್ರಕಟಿಸಿದೆ.

ಜೂನ್ 2ರಂದು ಆರಂಭಗೊಂಡ ಪರೀಕ್ಷೆಗಳು ಜೂನ್ 15ರಂದು ಯಶಸ್ವಿಯಾಗಿ ಪೂರ್ಣಗೊಂಡಿದ್ದವು. ಮೌಲ್ಯಮಾಪನ ಕಾರ್ಯವನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ, ಎಲ್ಲಾ ಪದವಿ ಕೋರ್ಸ್‌ಗಳ ಫಲಿತಾಂಶವನ್ನು ನಿಗದಿತ ಸಮಯದಲ್ಲೇ ಪ್ರಕಟಿಸುವ ಮೂಲಕ ಕಾಲೇಜಿನ ಪರೀಕ್ಷಾ ವಿಭಾಗ ಮತ್ತೊಮ್ಮೆ ತನ್ನ ಕಾರ್ಯಕ್ಷಮತೆಯನ್ನು ಸಾಬೀತುಪಡಿಸಿದೆ.


ವಿಭಾಗವಾರು ಅಗ್ರಸ್ಥಾನ ಪಡೆದ ವಿದ್ಯಾರ್ಥಿಗಳು:

ಬಿ.ಎ.

II ಸೆಮಿಸ್ಟರ್-ಸೃಷ್ಟಿ ಶೆಣೈ 519 ಅಂಕ (94.36%)

IV ಸೆಮಿಸ್ಟರ್-ಫಾತಿಮತ್ ಮಿಜ್ನಾ 571 ಅಂಕ (95.17%)

ಬಿ.ಕಾಂ.

II ಸೆಮಿಸ್ಟರ್-ಆದಿತಿ ಡಿ. 624 ಅಂಕ (96%)

IV ಸೆಮಿಸ್ಟರ್-ಅಫ್ರೀನಾ 573 ಅಂಕ (95.50%)

ಬಿ.ಎಸ್‌ಸಿ.

II ಸೆಮಿಸ್ಟರ್-ಶ್ರೀವಿದ್ಯಾ ಎನ್. 679 ಅಂಕ (97%)

IV ಸೆಮಿಸ್ಟರ್-ಅಶ್ವಿನಿ 734 ಅಂಕ (97.87%)

ಬಿ.ಬಿ.ಎ.

II ಸೆಮಿಸ್ಟರ್-ಮೋನಿಷಾ ಎಸ್. 584 ಅಂಕ (89.85%)

IV ಸೆಮಿಸ್ಟರ್-ವೈಷ್ಮಾ ಎಂ.ಪಿ. 563 ಅಂಕ (93.83%)

ಬಿ.ಬಿ.ಎ. (ಬಿಸಿನೆಸ್ ಅನಾಲಿಟಿಕ್ಸ್)

II ಸೆಮಿಸ್ಟರ್-ತೇಜಸ್ವಿ 595 ಅಂಕ (91.54%)

ಬಿ.ಸಿ.ಎ.

II ಸೆಮಿಸ್ಟರ್-ಪ್ರತ್ಯಕ್ಷ ಪಿ.ಎ. 570 ಅಂಕ (87.69%)

IV ಸೆಮಿಸ್ಟರ್-ಶ್ರವಣ್ ಕೆ. 619 ಅಂಕ (88.43%)

ಬಿ.ಸಿ.ಎ. (AI & ML)

II ಸೆಮಿಸ್ಟರ್-ಅಪೇಕ್ಷಾ ಜಿ. 629 ಅಂಕ (96.77%)

IV ಸೆಮಿಸ್ಟರ್-ಕೆ. ಸಹನಾಜ್ 684 ಅಂಕ (97.71%)

ಬಿ.ಸಿ.ಎ. (ಡೇಟಾ ಅನಾಲಿಟಿಕ್ಸ್)

II ಸೆಮಿಸ್ಟರ್-ಸಿಹಾ ಶಾಮ್ರಾ 574 ಅಂಕ (88.31%)

ಬಿ.ಎಸ್‌ಸಿ. (ಡೇಟಾ ಸೈನ್ಸ್)

II ಸೆಮಿಸ್ಟರ್-ಶರಣ್ಯಾ ಕೆ.ಎಸ್. 674 ಅಂಕ (96.29%)


ಪ್ರಾಂಶುಪಾಲರ ಮಾತು


‘ಸ್ವಾಯತ್ತ ಕಾಲೇಜಿನ ಪರೀಕ್ಷಾ ವ್ಯವಸ್ಥೆಯನ್ನು ಅತ್ಯಂತ ವ್ಯವಸ್ಥಿತ, ಪಾರದರ್ಶಕ ಹಾಗೂ ಸಮಯಬದ್ಧವಾಗಿ ನಡೆಸಿ, ನಿಗದಿತ ಅವಧಿಯಲ್ಲೇ ಫಲಿತಾಂಶ ಪ್ರಕಟಿಸಿರುವುದು ಪರೀಕ್ಷಾ ವಿಭಾಗದ ಕಾರ್ಯಕ್ಷಮತೆಗೆ ಸಾಕ್ಷಿಯಾಗಿದೆ. ಕುಲಸಚಿವ (ಪರೀಕ್ಷಾಂಗ) ಡಾ. ವಿನಯಚಂದ್ರ ಅವರ ಸಮರ್ಥ ಮಾರ್ಗದರ್ಶನದಲ್ಲಿ ಉಪ ಕುಲಸಚಿವ (ಪರೀಕ್ಷಾಂಗ) ಜಾನ್ಸನ್ ಡೇವಿಡ್ ಸಿಕ್ವೇರಾ, ಅಭಿಷೇಕ್ ಸುವರ್ಣ ಪರೀಕ್ಷಾ ವಿಭಾಗದ ಸಿಬ್ಬಂದಿ, ಮೌಲ್ಯಮಾಪಕರು ಹಾಗೂ ಬೋಧಕ-ಬೋಧಕೇತರ ಸಿಬ್ಬಂದಿ ಅತ್ಯುತ್ತಮ ಸಮನ್ವಯದೊಂದಿಗೆ ಕಾರ್ಯನಿರ್ವಹಿಸಿದ್ದಾರೆ. ಅವರ ಪರಿಶ್ರಮ ಮತ್ತು ಬದ್ಧತೆಯ ಫಲವಾಗಿ ಪರೀಕ್ಷಾ ಪ್ರಕ್ರಿಯೆ ಯಾವುದೇ ಅಡೆತಡೆಗಳಿಲ್ಲದೆ ಯಶಸ್ವಿಯಾಗಿ ಪೂರ್ಣಗೊಂಡು, ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಫಲಿತಾಂಶವನ್ನು ಪ್ರಕಟಿಸಲು ಸಾಧ್ಯವಾಗಿದೆ.

ಈ ಯಶಸ್ವಿ ಕಾರ್ಯದ ಹಿಂದಿರುವ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂದನೀಯ ಡಾ. ಪೀಟರ್ ಪೌಲ್ ಸಲ್ಡಾನ್ಹಾ, ಕ್ಯಾಥೊಲಿಕ್ ಬೋರ್ಡ್ ಆಫ್ ಎಜುಕೇಶನ್, ಮಂಗಳೂರು ಇದರ ಕಾರ್ಯದರ್ಶಿ ಅತಿ ವಂದನೀಯ ಡಾ. ಪ್ರವೀಣ್ ಲಿಯೋ ಲಸ್ರಾಡೊ  ಹಾಗೂ ಕಾಲೇಜಿನ ಸಂಚಾಲಕರಾದ ಅತಿ ವಂದನೀಯ ಫಾ. ಜೆ.ಬಿ. ಸಲ್ಡಾನ್ಹಾ ಅವರ ನಿರಂತರ ಮಾರ್ಗದರ್ಶನ, ಪ್ರೋತ್ಸಾಹ ಹಾಗೂ ಬೆಂಬಲಕ್ಕೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಅವರ ದೂರದೃಷ್ಟಿಯ ನಾಯಕತ್ವವು ಕಾಲೇಜಿನ ಶೈಕ್ಷಣಿಕ ಗುಣಮಟ್ಟ ಮತ್ತು ಪರೀಕ್ಷಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ.

ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಅಭಿನಂದನೆಗಳು ಹಾಗೂ ಮುಂದಿನ ಶೈಕ್ಷಣಿಕ ಪಯಣದಲ್ಲಿಯೂ ಇದೇ ಸಾಧನೆಯನ್ನು ಮುಂದುವರಿಸುವಂತೆ ಶುಭ ಹಾರೈಸುತ್ತೇನೆ. -ಪ್ರಾಂಶುಪಾಲರು, ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜು

ಕುಲಸಚಿವರು (ಪರೀಕ್ಷಾಂಗ)ರ ಮಾತು: ಡಾ. ವಿನಯಚಂದ್ರ


‘2025-26ನೇ ಶೈಕ್ಷಣಿಕ ವರ್ಷದ ದ್ವಿತೀಯ ಹಾಗೂ ಚತುರ್ಥ ಸೆಮಿಸ್ಟರ್ ಪದವಿ ಪರೀಕ್ಷೆಗಳು ಜೂನ್ 2ರಿಂದ 15ರವರೆಗೆ ಸುಸೂತ್ರವಾಗಿ ಹಾಗೂ ಯಾವುದೇ ಅಡೆತಡೆಗಳಿಲ್ಲದೆ ಯಶಸ್ವಿಯಾಗಿ ನಡೆದವು. ಕಾಲೇಜಿನ ವಿವಿಧ ಪದವಿ ಕೋರ್ಸ್‌ಗಳ ಸಾವಿರಾರು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಪರೀಕ್ಷಾ ವೇಳಾಪಟ್ಟಿಯನ್ನು ಕಟ್ಟುನಿಟ್ಟಾಗಿ ಪಾಲಿಸುವುದರೊಂದಿಗೆ, ಪ್ರಶ್ನೆಪತ್ರಿಕೆಗಳ ಗೌಪ್ಯತೆ, ಪರೀಕ್ಷಾ ಶಿಸ್ತು ಹಾಗೂ ಪಾರದರ್ಶಕತೆಗೆ ವಿಶೇಷ ಆದ್ಯತೆ ನೀಡಲಾಯಿತು.

ಪರೀಕ್ಷೆ ಪೂರ್ಣಗೊಂಡ ತಕ್ಷಣವೇ ಉತ್ತರ ಪತ್ರಿಕೆಗಳ ಕೋಡಿಂಗ್ ಪ್ರಕ್ರಿಯೆಯನ್ನು ಕೈಗೊಂಡು, ಮೌಲ್ಯಮಾಪನದ ಸಂಪೂರ್ಣ ಹಂತದಲ್ಲಿ ವಿದ್ಯಾರ್ಥಿಗಳ ಗುರುತು ಗೌಪ್ಯವಾಗಿರುವಂತೆ ಕ್ರಮವಹಿಸಲಾಯಿತು. ವಿಷಯ ಪರಿಣತ ಮೌಲ್ಯಮಾಪಕರಿಂದ ಉತ್ತರ ಪತ್ರಿಕೆಗಳನ್ನು ನಿಷ್ಪಕ್ಷಪಾತವಾಗಿ ಹಾಗೂ ಗುಣಮಟ್ಟದ ಮಾನದಂಡಗಳಿಗೆ ಅನುಗುಣವಾಗಿ ಮೌಲ್ಯಮಾಪನ ಮಾಡಲಾಯಿತು. ಮೌಲ್ಯಮಾಪನ ಪೂರ್ಣಗೊಂಡ ಬಳಿಕ ಉತ್ತರ ಪತ್ರಿಕೆಗಳ ಡಿಕೋಡಿಂಗ್, ಅಂಕಗಳ ಪರಿಶೀಲನೆ, ಫಲಿತಾಂಶಗಳ ಸಂಸ್ಕರಣೆ ಹಾಗೂ ಅಂತಿಮ ದೃಢೀಕರಣವನ್ನು ಅತ್ಯಂತ ನಿಖರವಾಗಿ ಪೂರ್ಣಗೊಳಿಸಿ, ಫಲಿತಾಂಶವನ್ನು ನಿಗದಿತ ವೇಳೆಯಲ್ಲೇ ಪ್ರಕಟಿಸಲಾಯಿತು.

ಪರೀಕ್ಷಾ ಪ್ರಕ್ರಿಯೆಯ ಪ್ರತಿಯೊಂದು ಹಂತದಲ್ಲೂ ನಿಖರತೆ, ಪಾರದರ್ಶಕತೆ ಮತ್ತು ಗೌಪ್ಯತೆಯನ್ನು ಕಾಪಾಡುವುದು ನಮ್ಮ ಪ್ರಮುಖ ಆದ್ಯತೆಯಾಗಿತ್ತು. ಈ ಕಾರ್ಯದ ಯಶಸ್ಸಿಗೆ ಸಹಕರಿಸಿದ ಉಪ ಕುಲಸಚಿವರು (ಪರೀಕ್ಷಾಂಗ), ಪರೀಕ್ಷಾ ವಿಭಾಗದ ಸಿಬ್ಬಂದಿ, ವಿಭಾಗಗಳ ಮುಖ್ಯಸ್ಥರು, ಮೌಲ್ಯಮಾಪಕರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗೆ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ವಿದ್ಯಾರ್ಥಿಗಳು ಈ ಫಲಿತಾಂಶವನ್ನು ತಮ್ಮ ಮುಂದಿನ ಶೈಕ್ಷಣಿಕ ಸಾಧನೆಗಳಿಗೆ ಪ್ರೇರಣೆಯನ್ನಾಗಿ ಮಾಡಿಕೊಂಡು ಇನ್ನಷ್ಟು ಉನ್ನತ ಸಾಧನೆ ಮಾಡುವಂತೆ ಶುಭ ಹಾರೈಸುತ್ತೇನೆ’ ಎಂದು ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article