ಸಂತ ಫಿಲೋಮಿನಾ ಕಾಲೇಜಿನಲ್ಲಿ ಆಡಳಿತ ಸಿಬ್ಬಂದಿಗೆ ನಾಲ್ಕು ದಿನಗಳ ‘ಕಂಪ್ಯೂಟರೀಕೃತ ಅಕೌಂಟಿಂಗ್ ತರಬೇತಿ ಕಾರ್ಯಕ್ರಮ’

ಸಂತ ಫಿಲೋಮಿನಾ ಕಾಲೇಜಿನಲ್ಲಿ ಆಡಳಿತ ಸಿಬ್ಬಂದಿಗೆ ನಾಲ್ಕು ದಿನಗಳ ‘ಕಂಪ್ಯೂಟರೀಕೃತ ಅಕೌಂಟಿಂಗ್ ತರಬೇತಿ ಕಾರ್ಯಕ್ರಮ’


ಪುತ್ತೂರು: ಸಂತ ಫಿಲೋಮಿನಾ (ಸ್ವಾಯತ್ತ) ಕಾಲೇಜಿನಲ್ಲಿ ತನ್ನ ಆಡಳಿತ ಮಂಡಳಿ ಸಿಬ್ಬಂದಿಗಾಗಿ ಜೂ.22 ರಿಂದ ಜೂ.25 ರವರೆಗೆ ಕಾಲೇಜಿನ ಗಣಿತ ಪ್ರಯೋಗಾಲಯದಲ್ಲಿ ನಾಲ್ಕು ದಿನಗಳ ಅಕೌಂಟಿಂಗ್ ತರಬೇತಿ ಕಾರ್ಯಕ್ರಮ ನಡೆಯಿತು.


ಕಾರ್ಯಕ್ರಮದ ಸಮಾರೋಪ ಸಮಾರಂಭ ಮತ್ತು ಪ್ರಮಾಣಪತ್ರ ವಿತರಣಾ ಕಾರ್ಯಕ್ರಮವನ್ನು ಕಾಲೇಜಿನ ಪಿಜಿ ಸೆಮಿನಾರ್ ಹಾಲ್‌ನಲ್ಲಿ ನಡೆಯಿತು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ವಂ. ಡಾ. ಆಂಟನಿ ಪ್ರಕಾಶ್ ಮೊಂತೇರೊ ಮಾತನಾಡಿ, ಸಂಸ್ಥೆಯ ಬೆಳವಣಿಗೆಯಲ್ಲಿ ಆಡಳಿತ ಸಿಬ್ಬಂದಿಯ ಕೊಡುಗೆಯು ಬೋಧಕ ಸಿಬ್ಬಂದಿಗೆ ಸಮಾನವಾಗಿದೆ ಎಂದು ಅಭಿಪ್ರಾಯಪಟ್ಟರು. 


ಶ್ರಮದ ಗೌರವವನ್ನು ಕಾಪಾಡಿಕೊಳ್ಳುವ ಅಗತ್ಯವನ್ನು ಹೇಳಿದ ಅವರು, ಕೆಲಸದಲ್ಲಿ ಸಮಯಪಾಲನೆ ಮತ್ತು ಪಾರದರ್ಶಕತೆಗೆ ಒತ್ತು ನೀಡಿ, ಪ್ರತಿಯೊಂದು ವಿಷಯದಲ್ಲೂ ಎಲ್ಲರೂ ಕೈಜೋಡಿಸಿ ಕೆಲಸ ಮಾಡಿದಾಗ ಖಂಡಿತವಾಗಿಯೂ ಕಾಲೇಜನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.


ಉಪಪ್ರಾಂಶುಪಾಲ ಡಾ. ವಿಜಯ ಕುಮಾರ್ ಮೊಳೆಯಾರ್ ಮಾತನಾಡಿ, ಯಾವುದೇ ಕ್ಷೇತ್ರದಲ್ಲಿ ಮಾಡುವ ಸಮರ್ಪಿತ ಸೇವೆಯು ದೇವರಿಗೆ ಸಲ್ಲಿಸುವ ಸೇವೆಗೆ ಸಮಾನವಾಗಿದೆ ಎಂದು ಆಶಿಸಿದ ಅವರು ಸಿಬ್ಬಂದಿಗಳು ಆ ಹಾದಿಯಲ್ಲಿ ನಡೆದು ಕೀರ್ತಿ ತರಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಫ್ಯಾಕಲ್ಟಿ ಡೆವಲಪ್ಮೆಂಟ್ ಆಂಡ್ ಅಪ್ರೈಸಲ್ ಸೆಲ್‌ನ ಸಂಯೋಜಕ ಡಾ. ಎಡ್ವಿನ್ ಡಿಸೋಜ ಉಪಸ್ಥಿತರಿದ್ದರು. ಎಸ್‌ಡಿಎ ಸುದೀಪ್ ಕ್ಲಿಟಸ್ ವಾಸ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಎಸ್‌ಡಿಎ ಮೇರಿಯಟ್ ಶೆರ್ಲಿ ಡಿಸೋಜ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article