ತನುವಿ, ತೇಜಸ್ವಿರಾಜ್ ದೂರದರ್ಶನ ‘ಬಿ’ ಗ್ರೇಡ್ ಕಲಾವಿದರು

ತನುವಿ, ತೇಜಸ್ವಿರಾಜ್ ದೂರದರ್ಶನ ‘ಬಿ’ ಗ್ರೇಡ್ ಕಲಾವಿದರು


ಪುತ್ತೂರು: ಬೆಂಗಳೂರು ದೂರದರ್ಶನ ಕಳೆದ ನವೆಂಬರ್‌ನಲ್ಲಿ ನಡೆಸಿದ ಭರತನಾಟ್ಯ ಆಡಿಷನ್‌ನಲ್ಲಿ ಪುತ್ತೂರು ನೃತ್ಯೋಪಾಸನಾ ಕಲಾ ಅಕಾಡೆಮಿ ಇದರ ವಿದ್ಯಾರ್ಥಿಗಳಾದ ತನುವಿ ಮತ್ತು ತೇಜಸ್ವಿರಾಜ್ ‘ಬಿ’ ಗ್ರೇಡ್ ಕಲಾವಿದರಾಗಿ ಆಯ್ಕೆಯಾಗಿದ್ದಾರೆ.

ಇದರೊಂದಿಗೆ ನೃತ್ಯೋಪಾಸನಾ ಅಕಾಡೆಮಿಯ ನಾಲ್ವರು ವಿದ್ಯಾರ್ಥಿಗಳು ದೂರದರ್ಶನದ ‘ಬಿ’ ಗ್ರೇಡ್ ಕಲಾವಿದರಾಗಿ ಆಯ್ಕೆಯಾದಂತಾಗಿದೆ.

ಇವರಿಬ್ಬರು ಅಕಾಡೆಮಿಯ ನೃತ್ಯಗುರು ಶಾಲಿನಿ ಆತ್ಮಭೂಷಣ್ ಅವರಲ್ಲಿ ಕಳೆದ 12 ವರ್ಷಗಳಿಂದ ತನುವಿ ಹಾಗೂ 11 ವರ್ಷಗಳಿಂದ ತೇಜಸ್ವಿರಾಜ್ ನೃತ್ಯಾಭ್ಯಾಸ ಮಾಡುತ್ತಿದ್ದಾರೆ. ಇವರು ಶಾಲಿನಿ ಆತ್ಮಭೂಷಣ್ ಮಾರ್ಗದರ್ಶನದಲ್ಲಿ ಆಡಿಷನ್‌ಗೆ  ಹಾಜರಾಗಿದ್ದರು.

ಉಪ್ಪಿನಂಗಡಿ ನಿವಾಸಿ ಯೋಗಾನಂದ ಮತ್ತು ಸುನೀತ ದಂಪತಿ ಪುತ್ರಿಯಾದ ತನುವಿ ಪುತ್ತೂರು ವಿವೇಕಾನಂದ ವಿದ್ಯಾಲಯದಲ್ಲಿ ಬಿಸಿಎ ವ್ಯಾಸಂಗ ಮಾಡುತ್ತಿದ್ದಾರೆ. ಪ್ರಸಕ್ತ ಭರತನಾಟ್ಯದಲ್ಲಿ ವಿದ್ವತ್ ಅಂತಿಮ ಪರೀಕ್ಷೆ ಬರೆದಿದ್ದಾರೆ.

ಕಡಬ ಬಳಿಯ ಮರ್ದಾಳದ ಕೊಳಂತಾಡಿ ನಿವಾಸಿ ದಿ.ಶಾಂತಾರಾಮ ಗೌಡ ಮತ್ತು ಲಕ್ಷ್ಮೀ ದಂಪತಿ ಪುತ್ರನಾದ ತೇಜಸ್ವಿರಾಜ್ ಪ್ರಸ್ತುತ ಪುತ್ತೂರಲ್ಲಿ ಸಿಎ ಕಲಿಯುತ್ತಿದ್ದಾರೆ. ಇವರು ಹಂಪಿ ಉತ್ಸವ, ಬನವಾಸಿ ಕದಂಬೋತ್ಸವ, ಮೈಸೂರು ದಸರಾ, ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನ, ಮಂತ್ರಾಲಯ, ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ ಲಕ್ಷದೀಪೋತ್ಸವ ಮತ್ತಿತರ ಕಡೆಗಳಲ್ಲಿ ನೃತ್ಯ ಪ್ರದರ್ಶನ ನೀಡಿದ್ದಾರೆ. ಭರತನಾಟ್ಯದಲ್ಲಿ ವಿದ್ವತ್ ಪೂರ್ವ ಪೂರೈಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article