ವಿದ್ಯುತ್ ಸಮಸ್ಯೆ ಸರಿಪಡಿಸಿ ಇಲ್ಲವಾದರೆ ಪ್ರತಿಭಟನೆ: ಬಿಜೆಪಿ ಎಚ್ಚರಿಕೆ

ವಿದ್ಯುತ್ ಸಮಸ್ಯೆ ಸರಿಪಡಿಸಿ ಇಲ್ಲವಾದರೆ ಪ್ರತಿಭಟನೆ: ಬಿಜೆಪಿ ಎಚ್ಚರಿಕೆ


ಪುತ್ತೂರು: ತಾಲೂಕಿನಾದ್ಯಂತ ಕಳೆದ 15 ದಿನಗಳಿಂದ ವಿದ್ಯುತ್ ಕಡಿತ ನಿರಂತರವಾಗಿ ನಡೆಯುತ್ತಿದೆ. ಮಳೆಗಾಲದ ಮೊದಲೇ ಈ ಸ್ಥಿತಿ ನಿರ್ಮಾಣವಾದರೆ ಮುಂದೆ ಜನಸಾಮಾನ್ಯರ ಪಾಲಿಗೆ ಅತೀವ ತೊಂದರೆಯಾಗಲಿದೆ. ಆದ್ದರಿಂದ ತಕ್ಷಣ ವಿದ್ಯುತ್ ಕಡಿತ ಸಮಸ್ಯೆಯನ್ನು ಪರಿಹರಿಸಬೇಕು. ಅದಕ್ಕೆ ಸಂಬಂಧಿತ ಪೂರ್ವ ತಯಾರಿ ಮಾಡಿಕೊಳ್ಳಬೇಕು. ವಾರದೊಳಗೆ ಸಮಸ್ಯೆ ಸರಿಯಾಗಬೇಕು. ಇಲ್ಲವಾದರೆ ಮೆಸ್ಕಾಂ ಕಚೇರಿ ಮುಂಭಾಗ ಪ್ರತಿಭಟನೆ ನಡೆಸುವುದಾಗಿ ಮಾಜಿ ಶಾಸಕ ಸಂಜೀವ ಮಠಂದೂರು ಎಚ್ಚರಿಕೆ ನೀಡಿದರು.

ಬುಧವಾರ ಬಿಜೆಪಿ ವತಿಯಿಂದ ಬನ್ನೂರಿನ ಮೆಸ್ಕಾಂ ಕಚೇರಿಗೆ ತೆರಳಿ ಮನವಿ ಅರ್ಪಿಸಿದ ಸಂದರ್ಭ ಅವರು ಮಾತನಾಡಿದರು.

ಈ ಬಾರಿ ಮಳೆ ಗಾಳಿಯ ಸಮಸ್ಯೆ ಹೆಚ್ಚಾಗಿ ಕಾಡಿಲ್ಲ. ಆದರೂ ವಿದ್ಯುತ್ ಇಲ್ಲ. ಕುಡಿಯುವ ನೀರಿನ ಸಮಸ್ಯೆ ತಲೆದೋರಲಿದೆ. ಅಪಾಯಕಾರಿ ಮರಗಳ ಕೊಂಬೆಗಳ ತೆರವು ಕಾರ್ಯ ನಡೆದಿಲ್ಲ. ದುರಸ್ಥಿ ಕಾರ್ಯವೂ ಆಗಿಲ್ಲ. ಪವರ್ ಮ್ಯಾನ್‌ಗಳ ವರ್ಗಾವಣೆ ಸಮಸ್ಯೆಗೆ ಮೂಲ ಕಾರಣವಾಗಿದೆ. ಹೊರ ಜಿಲ್ಲೆಯವರಿಗೆ ಗುತ್ತಿಗೆ ನೀಡಲಾಗುತ್ತಿದೆ. ತಕ್ಷಣ ಪವರ್‌ಮ್ಯಾನ್ ಗಳ ನೇಮಕ, ದುರಸ್ಥಿ ಕಾರ್ಯ ಹಾಗೂ ಮರಗಳ ರೆಂಬೆ ಕತ್ತರಿಸುವ ಕೆಲಸ ಮಾಡಬೇಕು. ಮೆಸ್ಕಾಂ ಸಹಾಯವಾಣಿ ಆರಂಭ ಮಾಡಬೇಕು ಎಂದು ಅವರು ಆಗ್ರಹಿಸಿದರು. 

ಸಹಾಯವಾಣಿ’ ಸದಾ ಎಂಗೇಜ್:

ಮೆಸ್ಕಾಂನಲ್ಲ ತುರ್ತು ಸಮಸ್ಯೆಗಳನ್ನು ತಿಳಿಸುವುದಕ್ಕಾಗಿ ಸಹಾಯವಾಣಿ ಇದೆ. ಆದರೆ ಈ ನಂಬರಿಗೆ ಫೋನ್ ಮಾಡಿದರೆ ಸದಾ ಎಂಗೇಜ್ ಟೋನ್ ಕೇಳಿಬರುತ್ತದೆ. ಹೀಗಾದರೆ ಜನ ತಮ್ಮ ಸಮಸ್ಯೆ ಬಗ್ಗೆ ಮೆಸ್ಕಾಂಗೆ ತಿಳಿಸುವುದು ಹೇಗೆ. ತಕ್ಷಣ ಸರಿಯಾದ ಸಹಾಯವಾಣಿ ನಂಬರ್ ವ್ಯವಸ್ಥೆ ಮಾಡಿ ಎಂದು ಗೌರಿ ಬನ್ನೂರು ಹೇಳಿದರು. 

ಪುತ್ತೂರು ಕಾರ್ಯನಿರ್ವಾಹಕ ಇಂಜಿನಿಯರ್ ಮೆಸ್ಕಾಂ ರಾಮಚಂದ್ರ ಎ. ಅವರು ಮಾತನಾಡಿ, ಸೋಮವಾರ ಬೀಸಿದ ಬಿರುಗಾಳಿಗೆ ಉಪ್ಪಿನಂಗಡಿ ಭಾಗದಲ್ಲಿ 40 ವಿದ್ಯುತ್ ಕಂಬಗಳು ತುಂಡಾಗಿದೆ. ಆದರೂ ರಾತೋರಾತ್ರಿಯೇ ಕೆಲಸ ಮಾಡಿ ವಿದ್ಯುತ್ ನೀಡುವ ಕೆಲಸ ಮಾಡಿದ್ದೇವೆ. ಪುತ್ತೂರು ನಗರದಲ್ಲಿಯೂ ಸಮಸ್ಯೆಯಾಗಿತ್ತು. ಅದಕ್ಕೂ ಪರಿಹಾರ ತಕ್ಷಣ ನೀಡಲಾಗಿದೆ. 294 ಮಂದಿ ಈಗ ಕೆಲಸ ಮಾಡುತ್ತಿದ್ದಾರೆ. 40 ಮಂದಿಗೆ ವರ್ಗಾವಣೆ ಆದೇಶ ಬಂದಿದೆ. ಆದರೆ ಬದಲಿ ವ್ಯವಸ್ಥೆಯಾಗದೆ ಅವರನ್ನು ರಿಲೀವ್ ಮಾಡಿಲ್ಲ. ಮರದ ಕೊಂಬೆಗಳ ತೆರವು ಹಾಗೂ ಲೈನ್‌ಸುವ್ಯವಸ್ಥೆಗೆ 58 ಮಂದಿ ಕೆಲಸ ಮಾಡುತ್ತಿದ್ದಾರೆ. ೨೪ ಗಂಟೆಯೂ ಕಾರ್ಯ ನಡೆಸಲಾಗುತ್ತಿದೆ. 8 ವಾಹನಗಳನ್ನು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು. 

ನಗರಸಭೆ ಮಾಜಿ ಅಧ್ಯಕ್ಷ ಕೆ.ಜೀವಂಧರ್ ಜೈನ್ ಮಾತನಾಡಿದರು. ಲೀಲಾವತಿ ಅಣ್ಣು ನಾಯ್ಕ, ಸುಂದರ ಪೂಜಾರಿ ಬಡಾವು, ಬಿಜೆಪಿ ಅಧ್ಯಕ್ಷ ಶಿವಕುಮಾರ್, ಯೋಗೀಶ್ ಬಾಳಿಗ, ಹರಿಪ್ರಸಾದ್ ಯಾದವ್, ಲೋಕೇಶ್ ಹೆಗ್ಡೆ, ಸಾಜ ರಾಧಾಕೃಷ್ಣ ಆಳ್ವ, ರಾಜೇಶ್ ಬನ್ನೂರು, ವಿಶ್ವನಾಥ ಗೌಡ ಬನ್ನೂರು, ಸತೀಶ್ ನ್ಯಾಕ್, ವಿದ್ಯಾಧರ್ ಜೈನ್, ಮೋಹಿನಿ ವಿಶ್ವನಾಥ ಗೌಡ, ಮಹೇಶ್ ಕೆರಿ, ನಿತೀಶ್ ಕುಮಾರ್ ಶಾಂತಿವನ, ನಿತಿನ್ ಕಲ್ಲೇಗ, ನಿರಂಜನ ಇದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article