ಮಾನಹಾನಿ- ಪುತ್ತಿಲ ಪರಿವಾರ ಟ್ರಸ್ಟ್ ದೂರು
Saturday, June 27, 2026
ಪುತ್ತೂರು: ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ ಅಧಿಕೃತ ಲೋಗೋ ಬಳಸಿ, ಟ್ರಸ್ಟಿನ ಸಂಚಾಲಕ ಅರುಣ್ ಕುಮಾರ್ ಪುತ್ತಿಲರ ಬಗ್ಗೆ ಸಾಮಾಜಿಕ ಜಾಲತಾಣ (ಫೇಸ್ಬುಕ್)ದಲ್ಲಿ ಸುಳ್ಳು ಮಾಹಿತಿಯನ್ನು ಹಂಚಿದ ಆರೋಪದಲ್ಲಿ ಇಬ್ಬರ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಪ್ರವೀಣ್ ಆಚಾರ್ಯ ಹಾಗೂ ಶರತ್ ಗೌಡ ಎಂಬವರು ಮಾನಹಾನಿಕರ ಪೋಸ್ಟ್ ಪ್ರಕಟಿಸಿ ಅಪಪ್ರಚಾರ ಮಾಡಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪ್ರತ್ಯೇಕ ದೂರಿನಲ್ಲಿ ವಿನಂತಿಸಲಾಗಿದೆ. ದೂರು ನೀಡುವ ಸಂದರ್ಭದಲ್ಲಿ ಟ್ರಸ್ಟ್‌ನ ಅಧ್ಯಕ್ಷರಾದ ಶ್ರೀರಾಮ ಭಟ್, ಸಂಘಟನಾ ಕಾರ್ಯದರ್ಶಿ ಅನಿಲ್ ತೆಂಕಿಲ, ಕೋಶಾಧಿಕಾರಿ ರೂಪೇಶ್ ನಾಕ್, ಮಾಜಿ ಅಧ್ಯಕ್ಷ ಮಹೇಂದ್ರ ವರ್ಮ ಉಪಸ್ಥಿತರಿದ್ದರು.