ಲೋಕೋಪಯೋಗಿ ಇಲಾಖೆ ಉಪ ವಿಭಾಗದ ಕಟ್ಟಡಕ್ಕೆ ಶಂಕುಸ್ಥಾಪನೆ

ಲೋಕೋಪಯೋಗಿ ಇಲಾಖೆ ಉಪ ವಿಭಾಗದ ಕಟ್ಟಡಕ್ಕೆ ಶಂಕುಸ್ಥಾಪನೆ


ಉಳ್ಳಾಲ: ಉಳ್ಳಾಲ ತಾಲೂಕಿನಲ್ಲಿ ಅಭಿವೃದ್ಧಿ ಕೆಲಸ ಆಗಬೇಕಾದರೆ ಇಲಾಖೆಗಳ ಉಪ ಕೇಂದ್ರ ಅಗತ್ಯ ಬೇಕು. ಈಗಾಗಲೇ ಕೈಗೊಂಡಿರುವ ವಿವಿಧ ಯೋಜನೆಗಳ ಅಭಿವೃದ್ಧಿ ದೃಷ್ಟಿಯಿಂದ ಈ ಉಪಕೇಂದ್ರಕ್ಕೆ ಶಿಲಾನ್ಯಾಸ ಈಗಾಗಲೇ ನೆರವೇರಿಸಲಾಗಿದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಹೇಳಿದರು.

ಅವರು ಕೋಟೆಕಾರ್ ಬೀರಿ ಪಶು ಆಸ್ಪತ್ರೆ ಸಮೀಪ ನೂತನವಾಗಿ ನಿರ್ಮಾಣ ಆಗಲಿರುವ ಉಳ್ಳಾಲ ತಾಲೂಕಿನ ಲೋಕೋಪಯೋಗಿ ಇಲಾಖೆ ಉಪ ವಿಭಾಗದ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

250 ಕೋ.ರೂ ಅನುದಾನದಲ್ಲಿ ಕೋಟೆಪುರ ಬ್ರಿಡ್ಜ್, ಸಜಿಪದಿಂದ ತುಂಬೆಗೆ ಹೋಗುವ ಸೇತುವೆಗೆ 67 ಕೋಟಿ ಅನುದಾನ, ಉಳ್ಳಾಲ ಅಬ್ಬಕ್ಕ ಸರ್ಕಲ್‌ನಿಂದ ರಸ್ತೆ ಅಗಲೀಕರಣಕ್ಕೆ 30 ಕೋಟಿ ರೂ. ಅನುದಾನ, ಅಬ್ಬಕ್ಕ ಸರ್ಕಲ್‌ನಿಂದ ಕೋಡಿ ರಸ್ತೆ ಅಗಲೀಕರಣಕ್ಕೆ 14 ಕೋಟಿ ರೂ. ಅನುದಾನ ಬಿಡುಗಡೆ ಆಗಿದೆ. ಬಾಕಿ ಇರುವ ಉಳಿದ ಕೆಲಸಕ್ಕೆ ಅನುದಾನ ಶೀಘ್ರ ಬಿಡುಗಡೆ ಆಗಲಿದೆ. ಈ ಎಲ್ಲಾ ಕೆಲಸ ಆಗಬೇಕಾದರೆ ಉಳ್ಳಾಲಕ್ಕೆ ಲೋಕೋಪಯೋಗಿ ಇಲಾಖೆ ಉಪ ಕೇಂದ್ರ ಅಗತ್ಯ ಇದೆ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಬೋಳಿಯಾರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್, ಮನ್ಸೂರ್ ಮಂಚಿಲ, ಕೋಟೆಕಾರ್ ಪಟ್ಟಣ ಪಂಚಾಯತ್ ಕೌನ್ಸಿಲರ್ ಅಹ್ಮದ್ ಅಜ್ಜಿನಡ್ಕ, ಇಸಾಕ್, ಸೆಫಿಯ, ಅಧ್ಯಕ್ಷ ದಿವ್ಯ ಸತೀಶ್, ಹರೀಶ್ ಮುಖ್ಯಾಧಿಕಾರಿ ಮಾಲಿನಿ, ಇಂಜಿನಿಯರ್ ದಿನೇಶ್, ಸೋಮೇಶ್ವರ ಪುರಸಭೆ ಕೌನ್ಸಿಲರ್ ಸಲಾಮ್ ಉಚ್ಚಿಲ, ಹಮೀದ್ ಹಸನ್ ಮಾಡೂರು, ಮಮತಾ ಗಟ್ಟಿ, ಹರ್ಷರಾಜ್ ಮುದ್ಯ ಆಳ್ವಿನ್ ಡಿ’ಸೋಜ, ಗುತ್ತಿಗೆ ದಾರ ಕಲ್ಬಾವಿ ಪುರುಷೋತ್ತಮ ಕುಲಾಲ್ ಮತ್ತಿತರರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article