ಗ್ಯಾರಂಟಿ ಅನುಷ್ಠಾನ ಉಪಯೋಗಿಸಿದವರಿಗೆ ಅದರ ಲಾಭ ಅರ್ಥವಾಗುತ್ತದೆ: ಸಚಿವ ಯುಟಿ ಖಾದರ್

ಗ್ಯಾರಂಟಿ ಅನುಷ್ಠಾನ ಉಪಯೋಗಿಸಿದವರಿಗೆ ಅದರ ಲಾಭ ಅರ್ಥವಾಗುತ್ತದೆ: ಸಚಿವ ಯುಟಿ ಖಾದರ್


ಉಳ್ಳಾಲ: ಗ್ಯಾರಂಟಿ ಯೋಜನೆ ಈಗ ಎಷ್ಟು ಪ್ರಯೋಜನ ಆಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಸರ್ಕಾರದ ಐದು ಯೋಜನೆಗಳನ್ನು ಸರಿಯಾಗಿ ಉಪಯೋಗ ಮಾಡಿದವರಿಗೆ ಅದರಿಂದ ಆಗುವ ಲಾಭ ಅರ್ಥ ಆಗಿದೆ ಎಂದು ಆರೋಗ್ಯ ಸಚಿವ ಯುಟಿ ಖಾದರ್ ಹೇಳಿದರು.

ಅವರು ತೊಕ್ಕೊಟ್ಟು ಬಳಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಉಳ್ಳಾಲ ಪಂಚಾಯತ್ ಸಂಯುಕ್ತ ಆಶ್ರಯದಲ್ಲಿ ನಿರ್ಮಾಣಗೊಂಡ ಗ್ಯಾರಂಟಿ ಅನುಷ್ಠಾನ ಸಮಿತಿ ಕಚೇರಿ ಉದ್ಘಾಟಿಸಿ ಮಾತನಾಡಿದರು.

ಒಬ್ಬನ ಕೈಯಲ್ಲಿ ಒಂದು ಕೋಟಿ ಹಣ ನೀಡಿದರೆ ಊರಿನ ಜನರಿಗೆ ಅದರಿಂದ ಪ್ರಯೋಜನ ಸಿಗದು. ಎಲ್ಲರಿಗೆ ಎರಡು ಸಾವಿರ ರೂ.ನಂತೆ ಹಂಚಿದರೆ ದೊಡ್ಡ ಮಟ್ಟದಲ್ಲಿ ಒಂದು ವ್ಯವಹಾರ ನಡೆಯುತ್ತದೆ. ಈ ಬಾರಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣ ವ್ಯವಸ್ಥೆ ಮಾಡಲು ಸರ್ಕಾರ ನಿರ್ಧರಿಸಿದೆ. ಸರ್ಕಾರದ ಸವಲತ್ತು ಎಲ್ಲರಿಗೂ ತಲುಪಬೇಕು ಎಂಬುದು ನಮ್ಮ ಗುರಿ ಆಗಿದೆ ಎಂದು ಹೇಳಿದರು.

ಉಳ್ಳಾಲ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ರಫೀಕ್ ಅಂಬ್ಲಮೊಗರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಬೋಳಿಯಾರ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್, ಸುರೇಶ್ ಭಟ್ನಗರ, ಪುರುಷೋತ್ತಮ ಪಿಲಾರ್ ಸುರೇಖಾ ಚಂದ್ರ ಹಾಸ್, ಎನ್.ಎಸ್. ಕರೀಮ್, ಅಬು ಸಮೀರ್, ಗೇರು ನಿಗಮದ ಅಧ್ಯಕ್ಷ ಮಮತಾ ಗಟ್ಟಿ, ಮನ್ಸೂರ್ ಮಂಚಿಲ, ಮುಸ್ತಫಾ ಅಬ್ದುಲ್ಲಾ, ಚಂದ್ರ ಹಾಸ್ ಕರ್ಕೇರಾ, ಚಂದ್ರಿಕಾ ರೈ ಮತ್ತಿತರರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article