ಕಾರಿನ ಮೇಲೆ ಬಿದ್ದ ಮರ: ದಂಪತಿ ಪವಾಡಸದೃಶ ಪಾರು

ಕಾರಿನ ಮೇಲೆ ಬಿದ್ದ ಮರ: ದಂಪತಿ ಪವಾಡಸದೃಶ ಪಾರು

ವಿಟ್ಲ: ವಿಟ್ಲ ಬಳಿಯ ಪಡಿಬಾಗಿಲು ಎಂಬಲ್ಲಿ ಸೋಮವಾರ ಬೆಳಗ್ಗೆ ಚಲಿಸುತ್ತಿದ್ದ ಕಾರಿನ ಮೇಲೆ ಬೃಹತ್ ಮರ ಹಾಗೂ ವಿದ್ಯುತ್ ಕಂಬ ಏಕಾಏಕಿ ಉರುಳಿ ಬಿದ್ದ ಘಟನೆ ನಡೆದಿದ್ದು ಒಳಗಿದ್ದ ದಂಪತಿ ಪವಾಡಸದೃಶ ಅಪಾಯದಿಂದ ಪಾರಾಗಿದ್ದಾರೆ. 

ಅಪಘಾತಕ್ಕೀಡಾಗಿ ಕಾರಿನ ಮುಂಭಾಗ ಜಖಂಗೊಂಡಿದ್ದು, ಒಳಗಿದ್ದ ದಂಪತಿ ಪವಾಡಸದೃಶ ಪಾರಾಗಿದ್ದಾರೆ. ಸೋಮವಾರ ಬೆಳಗ್ಗೆ ಕುದ್ದುಪದವು ಕಡೆಯಿಂದ ವಿಟ್ಲ ಕಡೆಗೆ ಸ್ವಿಫ್ಟ್ ಕಾರಿನಲ್ಲಿ ದಂಪತಿ ಪ್ರಯಾಣಿಸುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. 

ಪಡಿಬಾಗಿಲು ಸಮೀಪ ಕಾರು ಚಲಿಸುತ್ತಿದ್ದಂತೆ ರಸ್ತೆ ಬದಿಯಲ್ಲಿದ್ದ ಬೃಹತ್ ಮರ ಮೊದಲು ವಿದ್ಯುತ್ ತಂತಿ ಹಾಗೂ ಕಂಬದ ಮೇಲೆ ಉರುಳಿ ಬಿದ್ದಿದೆ. ಮರದ ಭಾರಕ್ಕೆ ವಿದ್ಯುತ್ ತಂತಿಯೊಂದಿಗೆ, ಅದರ ಪಕ್ಕದಲ್ಲೇ ಇದ್ದ ವಿದ್ಯುತ್ ಕಂಬವೂ ಬೇರು ಸಹಿತ ಕಿತ್ತುಕೊಂಡು ಹೆದ್ದಾರಿಯಲ್ಲಿ ಸಾಗುತ್ತಿದ್ದ ಸ್ವಿಫ್ಟ್ ಕಾರಿನ ಮೇಲೆ ಬಿದ್ದಿದೆ. ಏಕಾಏಕಿ ಮರ ಮತ್ತು ವಿದ್ಯುತ್ ಕಂಬ ಒಟ್ಟಿಗೇ ಕಾರಿನ ಮುಂಭಾಗಕ್ಕೆ ಬಿದ್ದಿದ್ದು ಕಾರಿನ ಬಾನೆಟ್ ಭಾಗ ನಜ್ಜುಗುಜ್ಜಾಗಿದೆ. 

ಘಟನೆಯಿಂದಾಗಿ ರಾಜ್ಯ ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ವಿಟ್ಲ ಪೊಲೀಸರು ಹಾಗೂ ಮೆಸ್ಕಾಂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಸ್ಥಳೀಯರ ಸಹಕಾರದಲ್ಲಿ ಕಾರ್ಯಾಚರಣೆ ನಡೆಸಿದ್ದು, ಹೆದ್ದಾರಿಯಲ್ಲಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article