ಕೋತಿ ಸೆರೆಗೆ ಆಗ್ರಹ
Monday, June 29, 2026
ಮಂಗಳೂರು: ಕಳೆದ ಹಲವಾರು ದಿನಗಳಿಂದ ನಿರಂತರವಾಗಿ ನಗರದ ಮಣ್ಣಗುಡ್ಡೆ ಸಮೀಪದ ಕಾಂತರಾಜ್ ಲೇನ್ ನಿವಾಸಿಗಳ ನಿದ್ದೆಗೆಡಿಸಿದ್ದ ಕೋತಿಯನ್ನು ಸೆರೆ ಹಿಡಿಯುವ ಕಾರ್ಯಾಚರಣೆಯನ್ನು ಅರಣ್ಯ ಇಲಾಖೆ ಸದ್ಯ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.
ಒಂದು ವಾರದಿಂದ ನಾಲ್ವರು ಸಿಬಂದಿ ಸ್ಥಳದಲ್ಲಿ ಇದ್ದು ಕೋತಿ ಸೆರೆ ಹಿಡಿಯಲು ಕಸರತ್ತು ನಡೆಸಿದ್ದರು. ಆದರೆ ಬೋನು ಇಟ್ಟು ಬಲೆ ಬೀಸಿದರೂ ಕೋತಿ ಮರದಿಂದ ಇಳಿಯದೆ ಅರಣ್ಯ ಇಲಾಖೆ ಸಿಬಂದಿಗೆ ಚಳ್ಳೆ ಹಣ್ಣು ತಿನ್ನಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ.
ಇನ್ನು ಮಂಗಗಳ ಸೆರೆಗೆ ಹೆಚ್ಚಿನ ಮುತುವರ್ಜಿ ವಹಿಸಿ ಕ್ರಮ ತೆಗೆದುಕೊಳ್ಳಬೇಕೆಂದು ಸ್ಥಳೀಯ ನಾಗರಿಕರು ಆಗ್ರಹಿಸಿದ್ದಾರೆ.